ETV Bharat / sports

ರಸೆಲ್​ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ​ಮಾಡಿ, 60 ಎಸೆತಗಳನ್ನೆದುರಿಸಿದರೆ ದ್ವಿಶತಕ​ ಗ್ಯಾರಂಟಿ: ಡೇವಿಡ್​ ಹಸ್ಸಿ - ಕೋಲ್ಕತ್ತಾ ನೈಟ್​ ರೈಡರ್ಸ್​

ಈಗಾಗಲೇ ಆರ್​ಸಿಬಿ ತಂಡದಲ್ಲಿ ವಿಂಡೀಸ್​ ದಿಗ್ಗಜ ಕ್ರಿಸ್​ಗೇಲ್​ 175 ರನ್​​ ದಾಖಲಿಸಿರುವುದು ಇಲ್ಲಿಯವರೆಗೆ ಅತಿ ಹೆಚ್ಚು ವೈಯಕ್ತಿಕ ಗರಿಷ್ಠ ರನ್​ ಆಗಿದೆ. ಆದರೆ ಕಳೆದ ವರ್ಷ ಅಬ್ಬರಿಸಿದ್ದ ರಸೆಲ್​ ದ್ವಿಶತಕ ದಾಖಲಿಸಲು ಸಮರ್ಥರು ಎಂಸು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.

ಡೇವಿಡ್​ ಹಸ್ಸಿ
ಡೇವಿಡ್​ ಹಸ್ಸಿ
author img

By

Published : Sep 7, 2020, 4:49 PM IST

Updated : Sep 7, 2020, 5:39 PM IST

ನವದೆಹಲಿ: ಹೊಡಿಬಡಿ ಆಟಕ್ಕೆ ಹೆಸರಾಗಿರುವ ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸುವುದೇ ಒಂದು ದೊಡ್ಡ ಸಾಹಸ. ಆದರೆ ಕೆಕೆಆರ್​ ಮೆಂಟರ್​ ಡೇವಿಡ್​ ಹಸ್ಸಿ ಪ್ರಕಾರ ರಸೆಲ್​ 3ನೇ ಕ್ರಮಾಂಕದಲ್ಲಿ ಆಡಿ 60 ಎಸೆತಗಳನ್ನೆದುರಿಸಿದರೆ ದಿಶತಕ ದಾಖಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಆರ್​ಸಿಬಿ ತಂಡದಲ್ಲಿ ವಿಂಡೀಸ್​ ದಿಗ್ಗಜ ಕ್ರಿಸ್​ ಗೇಲ್​ 175 ರನ್​​ ದಾಖಲಿಸಿರುವುದು ಇಲ್ಲಿಯವರೆಗಿನ ಅತಿ ಹೆಚ್ಚು ವೈಯಕ್ತಿಕ ಗರಿಷ್ಠ ರನ್​ ಆಗಿದೆ. ಆದರೆ ಕಳೆದ ವರ್ಷ ಅಬ್ಬರಿಸಿದ್ದ ರಸೆಲ್​ ದ್ವಿಶತಕ ದಾಖಲಿಸಲು ಸಮರ್ಥರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.

"ಆ್ಯಂಡ್ರೆ ರಸೆಲ್​ ಅವರಿಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಿ, ಅವರು 60 ಎಸೆತಗಳನ್ನು ಎದುರಿಸಿದರೆ ಖಂಡಿತ ದ್ವಿಶತಕ ಸಿಡಿಸಲಿದ್ದಾರೆ. ಇದರಿಂದ ನಮ್ಮ ತಂಡಕ್ಕೆ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಆ್ಯಂಡ್ರೆ ರಸೆಲ್​
ಆ್ಯಂಡ್ರೆ ರಸೆಲ್​

ಕಳೆದ ವರ್ಷ ರಸೆಲ್​ ಪಾಲಿಗೆ ಅದ್ಭುತವಾಗಿತ್ತು. ಅವರು ಎಲ್ಲಾ ತಂಡಗಳಿಗೂ ತಮ್ಮ ಬಿರುಸಿನ ಬ್ಯಾಟಿಂಗ್​ನಿಂದ ಆಘಾತವನ್ನುಂಟು ಮಾಡಿದ್ದರು. ಅವರಷ್ಟೇ ಅಲ್ಲ, ಇಡೀ ತಂಡ ಉತ್ತಮ ಸಂಯೋಜನೆಯಿಂದ ಕೂಡಿದೆ. ಯಾರು ಬೇಕಾದರೂ ಯಾವ ಜವಾಬ್ದಾರಿಯನ್ನಾದರೂ ನಿರ್ವಹಿಸಲು ಸಮರ್ಥರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ರಸೆಲ್​ 13 ಪಂದ್ಯಗಳಿಂದ 204.81 ಸ್ಟ್ರೈಕ್​ರೇಟ್​ನಲ್ಲಿ 510 ರನ್​ ಸಿಡಿಸಿದ್ದರು. ಇದರಲ್ಲಿ 4 ಅರ್ಧಶತಕ ಸೇರಿತ್ತು.

Last Updated : Sep 7, 2020, 5:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.