ಆಗ್ರಾ( ಉತ್ತರಪ್ರದೇಶ): ಭಾರತದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಇಂದು ಮಧ್ಯಾಹ್ನ ತಮ್ಮ ಕುಟುಂಬಸ್ಥರೊಂದಿಗೆ ತಾಜ್ಮಹಲ್ಗೆ ಭೇಟಿ ನೀಡಿದರು.
ಒಂದು ಗಂಟೆಗಳ ಕಾಲ ತಾಜ್ ಮಹಲ್ ವೀಕ್ಷಣೆ ಮಾಡಿದ ಲಕ್ಷ್ಮಣ್ ಕುಟುಂಬ ಮಾರ್ಗದರ್ಶಕರಿಂದ ತಾಜ್ ಮಹಲ್ನ ಇತಿಹಾಸವನ್ನು ತಿಳಿದುಕೊಂಡರು. ಈ ವೇಳೆ ವಿ.ವಿ.ಎಸ್ ಲಕ್ಷ್ಮಣ್ ಅವರ ಅಭಿಮಾನಿಗಳು ಹಾಗೂ ಪ್ರವಾಸಿಗರು ಮುಗಿಬಿದ್ದು ಸೆಲ್ಫಿ ತೆಗೆಸಿಕೊಂಡರು.
ಇನ್ನೂ ಇತರ ಪ್ರವಾಸಿಗರಂತೆ ಲಕ್ಷ್ಮಣ್ ಕುಟುಂಬಸ್ಥರು ಕೂಡಾ ಡಯಾನಾ ಸೀಟಿನ ಬಗ್ಗೆ ಆಕರ್ಷಿತರಾಗಿ, ಅಲ್ಲಿ ವಿಭಿನ್ನ ರೀತಿಯಲ್ಲಿ ಫೋಟೋ ತೆಗೆಸಿಕೊಂಡರು.