ಮುಂಬೈ: 2019ರ ವಿಶ್ವಕಪ್ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೆ ಆಳವಾದ ನೆನೆಪುಗಳನ್ನು ಒದಗಿಸಿದೆ. ಈ ವಿಶ್ವಕಪ್ ಹಿಂದಿನ ವಿಶ್ವಕಪ್ಗಳಿಗಿಂತ ವಿಶೇಷವಾಗಿತ್ತು. ಏಕೆಂದರೆ ಈ ಬಾರಿ ಟಾಪ್ 10 ತಂಡಗಳು ಮಾತ್ರ ಭಾಗವಹಿಸಿದ್ದರಿಂದ ಪ್ರತಿ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು. ಆದರೆ ವಿಶ್ವಕಪ್ ಫೈನಲ್ ಪಂದ್ಯ ಮಾತ್ರ ರೋಚಕತೆಯಿಂದ ಕೂಡಿತ್ತು. ಇಂಗ್ಲೆಂಡ್ ಅದೃಷ್ಟದ ಬಲದಿಂದ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.
ಕೂತೂಹಲಕಾರಿಯಾಗಿದ್ದ ಟೂರ್ನಿಯಲ್ಲಿ ರೋಚಕತೆ, ಕ್ರಿಕೆಟ್ ಹುಚ್ಚುತನದ ಮಧ್ಯೆ ಕೆಲವು ಬೆರಗುಗೊಳಿಸುವಂತಹ ಮಹಿಳಾ ನಿರೂಪಕಿಯರು ತಮ್ಮದೇ ಆದ ಇವೆಂಟ್ಗಳ ಮೂಲಕ ಆಂಗ್ಲರ ನಾಡಿನಲ್ಲಿ ಗಮನ ಸೆಳೆದಿದ್ದರು. ಕ್ರಿಕೆಟ್ ವಿಶ್ಲೇಷಣೆ, ಮನರಂಜನೆಯನ್ನು ನೀಡಿದ್ದ ಕೆಲವು ನಿರೂಪಕಿಯರು ತಮ್ಮ ಕ್ರಿಕೆಟ್ ಜರ್ನಿಯ ಕೆಲವು ನೆನೆಪುಗಳನ್ನು ಈ ಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ.
ಈ ಸಂದರ್ಶನದಲ್ಲಿ ಭಾರತ ಪ್ರೊಫೆಷನಲ್ ವಾಯ್ಸ್ ಓವರ್ ಆರ್ಟಿಸ್ಟ್ ಹಾಗೂ ಅದ್ಭುತ ಧ್ವನಿಯ ಮೂಲಕ ಮೋಡಿ ಮಾಡುವ ರಿಧಿಮಾ ಪಟಾಕ್, ವಿಶ್ವದ ಹಲವಾರು ದೊಡ್ಡ ಕ್ರಿಕೆಟ್ ಟೂರ್ನಮೆಂಟ್ಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುವ ಪಾಕಿಸ್ತಾನದ ಜನಪ್ರಿಯ ಕ್ರೀಡಾ ನಿರೂಪಕಿ ಝೈನಬ್ ಅಬ್ಬಾಸ್, ಹಾಗೂ ಅಫ್ಘಾನಿಸ್ತಾನದ ಕ್ರೀಡಾ ನಿರೂಪಕಿ ದಿವಾ ಪತಂಗ್ ಪಾಲ್ಗೊಂಡಿದ್ದರು.
ಈ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮೂರು ಪ್ರಸಿದ್ಧ ನಿರೂಪಕಿಯರು ತಮ್ಮ ವೃತ್ತಿ ಜೀವನ , 2019ರ ವಿಶ್ವಕಪ್ನಲ್ಲಿ ತಮ್ಮ ಅನುಭವ, ಮೆಗಾ ಇವೆಂಟ್ನಲ್ಲಿ ಒಂದಾದಾಗ ತಮ್ಮ ಸ್ನೇಹ ಹಾಗೂ ಸಂಸ್ಕೃತಿಗಳನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬುದರ ಬಗ್ಗೆ ಸುದೀರ್ಘ ಸಂದರ್ಶನದ ವೇಳೆ ಹಂಚಿಕೊಂಡಿದ್ದಾರೆ.
ಲಾಕ್ಡೌನ್ನಲ್ಲಿ ಸಮಯ ಕಳೆದದ್ದು ಹೇಗೆ?
ಈ ಪ್ರಶ್ನೆಗೆ ಉತ್ತರಿಸಿದ ಪಾಕಿಸ್ತಾನದ ಝೈನಬ್, ಲಾಕ್ಡೌನ್ ವೇಳೆ ಜೀವನ ಕಷ್ಟಕರವಾಗಿತ್ತು ಎಂದಿದ್ದಾರೆ. ಮೊದಲಾದರೆ ಪಾಕಿಸ್ತಾನ ತಂಡ ಎಲ್ಲೇ ಪ್ರವಾಸ ಕೈಗೊಂಡರು ನಾನು ಅವರೊಟ್ಟಿಗೆ ತೆರಳುತ್ತಿದ್ದೆ. ಆದರೆ ಲಾಕ್ಡೌನ್ ವೇಳೆ ಮನೆಯಲ್ಲಿಯೇ ಇರಬೇಕಿತ್ತು.ಈ ಲಾಕ್ಡವನ್ ಕೆಲವು ರೀತಿಯಲ್ಲಿ ಅನುಕೂಲ ಹಾಗೂ ಇನ್ನು ಕೆಲವು ರೀತಿಯಲ್ಲಿ ಆನಾನುಕೂಲಕರವಾಗಿತ್ತು.ಅದೃಷ್ಟವಶಾತ್ ಕ್ರಿಕೆಟ್ ಕೊನೆಗೂ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
![ಝೈನಬ್ ಅಬ್ಬಾಸ್](https://etvbharatimages.akamaized.net/etvbharat/prod-images/8362181_zainab.jpg)
ಇದೇ ಪ್ರಶ್ನೆಗೆ ಉತ್ತರಿಸಿದ ದಿವಾ ಪತಂಗ್ , ಪ್ರಸ್ತುತ ನಾನು ಇಡೀ ಪ್ರಪಂಚವೇ ಕಷ್ಟ ಪರಿಸ್ಥಿತಿಯಲ್ಲಿದೆ. ಸದ್ಯಕ್ಕೆ ನಾನು ಲಂಡನ್ನಲ್ಲಿದ್ದೇನೆ. ಆದರೆ ಇಲ್ಲಿಂದ ಕೆಲಸ ಮಾಡುವುದು ತುಂಬಾ ಕಷ್ಟವಾಗಿದೆ ಎಂದರು.
ಇನ್ನು ಅಫ್ಘಾನಿಸ್ತಾನ್ ಕ್ರೀಡಾ ನಿರೂಪಕಿಯಾಗಿ ನಿಮ್ಮ ಪ್ರಯಾಣ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು" ಕ್ರೀಡಾ ನಿರೂಪಕಿಯಾಗಿ ಇರುವುದು ಮಹಿಳೆಯಾದ ನನಗೆ ತುಂಬಾ ಕಷ್ಟದ ಕೆಲಸ. ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಸಂಪೂರ್ಣವಾಗಿ ಪುರುಷರ ಪ್ರಾಬಲ್ಯವಾದ ಕ್ರೀಡೆ. ಆರಂಭದಲ್ಲಿ ನನ್ನ ತಂದೆ ತಾಯಿ ಇದಕ್ಕೆ ಬೆಂಬಲ ನೀಡಿರಲಿಲ್ಲ. 2019ರ ವಿಶ್ವಕಪ್ನಲ್ಲಿ ಕಾರ್ಯನಿರ್ವಹಿಸಿದ ಮೇಲೆ ಅವರು ಒಪ್ಪಿಕೊಂಡರು. ಏಕೆಂದರೆ ಈ ಇವೆಂಟ್ ನಡೆದದ್ದು ಇಂಗ್ಲೆಂಡ್ನಲ್ಲಿ ಎಂಬ ಕಾರಣಕ್ಕೆ. ಇಲ್ಲಿ ಇರುವುದಕ್ಕೆ ನನ್ನ ತಂದೆ ತಾಯಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಒಂದು ಸಾರಿ ಅಫ್ಘಾನಿಸ್ತಾನದಲ್ಲಿ ನಾನು ತುಂಬಾ ಸಮಸ್ಯೆ ಎದುರಿಸಿದ್ದೆ. ಏಕೆಂದರೆ ಅಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾರು ಮಹಿಳಾ ನಿರೂಪಕಿಯರು ಇಲ್ಲ ಎಂದು ಅವರು ತಮ್ಮ ಪಯಣವನ್ನು ತಿಳಿಸಿದರು.
ವಿಶ್ವಕಪ್ನಲ್ಲಿ ನಿಮಗೆ ಅತ್ಯುತ್ತಮವಾದ ಕ್ಷಣ ಯಾವುದು?
ಝೈನಬ್: ನನ್ನ ಪ್ರಕಾರ ಹಲವಾರು ಒಳ್ಳೆಯ ಪಂದ್ಯಗಳಿವೆ. ಅವುಗಳಲ್ಲಿ ಒಂದನ್ನ ಆಯ್ಕೆ ಮಾಡಲು ನನ್ನಿಂದಾಗದು. ಆದರೆ ಫೈನಲ್ ಪಂದ್ಯ ತುಂಬಾ ಆಸಕ್ತಿ ಮೂಡಿಸಿತ್ತು. ನಾನು ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದೆ. ಇನ್ನು ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಕೂಡ ರೋಚಕವಾಗಿ ಕೂಡಿತ್ತು. ಎರಡು ಸೆಮಿಫೈನಲ್ ಪಂದ್ಯಗಳು ಉತ್ತಮವಾಗಿದ್ದವು. ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ನಾನು ಆನಂದಿಸಿದ್ದೆ. ಎಲ್ಲರೂ ಕಿವೀಸ್ ಗೆಲ್ಲುತ್ತದೆ ಎಂದು ಭಾವಿಸಿದ್ದರು. ಆದರೆ ಪಾಕಿಸ್ತಾನ ಗೆಲುವು ಸಾಧಿಸಿತ್ತು. ನನಗೆ ಆ ಪಂದ್ಯ ಇಷ್ಟವಾಗಿತ್ತು. ಏಕೆಂದರೆ ಅಲ್ಲಿ ವಾತಾವಾರಣ ಬಹಳ ಕೂತೂಹಲ ಹಾಗೂ ಉತ್ಸಾಹಬರಿತವಾಗಿತ್ತು ಎಂದು ಅವರು ತಿಳಿಸಿದ್ದಾರೆ.
![ರಿಧಿಮಾ ಪಟಾಕ್](https://etvbharatimages.akamaized.net/etvbharat/prod-images/8362181_ridhima-pathak.jpg)
ವಿಶ್ವಕಪ್ ನಿಮ್ಮ ಪ್ರಕಾರ ಹೇಗಿತ್ತು, ನಿಮಗೆ ಮರೆಯಲಾಗದ ವಿಶ್ವಕಪ್ ಕ್ಷಣ ಯಾವುದು?
ರಿಧಿಮಾ ಪಟಾಕ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯವೊಂದನ್ನು ಬಿಟ್ಟು... ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ನನಗೆ ಅತ್ಯಂತ ಸ್ಮರಣೀಯ ಎನಿಸಿದೆ. ಏಕೆಂದರೆ ಅಫ್ಘಾನಿಸ್ತಾನ ಪಂದ್ಯದಲ್ಲಿ ವಿಜಯ ಸಾಧಿಸುವ ಹಂತಕ್ಕೆ ಬಂದಿತ್ತು. ಆ ಪಂದ್ಯಕ್ಕೂ ಮುನ್ನ ನಾನು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಲು ಅವಕಾಶ ಸಿಕ್ಕಿತ್ತು. ಉಭಯ ತಂಡಗಳ ಅಭಿಮಾನಗಳ ನಡುವೆ ಪೈಪೋಟಿಯಿರುತ್ತದೆ. ಆದರೆ ಅಫ್ಘಾನಿಸ್ತಾನ ಮತ್ತು ಭಾರತ ತಂಡಗಳ ಪಂದ್ಯದಲ್ಲಿ ಪ್ರೇಕ್ಷಕರ ನಡುವೆ ಪೈಪೋಟಿ ಇರಲಿಲ್ಲ. ಅವರು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿತ್ತಿದ್ದರು. ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಾಗ ನಾನು ತುಂಬಾ ಉತ್ಸಾಹಿತಳಾಗಿದ್ದೆ ಎಂದು ವಿವರಿಸಿದರು.
ಈ ಮೂವರು ನಿರೂಪಕಿಯರು ಮತ್ತಷ್ಟು ವಿಶ್ವಕಪ್ನ ಸುಂದರ ನೆನಪುಗಳನ್ನು ಈ ಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ