ನವದೆಹಲಿ: ಪಾಕಿಸ್ತಾನದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ 267 ರನ್ಗಳಿಸಿರುವ ಜಾಕ್ ಕ್ರಾಲೆ ಅವರನ್ನು ಕ್ಲಾಸ್ ಪ್ಲೇಯರ್ , ಇವರು ಇಂಗ್ಲೆಂಡ್ ತಂಡಕ್ಕೆ ಸೂಕ್ತವಾದ 3ನೇ ಕ್ರಮಾಂಕದ ಬ್ಯಾಟ್ಸ್ಮನ್ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ವೃತ್ತಿ ಜೀವನದ ಮೊದಲ ಶತಕವನ್ನೇ ದ್ವಿಶತಕವಾಗಿ ಬದಲಾಯಿಸಿದ 22 ವರ್ಷದ ಕ್ರಾಲೆ ಭವಿಷ್ಯದಲ್ಲಿ ಇಂಗ್ಲೆಂಡ್ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಅವಕಾಶ ಪಡೆಯಲಿ ಎಂದು ಆಶಿಸಿದ್ದಾರೆ.
ಕೇವಲ 8 ನೇ ಟೆಸ್ಟ್ ಆಡುತ್ತಿರುವ ಯುವ ಬ್ಯಾಟ್ಸ್ಮನ್ 267 ರನ್ಗಳಿಸುವ ಮೂಲಕ ಜೋಸ್ ಬಟ್ಲರ್(152) ಜೊತೆಗೂಡಿ 5ನೇ ವಿಕೆಟ್ಗೆ 359 ರನ್ಗಳ ಬೃಹತ್ ಜೊತೆಯಾಟ ನಡೆಸಿದ್ದರು. 393 ಎಸೆತಗಳನ್ನು ಎದುರಿಸಿದ ಕ್ರಾಲೆ ಇಂಗ್ಲೆಂಡ್ ಪರ 10ನೇ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
-
England have found a very good no 3 in Crawley.. looks a class player .. hope to see him in all formats regularly @nassercricket @ECB_cricket
— Sourav Ganguly (@SGanguly99) August 22, 2020 " class="align-text-top noRightClick twitterSection" data="
">England have found a very good no 3 in Crawley.. looks a class player .. hope to see him in all formats regularly @nassercricket @ECB_cricket
— Sourav Ganguly (@SGanguly99) August 22, 2020England have found a very good no 3 in Crawley.. looks a class player .. hope to see him in all formats regularly @nassercricket @ECB_cricket
— Sourav Ganguly (@SGanguly99) August 22, 2020
ಕ್ರಾಲೆ ಇನ್ನಿಂಗ್ಸ್ಗೆ ಟ್ವಿಟರ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಗಂಗೂಲಿ, ಇಂಗ್ಲೆಂಡ್ 3ನೇ ಕ್ರಮಾಂಕಕ್ಕೆ ಅತ್ಯುತ್ತಮವಾದ ಆಟಗಾರರನ್ನು ಕಂಡುಕೊಂಡಿದೆ. ಆತನೊಬ್ಬ ಕ್ಲಾಸ್ ಪ್ಲೇಯರ್. ಅವನ್ನು ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ನೋಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದು, ನಾಸಿರ್ ಹುಸೇನ್ ಹಾಗೂ ಇಂಗ್ಕೆಂಡ್ ಕ್ರಿಕೆಟ್ ಬೋರ್ಡ್ಗೆ ಟ್ಯಾಗ್ ಮಾಡಿದ್ದಾರೆ.
ಕ್ರಾಲೆ-ಬಟ್ಲರ್ 359 ರನ್ಗಳ ಜೊತೆಯಾಟ 5ನೇ ವಿಕೆಟ್ಗೆ ಇಂಗ್ಲೆಂಡ್ ಪರ ದಾಖಲಾದ ಅತಿಹೆಚ್ಚು ರನ್ಗಳ ಜೊತೆಯಾಟದ ದಾಖಲೆಯಾಗಿದೆ. ಒಟ್ಟಾರೆ 8ನೇ ವೈಯಕ್ತಿಕ ಗರಿಷ್ಠ ರನ್ಗಳ ಜೊತೆಯಾಟವಾಗಿದೆ.