ನವದೆಹಲಿ: ಎದೆ ನೋವಿನ ಕಾರಣ ದೆಹಲಿಯ ಫೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಭಾರತದ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ, ಕಪಿಲ್ ದೇವ್ ಆಸ್ಪತ್ರೆಯ ವಾರ್ಡ್ನಲ್ಲಿ ತಮ್ಮ ಪುತ್ರಿ ಆಮ್ಯಾ ಜೊತೆ ಕುಳಿತಿರುವ ಫೋಟೋ ಟ್ವೀಟ್ ಮಾಡಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ಕಪಿಲ್ ಪಾಜಿ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
-
Kapil Pa ji is OK now after his operation and sitting with his daughter AMYA. Jai mata di.@therealkapildev 🙏🏽🙏🏽 pic.twitter.com/K5A9eZYBDs
— Chetan Sharma (@chetans1987) October 23, 2020 " class="align-text-top noRightClick twitterSection" data="
">Kapil Pa ji is OK now after his operation and sitting with his daughter AMYA. Jai mata di.@therealkapildev 🙏🏽🙏🏽 pic.twitter.com/K5A9eZYBDs
— Chetan Sharma (@chetans1987) October 23, 2020Kapil Pa ji is OK now after his operation and sitting with his daughter AMYA. Jai mata di.@therealkapildev 🙏🏽🙏🏽 pic.twitter.com/K5A9eZYBDs
— Chetan Sharma (@chetans1987) October 23, 2020
ಕಪಿಲ್ ಕೂಡ ತಮ್ಮ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದು, ಎಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು. ನಿಮ್ಮ ಶುಭ ಹಾರೈಕೆಗಳಿಂದ ನನ್ನ ಹೃದಯತುಂಬಿ ಬಂದಿದೆ. ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಎದೆನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ತಕ್ಷಣವೇ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಈಗ ಹೃದಯ ಬಡಿತ ಹಾಗೂ ಹೃದಯಕ್ಕೆ ರಕ್ತದ ಹರಿಯುವಿಕೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.