ETV Bharat / sports

ಟೆಸ್ಟ್​ ತಂಡಕ್ಕೆ ರೀ ಎಂಟ್ರಿಕೊಟ್ಟ ಸ್ಮಿತ್​, ವಾರ್ನರ್​ ಬ್ಯಾನ್​ಕ್ರಾಫ್ಟ್ - ಆಸ್ಟ್ರೇಲಿಯಾ-ಇಂಗ್ಲೆಂಡ್​

ಏಕದಿನ ಕ್ರಿಕೆಟ್​ಗೆ ಪುನಾರಾಗಮನದ ಬಳಿಕ ಡೇವಿಡ್​ ವಾರ್ನರ್​, ಸ್ಟಿವ್​ ಸ್ಮಿತ್​ ಮತ್ತು ಬ್ಯಾನ್​ಕ್ರಾಫ್ಟ್​ ಆ್ಯಶಸ್​ ಟೆಸ್ಟ್​ ಸರಣಿಗೆ ಆಯ್ಕೆಯಾಗಿದ್ದಾರೆ.

ashes squad
author img

By

Published : Jul 27, 2019, 1:21 PM IST

ಮೆಲ್ಬೋರ್ನ್​: ದಕ್ಷಿಣ ಆಫ್ರಿಕಾ ವಿರುದ್ಧ ಬಾಲ್​ ಟ್ಯಾಂಪರಿಂಗ್​ ಮಾಡಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧದ ನಂತರ ವಾಪಸ್​ ಆಗಿರುವ ಸ್ಮಿತ್​, ವಾರ್ನರ್​ ಹಾಗೂ ಬ್ಯಾನ್​ಕ್ರಾಫ್ಟ್​ ಇಂಗ್ಲೆಂಡ್​ ವಿರುದ್ಧ ನಡೆಯುವ ಆ್ಯಶಸ್​​​ ಟೆಸ್ಟ್​ ಸರಣಿಗೆ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ಮಾರ್ಚ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಸ್ಯಾಂಡ್​ ಪೇಪರ್​ನಿಂದ ಬ್ಯಾನ್​ಕ್ರಾಫ್ಟ್​ ಚೆಂಡನ್ನು ವಿರೂಪಗೊಳಿಸಿದ್ದರು. ಈ ಪ್ರಕರಣ ಸಾಬೀ ತಾದ ಮೇಲೆ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ ನಾಯಕ ಸ್ಮಿತ್​, ಉಪನಾಯಕ ವಾರ್ನರ್​ಗೆ ಒಂದು ವರ್ಷ ಹಾಗೂ ಬ್ಯಾನ್​ಕ್ರಾಫ್ಟ್​ಗೆ 9 ತಿಂಗಳು ​ನಿಷೇಧ ಹೇರಿತ್ತು. ಇದೀಗ ನಿಷೇಧದ ಅವಧಿ ಪೂರ್ಣಗೊಂಡಿರುವುದರಿಂದ ಇಂಗ್ಲೆಂಡ್​ ವಿರುದ್ಧದ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್​ ಸರಣಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ.

ಈಗಾಗಲೇ ಏಕದಿನ ಕ್ರಿಕೆಟ್​​ಗೆ ಪುನರಾಗಮನ ಮಾಡಿದ್ದ ವಾರ್ನರ್​ ಮತ್ತು ಸ್ಮಿತ್​ ಇಬ್ಬರೂ ಭರ್ಜರಿ ಪ್ರದರ್ಶನ ನೀಡಿದ್ದರು. ಇದೀಗ ಟೆಸ್ಟ್​ ಕ್ರಿಕೆಟ್​ಗೆ ಮರಳಿ ತಂಡ ಸೇರಿಕೊಂಡಿದ್ದು ಮತ್ತೆ ಆಸ್ಟ್ರೇಲಿಯಾ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಆ್ಯಶಸ್​ ಸರಣಿಗೆ ಆಸ್ಟ್ರೇಲಿಯ ತಂಡ:

ಟಿಮ್‌ ಪೇನ್‌ (ನಾಯಕ), ಡೇವಿಡ್‌ ವಾರ್ನರ್‌, ಕ್ಯಾಮರೂನ್‌ ಬಾನ್‌ಕ್ರಾಫ್ಟ್, ಮಾರ್ಕಸ್‌ ಹ್ಯಾರಿಸ್‌, ಉಸ್ಮಾನ್‌ ಖವಾಜ, ಸ್ಟೀವ್​ ಸ್ಮಿತ್‌, ಟ್ರೇವಿಸ್‌ ಹೆಡ್‌, ಮಿಚೆಲ್‌ ಮಾರ್ಷ್‌, ಮ್ಯಾಥ್ಯೂ ವೇಡ್‌, ಪ್ಯಾಟ್​ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೆಜಲ್‌ವುಡ್‌, ಮಾರ್ನಸ್‌ ಲಬುಶೇನ್‌, ನಥನ್‌ ಲಿಯೋನ್‌, ಮೈಕಲ್‌ ನೆಸರ್‌, ಜೇಮ್ಸ್‌ ಪ್ಯಾಟಿನ್ಸನ್‌, ಪೀಟರ್‌ ಸಿಡ್ಲ್.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.