ಸಿಡ್ನಿ(ಆಸ್ಟ್ರೇಲಿಯಾ): ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ನಿರ್ಧರಿಸಿ ಆಸಿಸ್ ಕ್ರಿಕೆಟಿಗರು ಆಯೋಜನೆ ಮಾಡಿರುವ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯ ಭಾನುವಾರ ನಡೆಯಲಿದ್ದು, 11 ಆಟಗಾರರ ಎರಡು ತಂಡವನ್ನ ಫೈನಲ್ ಮಾಡಲಾಗಿದೆ.
-
What a lineup for the Bushfire Cricket Bash!
— Cricket Australia (@CricketAus) February 6, 2020 " class="align-text-top noRightClick twitterSection" data="
Less than 200 tickets remain for the CommBank T20I between @AusWomenCricket and @englandcricket, and the Bushfire Cricket Bash.
Get involved at https://t.co/3iqqzeM4BO pic.twitter.com/Rj5vTOws1J
">What a lineup for the Bushfire Cricket Bash!
— Cricket Australia (@CricketAus) February 6, 2020
Less than 200 tickets remain for the CommBank T20I between @AusWomenCricket and @englandcricket, and the Bushfire Cricket Bash.
Get involved at https://t.co/3iqqzeM4BO pic.twitter.com/Rj5vTOws1JWhat a lineup for the Bushfire Cricket Bash!
— Cricket Australia (@CricketAus) February 6, 2020
Less than 200 tickets remain for the CommBank T20I between @AusWomenCricket and @englandcricket, and the Bushfire Cricket Bash.
Get involved at https://t.co/3iqqzeM4BO pic.twitter.com/Rj5vTOws1J
ಈ ಹಿಂದೆ ಬಿಬ್ ಬ್ಯಾಷ್ ಟೂರ್ನಿಯ ಫೈನಲ್ ಪಂದ್ಯ ನಡೆಯುವ ಫೆ.8 ರಂದು ಪಂದ್ಯ ನಡೆಸುವ ಯೋಜನೆ ಮಾಡಲಾಗಿತ್ತು. ಆದರೆ ಫೆ.9ಕ್ಕೆ ಪಂದ್ಯವನ್ನ ಮುಂದೂಡಲಾಗಿದೆ. ಈ ಕಾಣದಿಂದಾಗಿ ಶೇನ್ ವಾರ್ನ್ ಸೇರಿದಂತೆ ಹಲವು ಆಟಗಾರರು ದಿನಾಂಕ ಹೊಂದಾಣಿಕೆ ಆಗದ ಕಾರಣ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
ಪಾಂಟಿಂಗ್ ಇಲೆವೆನ್ ಮತ್ತು ಗಿಲ್‌ಕ್ರಿಸ್ಟ್ ಇಲೆವೆನ್ ತಂಡಗಳ ನಡುವೆ ತಲಾ 10 ಓವರ್ಗಳ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್, ಗಿಲ್‌ಕ್ರಿಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಂದ್ಯದ ಟಿಕೆಟ್‌ನಿಂದ ಸಂಗ್ರಹಿಸಿದ ಹಣವು ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಮನೆಗಳ ಪುನರ್ವಸತಿಗೆ ಬಳಸಲು ನಿರ್ಧರಿಸಲಾಗಿದೆ.
ಪಾಂಟಿಂಗ್ ಇಲೆವೆನ್: ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ರಿಕಿ ಪಾಂಟಿಂಗ್ (ನಾಯಕ), ಎಲಿಸ್ ವಿಲ್ಲಾನಿ, ಬ್ರಿಯಾನ್ ಲಾರಾ, ಫೋಬೆ ಲಿಚ್‌ಫೀಲ್ಡ್, ಬ್ರಾಡ್ ಹಡ್ಡಿನ್ (ಕೀಪರ್), ಬ್ರೆಟ್ ಲೀ, ವಾಸಿಮ್ ಅಕ್ರಮ್, ಡಾನ್ ಕ್ರಿಶ್ಚಿಯನ್, ಲ್ಯೂಕ್ ಹಾಡ್ಜ್. ಕೋಚ್: ಸಚಿನ್ ತೆಂಡೂಲ್ಕರ್
ಗಿಲ್‌ಕ್ರಿಸ್ಟ್ ಇಲೆವೆನ್: ಆಡಮ್ ಗಿಲ್‌ಕ್ರಿಸ್ಟ್ (ನಾಯಕ, ಕೀಪರ್), ಶೇನ್ ವ್ಯಾಟ್ಸನ್, ಬ್ರಾಡ್ ಹಾಡ್ಜ್, ಯುವರಾಜ್ ಸಿಂಗ್, ಅಲೆಕ್ಸ್ ಬ್ಲ್ಯಾಕ್‌ವೆಲ್, ಆಂಡ್ರ್ಯೂ ಸೈಮಂಡ್ಸ್, ಕರ್ಟ್ನಿ ವಾಲ್ಷ್, ನಿಕ್ ರಿಯೊವಾಲ್ಡ್, ಪೀಟರ್ ಸಿಡಲ್, ಫವಾದ್ ಅಹ್ಮದ್, ಇನ್ನೊಬ್ಬರ ಹೆಸರು ಘೋಷಣೆ ಆಗಿಲ್ಲ. ಕೋಚ್: ಟಿಮ್ ಪೈನೆ