ETV Bharat / sports

ಕ್ರಿಕೆಟ್​ನಿಂದ ರಜೆ ಪಡೆದ ಬುಮ್ರಾ: ಗೋವಾದಲ್ಲಿ ಇದೇ ವಾರ ಸಪ್ತಪದಿ ತುಳಿಯಲಿರುವ ವೇಗಿ?

author img

By

Published : Mar 3, 2021, 9:04 PM IST

ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ. ಇದರ ಬೆನ್ನಲ್ಲೇ ಅವರು ಗೋವಾದಲ್ಲಿ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಹರಡಿದೆ.

Bumrah
Bumrah

ಅಹಮದಾಬಾದ್​: ವೈಯಕ್ತಿಕ ಕಾರಣದಿಂದಾಗಿ ಇಂಗ್ಲೆಂಡ್​ ವಿರುದ್ಧದ ಕೊನೆಯ ಟೆಸ್ಟ್​​ ಪಂದ್ಯದಿಂದ ಹೊರಗುಳಿದಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವಾರ ಗೋವಾದಲ್ಲಿ ಅವರು ಮದುವೆ ಮಾಡಿಕೊಳ್ಳಲಿದ್ದು, ಅದರ ತಯಾರಿಗೋಸ್ಕರ ಟೆಸ್ಟ್​ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್​ ವಿರುದ್ಧ ಘೋಷಣೆಯಾಗಿರುವ ಟಿ-20 ಕ್ರಿಕೆಟ್​ನಿಂದಲೂ ಬುಮ್ರಾ ವಿಶ್ರಾಂತಿ ಪಡೆದುಕೊಂಡಿದ್ದರು. ಇದರ ಮಧ್ಯೆ ನಡೆಯಲಿರುವ ಮೂರು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯಿಂದಲೂ ಅವರು ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ರೀತಿಯ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಅಂತಿಮ ಟೆಸ್ಟ್ ಮಾತ್ರವಲ್ಲ, ಏಕದಿನ ಸರಣಿಯಿಂದಲೂ ವೇಗಿ ಬುಮ್ರಾ ಹೊರಕ್ಕೆ?

ಕೋವಿಡ್ ಮಾರ್ಗಸೂಚಿ ಅನುಸರಣೆ ಮಾಡಬೇಕಾಗಿರುವ ಕಾರಣ ಕೆಲ ಕುಟುಂಬಸ್ಥರ ಸಮ್ಮುಖದಲ್ಲಿ ಬುಮ್ರಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.

ಮಾರ್ಚ್​​ 12ರಿಂದ ಭಾರತ-ಇಂಗ್ಲೆಂಡ್ ನಡುವೆ ಐದು ಟಿ-20 ಪಂದ್ಯಗಳ ಸರಣಿ ಶುರುವಾಗಲಿದೆ. ಇದಾದ ನಂತರ ಮಾರ್ಚ್​ 23ರಿಂದ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಏಪ್ರಿಲ್​-ಮೇ ತಿಂಗಳಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಯಲಿದ್ದು, ಬುಮ್ರಾ ನೇರವಾಗಿ ಅದರಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.