ETV Bharat / sports

ಬೌಲರ್​ಗಳ ಮಿಂಚಿನ ದಾಳಿ: ಸೂಪರ್ ನೋವಾಸ್ ತಂಡವನ್ನು 126 ರನ್​ಗಳಿಗೆ ನಿಯಂತ್ರಿಸಿದ ವೆಲಾಸಿಟಿ

author img

By

Published : Nov 4, 2020, 9:19 PM IST

ಏಕ್ತಾ ಬಿಷ್ತ್​ , ಆಲಮ್ ಬೌಲಿಂಗ್ ದಾಳಿಗೆ ಕುಸಿದ ಸೋಪರ್ ನೋವಾಸ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕೆಳದುಕೊಂಡು 126 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಸೂಪರ್ ನೋವಾಸ್ ತಂಡವನ್ನು 126 ರನ್​ಗಳಿಗೆ ನಿಯಂತ್ರಿಸಿದ ವೆಲಾಸಿಟಿ

ಶಾರ್ಜಾ: ವುಮೆನ್ಸ್ ಟಿ20 ಚಾಲೆಂಜ್​​ನ ಮೊದಲ ಪಂದ್ಯದಲ್ಲಿ ವೆಲಾಸಿಟಿ ಬೌಲರ್​ಗಳು ಅದ್ಭುತ ಪ್ರದರ್ಶನದಿಂದ ಹಾಲಿ ಚಾಂಪಿಯನ್ಸ್ ಸೂಪರ್ ನೋವಾಸ್​ ತಂಡವನ್ನು 126 ರನ್​​ಗಳಿಗೆ ನಿಯಂತ್ರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಸೂಪರ್​ನೋವಾಸ್​ ಪ್ರಿಯಾ ಪೂನಿಯಾ(11) ಮತ್ತು ಜೆಮಿಮಾ ರೋಡ್ರಿಗಸ್​(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ನಂತರ ಅಟಪಟ್ಟು ಜೊತೆ ಸೇರಿಕೊಂಡ ನಾಯಕಿ ಕೌರ್ 3ನೇ ವಿಕೆಟ್​ಗೆ 47 ರನ್​ಗಳ ಜೊತೆಯಾಟ ನೀಡಿದರು.

ಸ್ಫೋಟಕ ಆಟಕ್ಕೆ ಮೊರೆಹೋದ ಅಟಪಟ್ಟು 39 ಎಸೆತಗಳಲ್ಲಿ ತಲಾ 2 ಸಿಕ್ಸರ್​ ಹಾಗೂ ಬೌಂಡರಿ ಸಹಿತ 44 ರನ್​ಗಳಿಸಿದರು. ಇವರ ಬೆನ್ನಲ್ಲೇ ಹರ್ಮನ್ ಪ್ರೀತ್ ಕೌರ್​ 31 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇವರಿಬ್ಬರ ನಂತರ ಬಂದ ಬ್ಯಾಟ್ಸ್​ಮನ್​ಗಳನ್ನ ವೆಲಾಸಿಟಿ ಬೌಲರ್​ಗಳು ಕ್ರೀಸ್​ನಲ್ಲಿ ನೆಲೆಯೂರಲು ಬಿಡಲಿಲ್ಲ, ಆಲ್​ರೌಂಡರ್​ ಸಿರಿವರ್ದನೆ ಮಾತ್ರ 18 ರನ್​ಗಳಿಸಿದರು.

ವೆಲಾಸಿಟಿ ಪರ ಏಕ್ತಾ ಬಿಷ್ತ್​ 22ಕ್ಕೆ 3 ವಿಕೆಟ್ ಪಡೆದರೆ, ಇವರಿಗೆ ಬೆಂಬಲ ನೀಡಿದ ಜಹನಾರ ಆಲಮ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.