ETV Bharat / sports

2021ರ ಟಿ-20 ವಿಶ್ವಕಪ್​ ಸುರಕ್ಷಿತವಾಗಿ ನಡೆಸಲು ಬಿಸಿಸಿಐ ಸಿದ್ಧವಿದೆ: ಜಯ್ ಶಾ - ಪುರುಷರ ಟಿ20 ವಿಶ್ವಕಪ್

ಐಸಿಸಿ ಟಿ-20 ವಿಶ್ವಕಪ್​ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ 19 ಕಾರಣ 2022ಕ್ಕೆ ಮುಂದೂಡಲ್ಪಟ್ಟಿತು. ಆದರೆ 7ನೇ ಆವೃತ್ತಿಯ ಟಿ-20 ವಿಶ್ವಕಪ್ ಆತಿಥ್ಯ ಭಾರತಕ್ಕೆ ಸಿಕ್ಕಿದೆ. 2021ರ ಅಕ್ಟೋಬರ್ - ನವೆಂಬರ್​ನಲ್ಲಿ ಈ ವಿಶ್ವಮಟ್ಟದ ಸ್ಪರ್ಧೆಯನ್ನು ಬಿಸಿಸಿಐ ಆಯೋಜಿಸಲಿದೆ.

2021ರ ಟಿ20 ವಿಶ್ವಕಪ್
ಜಯ್ ಶಾ
author img

By

Published : Nov 12, 2020, 4:54 PM IST

Updated : Nov 12, 2020, 10:54 PM IST

ದುಬೈ: ಬಿಸಿಸಿಐ 2021ರಲ್ಲಿ ಐಸಿಸಿ ಟಿ-20 ವಿಶ್ವಕಪ್​ ಮುಂದಿನ ವರ್ಷ ಯಶಸ್ವಿಯಾಗಿ ನಡೆಸಲು ಬಿಸಿಸಿಐ ಬದ್ಧವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ಹೇಳಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್​ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ 19 ಕಾರಣ 2022ಕ್ಕೆ ಮುಂದೂಡಲ್ಪಟ್ಟಿತು. 7ನೇ ಆವೃತ್ತಿಯ ಟಿ-20 ವಿಶ್ವಕಪ್ ಆತಿಥ್ಯ ಭಾರತಕ್ಕೆ ಸಿಕ್ಕಿದೆ. 2021ರ ಅಕ್ಟೋಬರ್ - ನವೆಂಬರ್​ನಲ್ಲಿ ಈ ವಿಶ್ವಮಟ್ಟದ ಸ್ಪರ್ಧೆಯನ್ನು ಬಿಸಿಸಿಐ ಆಯೋಜಿಸಲಿದೆ.

"ಈ ಮಹತ್ವದ ಕ್ರೀಡಾಕೂಟದಲ್ಲಿ ಸಂಬಂಧಪಟ್ಟ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯನ್ನು ನೋಡಿಕೊಳ್ಳುವುದಕ್ಕಾಗಿ ಬಿಸಿಸಿಐ ಸಿದ್ಧವಿದೆ" ಎಂದು ಶಾ ಹೇಳಿಕೆಯನ್ನು ಐಸಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ

ವಿಶ್ವಕಪ್​ಗಾಗಿ ಭಾರತಕ್ಕೆ ಆಗಮಿಸುವ 15 ತಂಡಗಳಿಗೆ ಅತ್ಯುತ್ತಮವಾದ ಆತಿಥ್ಯವನ್ನು ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಭರವಸೆ ನೀಡಿದ್ದಾರೆ.

"ಐಸಿಸಿ ಮತ್ತು ಸದಸ್ಯ ಕ್ರಿಕೆಟ್ ಮಂಡಳಿಗಳಿಗೆ ಭಾರತ ಗೌರವಯುತ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ನಾವು ನಿಮ್ಮ ತವರಿನಲ್ಲಿ ನೀವು ಅನುಭವಿಸಬಹುದಾದ ಆತಿಥ್ಯವನ್ನೇ ನೀಡುವುದಾಗಿ ಭರವಸೆ ನೀಡುತ್ತೇನೆ. ಈ ಸಾಂಕ್ರಾಮಿಕ ಕಾಲದಲ್ಲಿ ಹಲವು ನಿರ್ಬಂಧಗಳಿದ್ದರೂ ಬಿಸಿಸಿಐ ಹೊಸತನ ಮತ್ತು ಹೊಂದಿಕೊಳ್ಳುವ ನೀತಿಯನ್ನು ನಂಬುತ್ತದೆ. ನಾವು ಪ್ರತಿ ಸವಾಲುಗಳನ್ನು ಗೆಲ್ಲುತ್ತೇವೆಂಬ ವಿಶ್ವಾಸವಿದೆ" ಎಂದು ಅವರು ತಿಳಿಸಿದ್ದಾರೆ.

ಐಸಿಸಿ 2 ವರ್ಷಕ್ಕೊಮ್ಮೆ ಟಿ-20 ವಿಶ್ವಕಪ್​ ಆಯೋಜಿಸುತ್ತದೆ. 2016ರಲ್ಲಿ ಕೊನೆಯ ಟಿ20 ವಿಶ್ವಕಪ್​ ನಡೆದಿತ್ತು. 2019ರಲ್ಲಿ ಏಕದಿನ ವಿಶ್ವಕಪ್​ ಆಯೋಜಿಸಿದ್ದರಿಂದ 2020 ಮತ್ತು 2021ರಲ್ಲಿ ಸತತ 2 ವಿಶ್ವಕಪ್​ ಆಯೋಜಿಸಲು ಐಸಿಸಿ ಯೋಜನೆ ರೂಪಿಸಿತ್ತು. ಆದರೆ, ಕೋವಿಡ್​ ಪರಿಣಾಮ ಯೋಜನೆ ವಿಫಲವಾಗಿದೆ. 2020ರ ಬದಲಾಗಿ 2022ಕ್ಕೆ ಒಂದು ಟಿ-20 ವಿಶ್ವಕಪ್​ ಮುಂದೂಡಿದೆ. 2023ರಕ್ಕೆ ಮತ್ತೆ ಭಾರತದಲ್ಲೇ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ.

Last Updated : Nov 12, 2020, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.