ETV Bharat / sports

ವಿದೇಶಿ ಟಿ20 ಲೀಗ್​ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಬೇಕು: ಹರ್ಭಜನ್​ ಸಿಂಗ್​ ಮನವಿ

ಸುರೇಶ್ ರೈನಾ, ಇರ್ಫಾನ್ ಪಠಾಣ್​ ಸೇರಿದಂತೆ ಈಗಾಗಲೇ ಹಲವು ಹಿರಿಯ ಕ್ರಿಕೆಟಿಗರು ವಿದೇಶಿ ಲೀಗ್​ಗಳಲ್ಲಿ ಆಡುವ ಅವಕಾಶ ನೀಡಬೇಕೆಂದು ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಈಗ ಭಾರತೀಯ ಕ್ರಿಕೆಟ್​ ಮಂಡಳಿಗೆ ಹಿರಿಯ ಸ್ಪಿನ್​ ಬೌಲರ್​ ಹರ್ಭಜಜನ ಸಿಂಗ್​ ಸಹ ಮನವಿ ಮಾಡಿದ್ದಾರೆ.

author img

By

Published : Jun 15, 2020, 9:36 AM IST

ವಿದೇಶಿ ಲೀಗ್​ನಲ್ಲಿ ಆಡಲು ಅವಕಾಶಕ್ಕಾಗಿ ಮನವಿ
ಹರ್ಭಜನ್​ ಸಿಂಗ್​

ನವದೆಹಲಿ: ಭಾರತೀಯ ಆಟಗಾರರಿಗೆ ವಿದೇಶಿ ಲೀಗ್​ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಬೇಕೆಂದು ಹಿರಿಯ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಮನವಿ ಮಾಡಿದ್ದಾರೆ.

ವಿದೇಶಿ ಕ್ರಿಕೆಟ್​ ಲೀಗ್​ ಆಡಲು ಬಯಸುವ ಆಟಗಾರರು ಅನುಮತಿಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ/ಮಾನದಂಡಗಳನ್ನು ಜಾರಿಗೆ ತರಬೇಕೆಂದು ಭಾರತೀಯ ಕ್ರಿಕೆಟ್​ ಮಂಡಳಿಗೆ ಹಿರಿಯ ಸ್ಪಿನ್​ ಬೌಲರ್​ ಒತ್ತಾಯಿಸಿದ್ದಾರೆ.

"ಬಿಸಿಸಿಐ ಆಟಗಾರರಿಗೆ ವಿದೇಶಿ ಲೀಗ್​ಗಳಲ್ಲಿ ಆಡಲು ಅವಕಾಶ ನೀಡಬೇಕೆಂದು ನಾನು ಭಾವಿಸುತ್ತೇನೆ. ನೀವು ಭಾರತ ತಂಡದಲ್ಲಿ ಆಡಲು ಬಯಸದ ಗುತ್ತಿಗೆ ರಹಿತ ಆಟಗಾರರಿಗೆ ವಿದೇಶಿ ಲೀಗ್​ಗಳಲ್ಲಿ ಆಡಲು ಅನುಮತಿ ನೀಡಬೇಕು. 50 ಟೆಸ್ಟ್​ ಆಡಿದ ಅಥವಾ 35 ವರ್ಷ ದಾಟಿದಂತಹ ಆಟಗಾರರಿಗೆ ಕ್ರಿಕೆಟ್​ ಮಂಡಳಿ ಅವಕಾಶ ಒದಗಿಸಿಕೊಡಬೇಕು" ಎಂದು ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾರ ಅಧಿಕೃತ ಯುಟ್ಯೂಬ್​ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಹರ್ಭಜನ್​ ಸಿಂಗ್​ ಹೇಳಿದ್ದಾರೆ.

ಈ ಹಿಂದೆ ಆಲ್​ರೌಂಡರ್​ ಇರ್ಫಾನ್ ಪಠಾಣ್​, ಸುರೇಶ್ ರೈನಾ ಕೂಡ ಕನಿಷ್ಠ 30 ವರ್ಷ ದಾಟಿದ ಆಟಗಾರರಿಗೆ ವಿದೇಶಿ ಲೀಗ್​ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಬೇಕು ಎಂದು ವಿನಂತಿಸಿಕೊಂಡಿದ್ದರು.

ವಿದೇಶಿ ಲೀಗ್​ಗಳಲ್ಲಿ ಆಡುವುದಕ್ಕಾಗಿ ಈಗಾಗಲೇ ಯುವರಾಜ್​ ಸಿಂಗ್​ ಬಿಸಿಸಿಐನ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ನಂತರ ಗ್ಲೋಬಲ್​ ಟಿ20 ಲೀಗ್ ಹಾಗೂ ದುಬೈ ಟಿ10 ಲೀಗ್​ನಲ್ಲಿ ಕಾಣಿಸಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.