ETV Bharat / sports

ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಆಸೀಸ್ ಇಂಗಿತ.. ನಿರ್ಧಾರಕ್ಕೆ ಇದು ಸೂಕ್ತ ಸಮಯವಲ್ಲ ಎಂದ ಬಿಸಿಸಿಐ - ಬಿಸಿಸಿಐ ಲೇಟೆಸ್ಟ್​ ನ್ಯೂಸ್

ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಬಗ್ಗೆ ಈಗಲೇ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ.

BCCI official reacts to Cricket Australias proposal
ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಆಸೀಸ್ ಇಂಗಿತ
author img

By

Published : Apr 25, 2020, 8:20 PM IST

ಮುಂಬೈ: ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರ ವರೆಗೆ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಗಡಿ ಮುಚ್ಚಿದೆ. ಆದಾಗ್ಯೂ ಕ್ರಿಕೆಟ್ ಆಸ್ಟ್ರೇಲಿಯಾ ಅಕ್ಟೋಬರ್​ನಲ್ಲಿ ಟಿ-20 ವಿಶ್ವಕಪ್ ಟೂರ್ನಿ ಮತ್ತು ಭಾರತದ ವಿರುದ್ದ ಟೆಸ್ಟ್ ಸರಣಿ ಆಯೋಜಿಸಲು ಉತ್ಸುಕವಾಗಿದೆ.

ವರ್ಷದ ಕೊನೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 4 ಪಂದ್ಯಗಳ ಬದಲು 5 ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆ ಬಗ್ಗೆ ಆಸ್ಟ್ರೇಲಿಯಾ ಸಿಇಒ, ಕೆವಿನ್ ರಾಬರ್ಟ್ಸ್​ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬಿಸಿಸಿಐ, ಈ ಸಮಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಲು ತೀರ್ಮಾನ ತೆಗೆದುಕೊಳ್ಳಲು ಇದು ತುಂಬಾ ಬೇಗ ಎನಿಸುತ್ತದೆ. ಈಗಿನ ಪರಿಸ್ಥಿತಿ ಉತ್ತಮವಾಗಿಲ್ಲ, ಅಕ್ಟೋಬರ್​ನಲ್ಲಿ ಎಂತಹ ಪರಿಸ್ಥಿತಿ ಇರುತ್ತದೆ ಎಂದು ಯಾರು ತಿಳಿದಿದ್ದಾರೆ ಎಂದಿದ್ದಾರೆ.

ಈ ವರ್ಷಾಂತ್ಯಕ್ಕೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಸಲು ಉತ್ಸುಕವಾಗಿದ್ದೇವೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಕೆವಿನ್​ ರಾಬರ್ಟ್ಸ್​ ಹೇಳಿದ್ದರು. ಮೈದಾನದೊಳಗೆ ಪ್ರೇಕ್ಷಕರು ಇರಲಿ ಬಿಡಲಿ, ನಾವು ಬಿಸಿಸಿಐ, ಭಾರತೀಯ ಆಟಗಾರರು ಹಾಗೂ ಅವರ ಸಿಬ್ಬಂದಿಯ ಜೊತೆಗೆ ಕ್ರಿಕೆಟ್​ ಜಗತ್ತನ್ನೇ ಪ್ರೇರೇಪಿಸುವಂತಹ ಸರಣಿ ಹಮ್ಮಿಕೊಳ್ಳಲು ಬಯಸುತ್ತೇವೆ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.