ETV Bharat / sports

ಕೇಂದ್ರದ ನಿರ್ಧಾರದ ಮೇಲೆ ಐಪಿಎಲ್​ ಭವಿಷ್ಯ: ಮುಚ್ಚಿದ ಕ್ರೀಡಾಂಗಣದಲ್ಲಿ ಟೂರ್ನಿ?

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೇಲೆ ಕೊರೊನಾ ಕರಿನೆರಳು ಬಿದ್ದಿದ್ದು, ಟೂರ್ನಿ ಆಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಇದರ ಭವಿಷ್ಯ ನಿರ್ಧಾರಗೊಳ್ಳಲಿದೆ.

author img

By

Published : Apr 12, 2020, 2:16 PM IST

IPL 2020
IPL 2020

ನವದೆಹಲಿ: ದೇಶದಲ್ಲಿ ಲಾಕ್​ಡೌನ್​ ವಿಸ್ತರಣೆಗೊಂಡಿರುವ ಕಾರಣ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೇಲೆ ಮತ್ತಷ್ಟು ಕರಿನೆರಳು ಬಿದ್ದಿದ್ದು, ಏಪ್ರಿಲ್​​ 15ಕ್ಕೆ ಮುಂದೂಡಿಕೆಯಾಗಿದ್ದ ಈ ಟೂರ್ನಿ ಆರಂಭಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿದೆ.

ಮಾರ್ಚ್​​ 29ರಂದು ಆರಂಭಗೊಳ್ಳಬೇಕಾಗಿದ್ದ ಈ ಟೂರ್ನಿ ಕೊರೊನಾ ಭೀತಿಯಿಂದಾಗಿ ಏಪ್ರಿಲ್​ 15ರವರೆಗೆ ಮುಂದೂಡಿಕೆಯಾಗಿತ್ತು. ಇದೀಗ ದೇಶದಲ್ಲಿ 15 ದಿನ ಹೆಚ್ಚುವರಿ ಲಾಕ್​ಡೌನ್​ ವಿಸ್ತರಣೆಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಐಪಿಎಲ್​ ಭವಿಷ್ಯ ನಿಂತಿದೆ.

ಏಪ್ರಿಲ್​ 15ರ ನಂತರ ಎಲ್ಲ ಫ್ರಾಂಚೈಸಿಗಳೊಂದಿಗೆ ಭಾರತೀಯ ಕ್ರಿಕೆಟ್​ ಮಂಡಳಿ ಸಭೆ ನಡೆಸುವ ಸಾಧ್ಯತೆ ಇದೆ. ಇದರ ಜತೆಗೆ ಕೇಂದ್ರ ಸರ್ಕಾರದಿಂದ ನಿರ್ದೇಶನ ಪಡೆದುಕೊಂಡು ಐಪಿಎಲ್​ ನಡೆಸುವ ಕುರಿತು ಅಥವಾ ಮುಂದೂಡಿಕೆ ಮಾಡುವ ಕುರಿತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಇದೇ ವರ್ಷ ಅಕ್ಟೋಬರ್​ ತಿಂಗಳಲ್ಲಿ ಆಯೋಜನೆಗೊಂಡಿರುವ ವಿಶ್ವಕಪ್​ ಮುಂದೂಡಿಕೆಯಾದರೆ ಈ ವರ್ಷದ ಅಂತ್ಯದಲ್ಲಿ ಐಪಿಎಲ್​ ನಡೆಸುವ ಸಾಧ್ಯತೆ ಇದೆ. ಆದರೆ ಯಾವುದೇ ಕಾರಣಕ್ಕೂ ವಿಶ್ವಕಪ್​ ಮುಂದೂಡಿಕೆ ಇಲ್ಲ ಎಂದ ಐಸಿಸಿ ತಿಳಿಸಿದೆ.

ಇನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಐಪಿಎಲ್​ ಪಂದ್ಯ ನಡೆಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದ್ದು, ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬ ಪ್ರಶ್ನೆ ಸಹ ಉದ್ಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.