ETV Bharat / sports

ಸೆ. 26 ರಿಂದ ನ. 8ರವರೆಗೆ ಐಪಿಎಲ್​ ನಡೆಸಲು ಬಿಸಿಸಿಐ ನಿರ್ಧಾರ!... ಅಧಿಕೃತ ಘೋಷಣೆಗೆ ಐಸಿಸಿ ಅಡ್ಡಿ - Sourav Ganguly

ಐಪಿಎಲ್​ನ ಎಲ್ಲ ಪ್ರಾಂಚೈಸಿಗಳು, ಮಾಧ್ಯಮ ಹಕ್ಕು ಪಡೆದಿರುವ ಸ್ಟಾರ್​ ಇಂಡಿಯಾ ಮತ್ತು ಐಪಿಎಲ್​ನ ಇತರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಸೆಪ್ಟೆಂಬರ್​ 26ರಿಂದ ನವೆಂಬರ್​ 8ರ ವರೆಗೆ ಐಪಿಎಲ್​ ಟೂರ್ನಿ ಆಯೋಜಿಸಲು ಬಿಸಿಸಿಐ ಮಾತುಕತೆ ನಡೆಸಿದೆ. ಆದರೆ, ಇದೆಲ್ಲವೂ ಅಧಿಕೃತವಾಗಿ ಟಿ-20 ವಿಶ್ವಕಪ್​ ಮೂಂದೂಡುವುದರ ಮೇಲೆ ಅವಲಂಬಿಸಿದೆ ಎನ್ನಲಾಗಿದೆ.

IPL 2020
ಐಪಿಎಲ್​ 2020
author img

By

Published : Jun 16, 2020, 1:21 PM IST

ಮುಂಬೈ: ಕ್ರಿಕೆಟ್​ ಜಗತ್ತಿನ ಶ್ರೀಮಂತ ಕ್ರಿಕೆಟ್​ ಲೀಗ್ ಆಗಿರುವ ಐಪಿಎಲ್​ ಟೂರ್ನಿಯನ್ನ ಸೆಪ್ಟೆಂಬರ್​ 26 ರಿಂದ ನವೆಂಬರ್​ 8 ರವರೆಗೆ ನಡೆಸಲು ತಯಾರಿ ನಡಸುತ್ತಿದೆ ಎಂದು ತಿಳಿದು ಬಂದಿದೆ.

ಟಿ-20 ವಿಶ್ವಕಪ್​ ನಡೆಯುವುದು ಬಹುತೇಕ ಅನುಮಾನವಾಗಿರುವುದರಿಂದ ಬಿಸಿಸಿಐ 60 ಪಂದ್ಯಗಳ ಐಪಿಎಲ್​ ಟೂರ್ನಿಯನ್ನು 44 ದಿನಗಳಲ್ಲಿ ಮುಗಿಸಲು ಬಿಸಿಸಿಐ ರೂಪುರೇಷೆಗಳನ್ನು ತಯಾರಿಸಿಕೊಳ್ಳುತ್ತಿದೆ. ಮೂಲಗಳ ಪ್ರಕಾರ ಎಲ್ಲ ತಂಡಗಳಿಗೆ ಪ್ರತಿ ಆವೃತ್ತಿಯಲ್ಲಿ ಇರುವಂತೆ ಹೋಮ್ ಕ್ರೀಡಾಂಗಣಗಳಿರುವುದಿಲ್ಲ. ಬದಲಾಗಿ ಕೇವಲ 5 ಕ್ರೀಡಾಂಗಣದಲ್ಲಿ ಟೂರ್ನಿ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನ ಬಿಸಿಸಿಐ ಬಿಡುಗಡೆ ಮಾಡಿದೆ ಎಂದು ಮುಂಬೈ ಮಿರರ್​ ಹಾಗೂ ಸ್ಪೋರ್ಟ್ಸ್​ ಸೈಡ್ ವೆಬ್​ಸೈಟ್​ ವರದಿ ಮಾಡಿವೆ.

ಐಪಿಎಲ್​ನ ಎಲ್ಲ ಪ್ರಾಂಚೈಸಿಗಳು, ಮಾಧ್ಯಮ ಹಕ್ಕು ಪಡೆದಿರುವ ಸ್ಟಾರ್​ ಇಂಡಿಯಾ ಮತ್ತು ಐಪಿಎಲ್​ನ ಇತರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಸೆಪ್ಟೆಂಬರ್​ 26 ರಿಂದ ನವೆಂಬರ್​ 8ರ ವರೆಗೆ ಐಪಿಎಲ್​ ಟೂರ್ನಿ ಆಯೋಜಿಸಲು ಬಿಸಿಸಿಐ ಮಾತುಕತೆ ನಡೆಸಿದೆ. ಆದರೆ, ಇದೆಲ್ಲವೂ ಅಧಿಕೃತವಾಗಿ ಟಿ-20 ವಿಶ್ವಕಪ್​ ಮೂಂದೂಡುವುದರ ಮೇಲೆ ಅವಲಂಬಿಸಿದೆ ಎನ್ನಲಾಗಿದೆ.

ಕ್ರಿಕೆಟ್​ ಆಸ್ಟ್ರೇಲಿಯಾ ಕೂಡ ಟಿ-20 ವಿಶ್ವಕಪ್​ ಆಯೋಜಿಸಲು ಉತ್ಸುಕತೆ ತೋರುತ್ತಿಲ್ಲ. ಇನ್ನು ಜೂನ್ 10 ರಂದು ನಡೆದಿದ್ದ ಐಸಿಸಿ ಬೋರ್ಡ್ ಸಭೆಯಲ್ಲಿ ಟಿ-20 ವಿಶ್ವಕಪ್ ಕುರಿತ ಅಂತಿಮ ನಿರ್ಧಾರವನ್ನು ಜುಲೈ ತಿಂಗಳವರೆಗೆ ಕಾಯ್ದಿರಿಸಿರುವುದಾಗಿ ತಿಳಿಸಿತ್ತು. ಆಯೋಜನೆ ಮಾಡಬೇಕಿರುವ ಕ್ರಿಕೆಟ್​ ಆಸ್ಟ್ರೇಲಿಯಾವೇ ಹಿಂದೇಟು ಹಾಕುತ್ತಿರುವುದರಿಂದ ಬಿಸಿಸಿಐ ಐಪಿಎಲ್​ ಆಯೋಜಿಸಲು ತಯಾರಿ ನಡೆಸಿಕೊಳ್ಳುತ್ತಿದೆ. ಐಸಿಸಿ ಅಂತಿಮ ತೀರ್ಮಾನ ಕಾಯಲು ಸಿದ್ದವಿಲ್ಲದ ಬಿಸಿಸಿಐ ಮುಂದಿನ ಐಸಿಸಿ ಸಭೆ ಮುಗಿಯುತ್ತಿದ್ದಂತೆ ಐಪಿಎಲ್​ ಆಯೋಜನೆಯ ಅಧಿಕೃತ ಪತ್ರವನ್ನು ಇತರ ಅಸೋಸಿಯೇಷನ್​ಗೆ ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೆ ಬಿಸಿಸಿಐ ಶ್ರೀಲಂಕಾ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಯನ್ನು ಕೋವಿಡ್​ 19 ಕಾರಣ ನೀಡಿ ರದ್ದುಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.