ETV Bharat / sports

ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್​ಮನ್​ ಸೈಫ್​ ಹಸನ್​ಗೆ ಕೊರೊನಾ ಪಾಸಿಟಿವ್‌ - Saif Hassan tests positive for COVID-19

ಕೊರೊನಾ ಪಾಸಿಟಿವ್​ ಬಂದಿರುವ ಸೈಫ್​ಗೆ ತಂಡದ ಬಾಗಿಲು ಮುಚ್ಚಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಸಿಬಿ ಅಧಿಕಾರಿಗಳು, ಮುಂಬರುವ ದಿನಗಳಲ್ಲಿ ಅವರಿಗೆ ಮತ್ತೊಂದು ಸುತ್ತಿನ ಪರೀಕ್ಷೆ ಮಾಡಲಾಗುವುದು. ಅದರ ಫಲಿತಾಂಶದ ಮೇಲೆ ಅವರ ಭವಿಷ್ಯ ನಿಂತಿದೆ..

ಬಾಂಗ್ಲಾದೇಶ್​ ಕ್ರಿಕೆಟ್​ ಬೋರ್ಡ್​
ಬಾಂಗ್ಲಾದೇಶ್​ ಕ್ರಿಕೆಟ್​ ಬೋರ್ಡ್​
author img

By

Published : Sep 8, 2020, 9:03 PM IST

ಡಾಕಾ : ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್​ಮನ್​ ಸೈಫ್​ ಹಸನ್​ ಹಾಗೂ ಕಂಡೀಷನಿಂಗ್​ ಕೋಚ್‌ ನಿಕ್​ ಲೀಗೆ ಕೋವಿಡ್​-19 ಪಾಸಿಟಿವ್​ ಎಂದು ದೃಢಪಟ್ಟಿದೆ ಅಂತಾ ಬಾಂಗ್ಲಾದೇಶ ಕ್ರಿಕೆಟ್​ ಬೋರ್ಡ್​ ಮಂಗಳವಾರ ಖಚಿತಪಡಿಸಿದೆ.

ಸೋಮವಾರ ಬೋರ್ಡ್​ ಶ್ರೀಲಂಕಾ ವಿರುದ್ಧದ ಸರಣಿಗಾಗಿ 17 ಆಟಗಾರರು ಮತ್ತು 7 ಸಿಬ್ಬಂದಿಯ ಮಾದರಿ ತೆಗೆದುಕೊಂಡಿತ್ತು ಎಂದು ತಿಳಿದು ಬಂದಿದೆ. ಅದರಲ್ಲಿ ಈ ಇಬ್ಬರಿಗೆ ಪಾಸಿಟಿವ್​ ಇರುವುದು ಖಚಿತವಾಗಿದೆ. ಪ್ರಸ್ತುತ ಸೈಫ್​ ಮತ್ತು ಲೀ ಕ್ವಾರಂಟೈನ್​ನಲ್ಲಿದ್ದಾರೆ. ಮುಂದಿನ ಪರೀಕ್ಷೆಯಲ್ಲಿ ನೆಗೆಟಿವ್​ ಬಂದರಷ್ಟೇ ಅವರು ಶ್ರೀಲಂಕಾ ತಂಡದ ಪರ ಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.

ಸೈಫ್​ ಹಸನ್
ಸೈಫ್​ ಹಸನ್

ಆಶ್ಚರ್ಯಕರ ಸಂಗತಿ ಅಂದರೆ ನಿಕ್​ ಲೀ ಈಗಾಗಲೇ ಒಮ್ಮೆ ಆಗಸ್ಟ್​ 14ರಂದು ದುಬೈನಲ್ಲಿ ಟೆಸ್ಟ್​ನಲ್ಲಿ ಒಳಗಾಗಿ ಪಾಸಿಟಿವ್​ ವರದಿ ಪಡೆದಿದ್ದರು. 10 ದಿನಗಳ ನಂತರ ಆಗಸ್ಟ್ 23ರಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಪಡೆದ ನಂತರವಷ್ಟೇ ದುಬೈನಿಂದ ಡಾಕಾಗೆ ಬಂದಿಳಿದಿದ್ದರು.

ಡಾಕಾದಲ್ಲೂ 14 ದಿನಗಳ ಕಾಲ ಕ್ವಾರಂಟೈನ್​ ಸಹ ಪೂರ್ಣಗೊಳಿಸಿದ್ದರು. ಆದರೂ ಮತ್ತೆ ಅವರಿಗೆ ಪಾಸಿಟಿವ್​ ವರದಿ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಸಿಬಿ ಮುಖ್ಯ ಆಯ್ಕೆಗಾರ ಮಿನ್ಹಾಜುಲ್​ ಅಬೆದೆನ್​ ಅವರ ಪ್ರಕಾರ, ಇದೀಗ ಸೆಪ್ಟೆಂಬರ್​ 17ರಂದು ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಮುನ್ನ ಸೆ.9ರಿಂದ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಟಗಾರರು ತರಬೇತಿ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾ ಪಾಸಿಟಿವ್​ ಬಂದಿರುವ ಸೈಫ್​ಗೆ ತಂಡದ ಬಾಗಿಲು ಮುಚ್ಚಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಸಿಬಿ ಅಧಿಕಾರಿಗಳು, ಮುಂಬರುವ ದಿನಗಳಲ್ಲಿ ಅವರಿಗೆ ಮತ್ತೊಂದು ಸುತ್ತಿನ ಪರೀಕ್ಷೆ ಮಾಡಲಾಗುವುದು. ಅದರ ಫಲಿತಾಂಶದ ಮೇಲೆ ಅವರ ಭವಿಷ್ಯ ನಿಂತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.