ETV Bharat / sports

ಭಾರತಕ್ಕೆ ಹೇಗೆ ಬೌಲಿಂಗ್​​ ಮಾಡ್ಬೇಕು ಅನ್ನೋದು ಗೊತ್ತಿದೆ: ಬಾಂಗ್ಲಾ ಕೋಚ್​​​ ಸುನೀಲ್​​ ಜೋಶಿ - ಬಾಂಗ್ಲಾ ಬೌಲಿಂಗ್​ ಕೋಚ್​

ವಿಶ್ವಕಪ್​​ನಲ್ಲಿ ಭಾರತದ ವಿರುದ್ಧ ಸೆಣಸಾಟ ನಡೆಸಲು ಸಜ್ಜುಗೊಳ್ಳುತ್ತಿರುವ ಬಾಂಗ್ಲಾದೇಶ ಇದೀಗ ಕೊಹ್ಲಿ ಮನೋಬಲ ಕುಗ್ಗಿಸುವ ಕೆಲಸಕ್ಕೆ ಕೈ ಹಾಕಿದ್ದು, ಪಂದ್ಯ ಆರಂಭಕ್ಕೂ ಮುಂಚಿತವಾಗಿ ವಾರ್ನ್​ ಮಾಡಿದೆ.

ಬಾಂಗ್ಲಾ ಸ್ಪಿನ್​ ಬೌಲಿಂಗ್​ ಕೋಚ್​
author img

By

Published : Jun 25, 2019, 9:30 PM IST

ಸೌಥಂಪ್ಟನ್​: ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿದ್ದು, ಮುಂದಿನ ತಿಂಗಳ 2ರಂದು ಭಾರತ-ಬಾಂಗ್ಲಾ ತಂಡ ಸೆಣಸಾಟ ನಡೆಸಲಿವೆ.

ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಬಾಂಗ್ಲಾ ತಂಡ ಸೆಮಿಫೈನಲ್​ಗೆ ಲಗ್ಗೆ ಹಾಕಬೇಕಾದರೆ ಮುಂದಿನ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಭಾರತದ ಮನೋಬಲ ಕುಗ್ಗಿಸುವ ಕೆಲಸಕ್ಕೆ ಕೈ ಹಾಕಿದೆ. ಬಾಂಗ್ಲಾ ತಂಡದ ಸ್ಪಿನ್​ ವಿಭಾಗದ ಬೌಲಿಂಗ್​ ಕೋಚ್​ ಆಗಿರುವ ಕನ್ನಡಿಗ ಸುನೀಲ್​ ಜೋಶಿ ಇದೀಗ ಕೊಹ್ಲಿ ಪಡೆಗೆ ವಾರ್ನ್​ ಮಾಡಿದ್ದಾರೆ.

ಭಾರತದ ಬ್ಯಾಟಿಂಗ್​ ವಿಭಾಗದ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವ ಸುನೀಲ್​ ಜೋಶಿ ಮಾತನಾಡಿದ್ದು, ಭಾರತಕ್ಕೆ ಯಾವ ರೀತಿಯಾಗಿ ಬೌಲಿಂಗ್ ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಮ್ಮ ಬೌಲರ್​ಗಳು ಯೋಜನೆ ಪ್ರಕಾರ ಬೌಲಿಂಗ್ ಮಾಡಿ ಗೆಲುವು ದಾಖಲು ಮಾಡಲಿದ್ದಾರೆ ಎಂದಿದ್ದಾರೆ. ಇನ್ನು ಬಾಂಗ್ಲಾದೇಶದ ಆಲ್​ರೌಂಡರ್​ ಶಕೀಬ್​ ಅಲ್​ ಹಸನ್​ ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ಮಿಂಚುತ್ತಿರುವುದು ತಂಡಕ್ಕೆ ಪ್ಲಸ್​ ಪಾಯಿಂಟ್ ಆಗಿದೆ.

ಈ ಹಿಂದೆ ಏಷ್ಯಾ ಕಪ್​​ನಲ್ಲೂ ಭಾರತಕ್ಕೆ ಟಕ್ಕರ್​ ನೀಡಿದ್ದ ಬಾಂಗ್ಲಾ ಕೊನೆ ಓವರ್​​ನಲ್ಲಿ ಮ್ಯಾಚ್​ ಕೈ ಚೆಲ್ಲಿತ್ತು. ಈಗಾಗಲೇ ಬಲಿಷ್ಠ ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​ ವಿರುದ್ಧ ಗೆಲುವು ದಾಖಲು ಮಾಡಿರುವ ಬಾಂಗ್ಲಾ, ಅಫ್ಘಾನಿಸ್ತಾನ ವಿರುದ್ಧ ಸಹ ಜವಾಬ್ದಾರಿಯುತ ಗೆಲುವು ತನ್ನದಾಗಿಸಿಕೊಂಡಿದೆ. ಇದೀಗ ಭಾರತದ ವಿರುದ್ಧ ಸೆಣಸಾಟ ನಡೆಸಲು ಬಾಂಗ್ಲಾ ತಯಾರಿ ನಡೆಸಿದೆ.

Intro:Body:

ಭಾರತಕ್ಕೆ ಹೇಗೆ ಬೌಲಿಂಗ್​ ಮಾಡ್ಬೇಕು ಅನ್ನೊದು ಗೊತ್ತಿದೆ: ಬಾಂಗ್ಲಾ ಕೋಚ್​ ಸುನೀಲ್ ಜೋಶಿ 

ಸೌಥಂಪ್ಟನ್​: ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿದ್ದು, ಮುಂದಿನ ತಿಂಗಳ 2ರಂದು ಭಾರತ-ಬಾಂಗ್ಲಾ ತಂಡ ಸೆಣಸಾಟ ನಡೆಸಲಿವೆ. 

ಸೆಮಿಫೈನಲ್​ ಮೇಲೆ ಕಣ್ಣಿಟ್ಟಿರುವ ಬಾಂಗ್ಲಾ ತಂಡಕ್ಕೆ ಈ ಗೆಲುವು ಅನಿವಾರ್ಯವಾಗಿರುವ ಕಾರಣ, ಭಾರತದ ಮನೋಬಲ ಕುಗ್ಗಿಸುವ ಕೆಲಸಕ್ಕೆ ಕೈ ಹಾಕಿದೆ. ಬಾಂಗ್ಲಾ ತಂಡದ ಸ್ಪಿನ್​ ವಿಭಾಗದ ಬೌಲಿಂಗ್​ ಕೋಚ್​ ಆಗಿರುವ ಕನ್ನಡಿಗ ಸುನೀಲ್​ ಜೋಶಿ ಇದೀಗ ಕೊಹ್ಲಿ ಪಡೆಗೆ ವಾರ್ನ್​ ಮಾಡಿದ್ದಾರೆ. 

ಭಾರತದ ಬ್ಯಾಟಿಂಗ್​ ವಿಭಾಗದ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವ ಸುನೀಲ್​ ಜೋಶಿ ಮಾತನಾಡಿದ್ದು, ಭಾರತಕ್ಕೆ ಯಾವ ರೀತಿಯಾಗಿ ಬೌಲಿಂಗ್ ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಮ್ಮ ಬೌಲರ್​ಗಳು ಯೋಜನೆ ಪ್ರಕಾರ ಬೌಲಿಂಗ್ ಮಾಡಿ ಗೆಲುವು ದಾಖಲು ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 

ಈ ಹಿಂದೆ ಏಷ್ಯಾಕಪ್​​ನಲ್ಲೂ ಭಾರತಕ್ಕೆ ಟಕ್ಕರ್​ ನೀಡಿದ್ದ ಬಾಂಗ್ಲಾ ಕೊನೆ ಓವರ್​​ನಲ್ಲಿ ಮ್ಯಾಚ್​ ಕೈಚೆಲ್ಲಿತ್ತು. ಈಗಾಗಲೇ ಬಲಿಷ್ಠ ದಕ್ಷಿಣ ಆಫ್ರಿಕಾ,ವೆಸ್ಟ್​ ಇಂಡೀಸ್​ ವಿರುದ್ಧ ಗೆಲುವು ದಾಖಲು ಮಾಡಿರುವ ಬಾಂಗ್ಲಾ,ಅಫ್ಘಾನಿಸ್ತಾನ ವಿರುದ್ಧ ಸಹ ಜವಾಬ್ದಾರಿಯುತ ಗೆಲುವು ತನ್ನದಾಗಿಸಿಕೊಂಡಿದೆ. ಇದೀಗ ಭಾರತದ ವಿರುದ್ಧ ಸೆಣಸಾಟ ನಡೆಸಲು ಬಾಂಗ್ಲಾ ತಯಾರಿ ನಡೆಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.