ಢಾಕಾ: ತವರಿನಲ್ಲಿ ನಡೆಯುತ್ತಿರುವ ಟಿ20 ತ್ರಿಕೋನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಆಫ್ಘಾನಿಸ್ತಾದ ವಿರುದ್ಧ ಸೋಲನುಭವಿಸಿದ್ದಕ್ಕೆ ಬೇಸತ್ತು ತಂಡದಲ್ಲಿ 4 ಆಟಗಾರರನ್ನು ಬದಲಿಸಿಕೊಂಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಸೌಮ್ಯ ಸರ್ಕಾರ್‌ರನ್ನು ತಂಡದಿಂದ ಕೈಬಿಟ್ಟಿದ್ದು ಅನುಭವಿ ಬೌಲರ್ಗಳಾದ ರುಬೆಲ್ ಹುಸೇನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.
ಸೌಮ್ಯ ಸರ್ಕಾರ್ ಜೊತೆಗೆ ಸ್ಪಿನ್ನರ್ ಮೆಹೆದಿ ಹಸನ್, ವೇಗಿಗಳಾದ ಅಬು ಹೈದರ್, ಯಾಸಿನ್ ಅರಾಫತ್‌ರನ್ನು ಸಹ ಬಾಂಗ್ಲಾದೇಶ ಆಯ್ಕೆ ಸಮಿತಿ ತಂಡದಿಂದ ಡ್ರಾಪ್ ಮಾಡಲಾಗಿದೆ. ರುಬೆಲ್ ಜೊತೆಗೆ ಶಫೀವುಲ್ ಇಸ್ಲಾಂ, ಯುವ ಆಟಗಾರರಾದ ನಜ್ಮುಲ್ ಹುಸೇನ್,ಮೊಹ್ಮದ್ ನಯೀಮ್ರನ್ನು ಸರಣಿಯ ಉಳಿದ ತಂಡಗಳಿಗೆ ಆಯ್ಕೆ ಮಾಡಲಾಗಿದೆ.
ಬಾಂಗ್ಲದೇಶ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಕಷ್ಟಪಟ್ಟು ಗೆಲುವು ಸಾಧಿಸಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡದ ವಿರುದ್ಧ ಕಳಪೆ ಪ್ರದರ್ಶನ ತೋರಿ 25 ರನ್ಗಳಿಂದ ಸೋಲನುಭವಿಸಿತ್ತು.