ETV Bharat / sports

ಕೊಲೆ ಬೆದರಿಕೆ ಬೆನ್ನಲ್ಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಶಕಿಬ್ ಅಲ್​ ಹಸನ್​ - ಬಾಂಗ್ಲಾದೇಶ

ಫ್ರಾನ್ಸ್​ನಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳ ಪ್ರಕಟಣೆ ಮಾಡಿದ ನಂತರ ಇತ್ತೀಚಿನ ವಾರಗಳಲ್ಲಿ ಇಸ್ಲಾಮಿಸ್ಟ್​ಗಳು ಫ್ರಾನ್ಸ್ ವಿರೋಧಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಶಕಿಬ್ ಭಾರತದಲ್ಲಿ ಕಾಳಿ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಬಾಂಗ್ಲಾದೇಶದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂರ ಕೋಪಕ್ಕೆ ತುತ್ತಾಗಿದ್ದಾರೆ.

ಶಕಿಬ್ ಅಲ್​ ಹಸನ್​
ಶಕಿಬ್ ಅಲ್​ ಹಸನ್​
author img

By

Published : Nov 17, 2020, 3:49 PM IST

ಢಾಕಾ: ಕೋಲ್ಕತ್ತಾದಲ್ಲಿ ಹಿಂದೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿಕ್ಕಾಗಿ ಮುಸ್ಲಿಂವಾದಿಗಳಿಂದ ಕೊಲೆ ಬೆದರಿಕೆ ಬಂದ ನಂತರ ಬಾಂಗ್ಲಾದೇಶದ ಸ್ಟಾರ್ ಆಲ್​ರೌಂಡರ್​ ಶಕಿಬ್ ಅಲ್​ ಹಸನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಫ್ರಾನ್ಸ್​ನಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳ ಪ್ರಕಟಣೆ ಮಾಡಿದ ನಂತರ ಇತ್ತೀಚಿನ ವಾರಗಳಲ್ಲಿ ಇಸ್ಲಾಮಿಸ್ಟ್​ಗಳು ಫ್ರಾನ್ಸ್ ವಿರೋಧಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಶಕಿಬ್ ಭಾರತದಲ್ಲಿ ಕಾಳಿ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಬಾಂಗ್ಲಾದೇಶದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂರ ಕೋಪಕ್ಕೆ ತುತ್ತಾಗಿದ್ದಾರೆ.

"ನೀವು ಕಾಳಿ ಮಾತೆ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ನಿಮ್ಮನ್ನು ಕತ್ತಿಯಿಂದ ತುಂಡು ತುಂಡಾಗಿ ಕತ್ತರಿಸುತ್ತೇನೆ ಹಾಗೂ ಅಗತ್ಯವಿದ್ದರೆ ಸಲ್ಹೆಟ್​ನಿಂದ ಢಾಕಾಗೆ ಬಂದು ಕತ್ತಿಯಿಂದ ಕೊಲ್ಲುವುದಾಗಿ" ಶಕೀಬ್‌ಗೆ ಫೇಸ್​ಬುಕ್​ ಲೈವ್​ನಲ್ಲಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದ.

"ನಾನು ಕೇವಲ ಎರಡು ನಿಮಿಷಗಳ ಕಾಲ ಆ ವೇದಿಕೆಯಲ್ಲಿದ್ದೆ. ಆದರೆ ಜನರು ನಾನೇ ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇನೆ ಎಂದು ಭಾವಿಸುತ್ತಿದ್ದಾರೆ" ಎಂದು ಶಕಿಬ್ ಸೋಮವಾರ ತಡರಾತ್ರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

"ನಾನು ಅಲ್ಲಿ ಉದ್ಘಾಟನೆ ಮಾಡಲಿಲ್ಲ, ನಾನೊಬ್ಬ ಪ್ರಜ್ಞಾವಂತ ಮುಸ್ಲಿಂ ಆಗಿರುವುದರಿಂದ ಎಂದಿಗೂ ಆ ರೀತಿ ಮಾಡುವುದಿಲ್ಲ. ಆದರೆ ಬಹುಶಃ ನಾನು ಅಲ್ಲಿಗೆ ಹೋಗಬಾರದಿತ್ತು. ಇದಕ್ಕಾಗಿ ನಾನು ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

"ನಾನು ಯಾವಾಗಲೂ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಲು ಪ್ರಯತ್ನಿಸುತ್ತೇನೆ. ನಾನು ಏನಾದರೂ ತಪ್ಪು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಕ್ಷಮೆಯಾಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.