ಹೈದರಾಬಾದ್: ಬಾಂಗ್ಲಾದೇಶದ ಮಹಿಳಾ ಕ್ರಿಕೆಟರ್ ಸಂಜಿದಾ ಇಸ್ಲಾಮ್ ತಮ್ಮ ವೆಡ್ಡಿಂಗ್ ಫೋಟೋ ಶೂಟ್ಅನ್ನು ಕ್ರಿಕೆಟ್ ಮೈದಾನದಲ್ಲಿ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರ ಕ್ರಿಕೆಟ್ ಪ್ರೇಮಕ್ಕೆ ನೆಟ್ಟಿಗರಿಂದ ಶುಭಾಶಯಗಳ ಸುರಿಮಳೆ ವ್ಯಕ್ತವಾಗುತ್ತಿದೆ.
-
Dress ✅
— ICC (@ICC) October 21, 2020 " class="align-text-top noRightClick twitterSection" data="
Jewellery ✅
Cricket bat ✅
Wedding photoshoots for cricketers be like ... 👌
📸 🇧🇩 Sanjida Islam pic.twitter.com/57NSY6vRgU
">Dress ✅
— ICC (@ICC) October 21, 2020
Jewellery ✅
Cricket bat ✅
Wedding photoshoots for cricketers be like ... 👌
📸 🇧🇩 Sanjida Islam pic.twitter.com/57NSY6vRgUDress ✅
— ICC (@ICC) October 21, 2020
Jewellery ✅
Cricket bat ✅
Wedding photoshoots for cricketers be like ... 👌
📸 🇧🇩 Sanjida Islam pic.twitter.com/57NSY6vRgU
ಸಂಜಿದಾ ಇತ್ತೀಚೆಗೆ ಬಾಂಗ್ಲಾದೇಶದ ಪ್ರಥಮ ದರ್ಜೆ ಕ್ರಿಕೆಟರ್ ಮಿಮ್ ಮೊಸದೀಕ್ ಅವರನ್ನು ವಿವಾಹವಾಗಿದ್ದಾರೆ. ಈ ಪೋಟೋಶೂಟ್ನಲ್ಲಿ ಸಂಜಿದಾ, ಕವರ್ ಡ್ರೈವ್, ಫುಲ್ಶಾಟ್ ಆಡುತ್ತಿರುವುದು ಕಂಡುಬಂದಿದೆ.
ಆಗಸ್ಟ್ 2012 ರಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಇವರು, 2018ರಲ್ಲಿ ಏಷ್ಯಾಕಪ್ ಗೆದ್ದ ಬಾಂಗ್ಲಾದೇಶ ತಂಡದ ಭಾಗವಾಗಿದ್ದರು.
ಬಲಗೈ ಬ್ಯಾಟರ್ ಆಗಿರುವ ಇವರು 16 ಏಕದಿನ ಮತ್ತು 54 ಟಿ20 ಪಂದ್ಯಗಳನ್ನಾಡಿದ್ದಾರೆ. 8 ವರ್ಷಗಳ ಕ್ರಿಕೆಟ್ ಕೆರಿಯರ್ನಲ್ಲಿ ಏಕದಿನ ಕ್ರಿಕೆಟ್ ಮೂಲಕ 174 ಹಾಗೂ ಟಿ20 ಕ್ರಿಕೆಟ್ನಲ್ಲಿ 520 ರನ್ ಗಳಿಸಿದ್ದಾರೆ.