ETV Bharat / sports

ಡೇ ಅಂಡ್​​​ ನೈಟ್​ ಟೆಸ್ಟ್​ ಪಂದ್ಯದಲ್ಲಿ 11 ವಿಕೆಟ್: ಈ ದಾಖಲೆ ಬರೆದ ಮೊದಲ ಪ್ಲೇಯರ್​​ ಅಕ್ಸರ್ ಪಟೇಲ್! ​ - ಇಂಗ್ಲೆಂಡ್​ ವಿರುದ್ಧ ಡೇ-ನೈಟ್​ ಟೆಸ್ಟ್​

ಆಂಗ್ಲರ ವಿರುದ್ಧ ನಡೆದ ಡೇ ಅಂಡ್​​ ನೈಟ್​ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್​ ಅಕ್ಸರ್ ಪಟೇಲ್ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ದಾಖಲೆ ಬರೆದ ಮೊದಲ ಪ್ಲೇಯರ್​ ಆಗಿದ್ದಾರೆ.

Axar Patel
Axar Patel
author img

By

Published : Feb 25, 2021, 8:27 PM IST

ಅಹಮದಾಬಾದ್​: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಡೇ ಅಂಡ್​ ನೈಟ್​ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಆಫ್​ ಸ್ಪಿನ್ನರ್ ಅಕ್ಸರ್ ಪಟೇಲ್​ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ರೆಕಾರ್ಡ್​ ನಿರ್ಮಿಸಿರುವ ಮೊದಲ ಪ್ಲೇಯರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಇಂಗ್ಲೆಂಡ್​ ಬ್ಯಾಟ್ಸ್​​ಮನ್​​ಗಳಿಗೆ ದುಃಸ್ವಪ್ನವಾಗಿ ಕಾಡಿದ ಅಕ್ಸರ್ ಪಟೇಲ್, ಎರಡು ಇನ್ನಿಂಗ್ಸ್​​ನಲ್ಲಿ 70 ರನ್​ ನೀಡಿ 11 ವಿಕೆಟ್ ಪಡೆದುಕೊಂಡಿದ್ದು, ಈ ದಾಖಲೆ ಬರೆದ ಮೊದಲ ಪ್ಲೇಯರ್​ ಆಗಿದ್ದಾರೆ. ಜತೆಗೆ ಡೇ ಅಂಡ್​​ ನೈಟ್​ ಟೆಸ್ಟ್​​​ ಪಂದ್ಯದ ಎರಡು ಇನ್ನಿಂಗ್ಸ್​ಗಳಲ್ಲಿ ತಲಾ 5 ವಿಕೆಟ್​ ಪಡೆದ ಪ್ರಥಮ ಪ್ಲೇಯರ್​​ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಡೇ ಅಂಡ್​ ನೈಟ್​ ಟೆಸ್ಟ್​: ಭಾರತಕ್ಕೆ 10 ವಿಕೆಟ್​ಗಳ ಭರ್ಜರಿ ಜಯ

ಮೊದಲ ಇನ್ನಿಂಗ್ಸ್​​ನಲ್ಲಿ ಅಕ್ಸರ್​ ಪಟೇಲ್​ 38 ರನ್​ ನೀಡಿ 6 ವಿಕೆಟ್ ಪಡೆದುಕೊಂಡಿದ್ರು. ಇದಾದ ಬಳಿಕ ಎರಡನೇ ಇನ್ನಿಂಗ್ಸ್​​ನಲ್ಲಿ 32 ರನ್​ ನೀಡಿ 5 ವಿಕೆಟ್ ಪಡೆದಿದ್ದಾರೆ. ಇನ್ನು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯವೊಂದರ ಎರಡು ಇನ್ನಿಂಗ್ಸ್​ಗಳಲ್ಲಿ 5 ವಿಕೆಟ್ ಪಡೆದುಕೊಂಡಿರುವ ಭಾರತದ ಮೂರನೇ ಬೌಲರ್​ ಆಗಿದ್ದು, ಈ ಹಿಂದೆ ಲಕ್ಷ್ಮಣ ಶಿವರಾಮಕೃಷ್ಣನ್​(1984), ಆರ್.ಅಶ್ವಿನ್​​(2016) ಈ ಸಾಧನೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.