ETV Bharat / sports

ಪಂತ್ ಆಕ್ರಮಣಕಾರಿ ಆಟ, ಪೂಜಾರ ತಾಳ್ಮೆ: ಗೆಲ್ಲಲು 201 ರನ್ ಅವಶ್ಯಕ

ಭೋಜನ ವಿರಾಮದ ವೇಳೆಗೆ ಭಾರತ 3 ವಿಕೆಟ್ ಕಳೆದುಕೊಂಡು 206 ರನ್​ ಕಲೆಹಾಕಿದೆ. ಪೂಜಾರ 41 ಮತ್ತು ರಿಷಭ್ ಪಂತ್ 72 ರನ್ ಗಳಿಸಿದ್ದು, ಪಂದ್ಯ ಗೆಲ್ಲಲು 201 ರನ್​ ಬೇಕಿದೆ.

Australia vs India 3rd Test
ಪಂತ್ ಆಕ್ರಮಣಕಾರಿ ಆಟ
author img

By

Published : Jan 11, 2021, 7:20 AM IST

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದ ಮೊದಲ ಸೆಷನ್ ಮುಕ್ತಾಯವಾಗಿದ್ದು, ರಿಷಭ್ ಪಂತ್ ಅವರ ಅಕ್ರಮಣಕಾರಿ ಆಟದ ನೆರವಿನಿಂದ ಭಾರತ 206 ರನ್ ಗಳಿಸಿದೆ.

  • Cheteshwar Pujara (41*) and Rishabh Pant (73*) have carried India to lunch 🇮🇳💪

    The partnership between the duo is now worth 104 runs 🔥

    What are your predictions for the coming session? 👀#AUSvIND pic.twitter.com/N4AqGq1MSa

    — ICC (@ICC) January 11, 2021 " class="align-text-top noRightClick twitterSection" data=" ">

ಭಾರತ ನಾಲ್ಕನೇ ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಐದನೇ ದಿನದ ಆರಂಭದಲ್ಲಿ ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ನಿರಾಸೆ ಅನುಭವಿಸಿತು. ದಿನದ ಎರಡನೇ ಓವರ್​ನಲ್ಲೇ ನಾಯಕ ಅಜಿಂಕ್ಯಾ ರಹಾನೆ ಕೇವಲ 4 ರನ್ ಗಳಿಸಿ ಲಿಯಾನ್​ಗೆ ವಿಕೆಟ್ ಒಪ್ಪಿಸಿದ್ರು.

ನಂತರ ಜೊತೆಯಾದ ರಿಷಭ್ ಪಂತ್ ಮತ್ತು ಪೂಜಾರ ಆಸೀಸ್ ಬೌಲರ್​ಗಳ ಬೆವರಿಳಿಸಿದ್ರು. ಒಂದೆಡೆ ಪೂಜಾರ ತಾಳ್ಮೆಯಿಂದ ಬ್ಯಾಟಿಂಗ್​ ನಡೆಸುತಿದ್ದರೆ ಮತ್ತೊಂದೆಡೆ ರಿಷಭ್ ಪಂತ್ ಆಕ್ರಮಣಕಾರಿ ಬ್ಯಾಟಿಂಗ್​​​​​ಗೆ​ ಮೊರೆ ಹೋಗಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಗಾಯಗೊಂಡಿದ್ದ ಕಾರಣ ನಾಲ್ಕನೇ ದಿನ ಮೈದಾನಕ್ಕಿಳಿಯದ ಪಂತ್ ಇಂದು ಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆಕರ್ಷಕ ಬೌಂಡರಿ, ಸಿಕ್ಸರ್​ ಸಿಡಿಸಿ ಅರ್ಧಶತಕ ಪೂರ್ಣಗೊಳಿಸಿದ್ರು. 4ನೇ ವಿಕೆಟ್​ಗೆ ಈ ಜೋಡಿ 104 ರನ್ ಒಟ್ಟುಗೂಡಿಸಿದ್ದು, ಪಂದ್ಯ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.