ಸಿಡ್ನಿ: ಡಿಸೆಂಬರ್ 17ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿರುವ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಿಂದ ಆಸ್ಟ್ರೇಲಿಯಾ ತಂಡದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೊರಬಿದ್ದಿದ್ದಾರೆ. ವಾರ್ನರ್ 2ನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು.
4 ಪಂದ್ಯಗಳ ಟೆಸ್ಟ್ ಸರಣಿ ಡೇ ಆ್ಯಂಡ್ ನೈಟ್ ಪಂದ್ಯದ ಮೂಲಕ ಡಿಸೆಂಬರ್ 17ರಿಂದ ಆರಂಭಗೊಳ್ಳುತ್ತಿದೆ. ಆದರೆ ಕಳೆದ ಸಮ್ಮರ್ ಸೀಸನ್ನಲ್ಲಿ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದ ವಾರ್ನರ್ ಇಲ್ಲದೆ ಆಸ್ಟ್ರೇಲಿಯಾ ಬಹು ನಿರೀಕ್ಷಿತ ಸರಣಿ ಆಡಬೇಕಿದೆ. ಆದರೆ ದ್ವಿತೀಯ ಟೆಸ್ಟ್ ವೇಳೆ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಈ ಎಡಗೈ ಬ್ಯಾಟ್ಸ್‌ಮನ್ ಪ್ರಸ್ತುತ ಸಿಡ್ನಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಹೊರತುಪಡಿಸಿ ಇಂದು ಬಹುಪಾಲು ತಂಡ ಅಡಿಲೇಡ್ಗೆ ಪ್ರಯಾಣ ಬೆಳೆಸಲಿದೆ ಎಂದು ತಿಳಿದುಬಂದಿದೆ.
-
JUST IN: David Warner has been officially ruled out of the first #AUSvIND Test
— cricket.com.au (@cricketcomau) December 8, 2020 " class="align-text-top noRightClick twitterSection" data="
Details: https://t.co/XXj2BGK2Zx pic.twitter.com/nguowxNVFR
">JUST IN: David Warner has been officially ruled out of the first #AUSvIND Test
— cricket.com.au (@cricketcomau) December 8, 2020
Details: https://t.co/XXj2BGK2Zx pic.twitter.com/nguowxNVFRJUST IN: David Warner has been officially ruled out of the first #AUSvIND Test
— cricket.com.au (@cricketcomau) December 8, 2020
Details: https://t.co/XXj2BGK2Zx pic.twitter.com/nguowxNVFR
"ಅಲ್ಪಾವಧಿಯಲ್ಲಿಯೇ ನಾನು ಹೆಚ್ಚಿನ ಪ್ರಗತಿ ಸಾಧಿಸಿದ್ದೇನೆ ಮತ್ತು ಪೂರ್ಣ ಫಿಟ್‌ನೆಸ್‌ಗೆ ಮರಳುವುದಕ್ಕಾಗಿ ಸಿಡ್ನಿಯಲ್ಲಿರುವುದು ಉತ್ತಮವೆನಿಸಿದೆ. ಸದ್ಯ ಗಾಯದಿಂದ ಚೇತರಿಸಿಕೊಂಡಿದ್ದೇನೆ. ಆದರೆ ಟೆಸ್ಟ್ ಪಂದ್ಯದ ಪರಿಸ್ಥಿತಿಗಳಿಗೆ ಶೇ.100 ರಷ್ಟು ಫಿಟ್ನೆಸ್ ಅವಶ್ಯಕತೆಯಿದೆ" ಎಂದು ವಾರ್ನರ್ ಹೇಳಿದ್ದಾರೆ.
"ವಿಕೆಟ್ಗಳ ಮಧ್ಯೆ ಓಡುವುದಕ್ಕೆ ಮೈದಾನದಲ್ಲಿ ಚುರುಕಾಗಿರುವುದಕ್ಕೆ ಸಂಪೂರ್ಣ ಫಿಟ್ನೆಸ್ ಅಗತ್ಯವಿದೆ. ಪ್ರಸ್ತುತ ನಾನು ಗರಿಷ್ಠ ಫಿಟ್ನೆಸ್ನಲ್ಲಿ ಆಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು 10 ದಿನಗಳಲ್ಲಿ ವ್ಯತ್ಯಾಸವನ್ನು ಕಾಣುವ ನಿರೀಕ್ಷೆಯಲ್ಲಿ ನಾನಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಓದಿ: ಸರಣಿ ಶ್ರೇಷ್ಠ ಪ್ರಶಸ್ತಿಗೆ ನನಗಿಂತ ನಟರಾಜನ್ ಅರ್ಹ.. ಟ್ರೋಫಿ ಕೊಟ್ಟು ಹೃದಯವಂತಿಕೆ ಮೆರೆದ ಪಾಂಡ್ಯ!!