ಮೆಲ್ಬೋರ್ನ್: ಭಾರತದ ವಿರುದ್ಧ ಬ್ರಿಸ್ಬೇನ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಆಡುವ ಸಾಧ್ಯತೆಯಿದೆ. ಬುಧವಾರ ಘೋಷಿಸಿರುವ 18 ಸದಸ್ಯರ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ್ದು, ವಾರ್ನರ್ ತಂಡಕ್ಕೆ ಸೇರ್ಪಡೆಯಾಗಿದ್ದರೆ, ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿರುವ ಜೋ ಬರ್ನ್ಸ್ ತಂಡದಿಂದ ಹೊರಬಿದ್ದಿದ್ದಾರೆ.
ವಾರ್ನರ್ ಎರಡನೇ ಏಕದಿನ ಪಂದ್ಯದ ವೇಳೆ ತೊಡೆ ಸಂದು ಗಾಯಕ್ಕೊಳಗಾಗಿ ಕೊನೆಯ ಏಕದಿನ, ಟಿ20 ಸರಣಿ ಹಾಗೂ ಮೊದಲೆರಡು ಟೆಸ್ಟ್ ಸರಣಿಯಲ್ಲಿ ಹೊರಗುಳಿದಿದ್ದರು. ಒಂದು ತಿಂಗಳಿನಿಂದ ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಫಿಟ್ ಆಗಿದ್ದು, ಕೊನೆಯ ಎರಡು ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಂಡಿದ್ದಾರೆ.
-
The National Selection Panel has chosen an 18-player Australian men’s squad for the remaining two matches of the @VodafoneAU Test Series against India.
— Cricket Australia (@CricketAus) December 30, 2020 " class="align-text-top noRightClick twitterSection" data="
Read more here: https://t.co/hRInbwxJiz #AUSvIND pic.twitter.com/nVgkMcdDoN
">The National Selection Panel has chosen an 18-player Australian men’s squad for the remaining two matches of the @VodafoneAU Test Series against India.
— Cricket Australia (@CricketAus) December 30, 2020
Read more here: https://t.co/hRInbwxJiz #AUSvIND pic.twitter.com/nVgkMcdDoNThe National Selection Panel has chosen an 18-player Australian men’s squad for the remaining two matches of the @VodafoneAU Test Series against India.
— Cricket Australia (@CricketAus) December 30, 2020
Read more here: https://t.co/hRInbwxJiz #AUSvIND pic.twitter.com/nVgkMcdDoN
ಡೇವಿಡ್ ತಮ್ಮ ಗಾಯದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿ ತುಂಬಾ ಪ್ರಗತಿ ಸಾಧಿಸಿದ್ದಾರೆ. ಸಿಡ್ನಿ ಟೆಸ್ಟ್ಗೆ ಇನ್ನೂ 7 ದಿನಗಳ ಕಾಲ ಅವಕಾಶ ಇರುವುದರಿಂದ ಅವರಿಗೆ ಆಡಲು ಅವಕಾಶ ಕೊಡಬಹುದು ಎಂದು ಆಯ್ಕೆ ಸಮಿತಿ ಸದಸ್ಯ ಟ್ರೆವರ್ ಹೋನ್ಸ್ ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾರ್ನರ್ ಜೊತೆಗೆ ಅಭ್ಯಾಸ ಪಂದ್ಯದಲ್ಲಿ ತಲೆಗೆ ಚೆಂಡು ಬಿದ್ದು ಕಂಕಷನ್ಗೆ ಒಳಗಾಗಿದ್ದ ವಿಲ್ ಪುಕೋವ್ಸ್ಕಿ, ಸೀನ್ ಅಬಾಟ್ ಮತ್ತು ಮಾರ್ಕಸ್ ಹ್ಯಾರೀಸ್ ಅವರನ್ನು ಕೂಡ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಕೊನೆಯ ಎರಡು ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ
ಆಸ್ಟ್ರೇಲಿಯಾ ತಂಡ: ಟಿಮ್ ಪೈನ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹೇಜಲ್ವುಡ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಶೇನ್, ನಥನ್ ಲಿಯಾನ್, ಮೈಕೆಲ್ ನೇಸರ್, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೊವ್ ಸ್ಕಿ , ಸ್ಟಿವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.