ETV Bharat / sports

ಆಂಗ್ಲ ಸ್ಪಿನ್ನರ್ರ್ಸ್‌ ವಿರುದ್ಧ ಪೂಜಾರ ಪ್ರಾಬಲ್ಯ ಸಾಧಿಸಿದ್ರೆ, ಅರ್ಧಮೀಸೆ ಬೋಳಿಸುವೆ : ಆರ್‌. ಅಶ್ವಿನ್ ಸವಾಲ್ - ಇಂಗ್ಲೆಂಡ್ vs ಭಾರತ ಟೆಸ್ಟ್​ ಸರಣಿ

ಕಳೆದ ಆಸೀಸ್ ಪ್ರವಾಸದಲ್ಲಿ ಆಸೀಸ್ ಸ್ಪಿನ್ನರ್​ ವಿರುದ್ಧ ಚೇತೇಶ್ವರ್ ಪೂಜಾರ ಪ್ರಾಬಲ್ಯ ಸಾಧಿಸಿದ್ದರು. ಆದರೆ, ಈ ಪ್ರವಾಸದಲ್ಲಿ ಲಿಯಾನ್ ಎದುರಿಸಲು ಅವರು ತುಂಬಾ ತಾಪತ್ರಯ ಪಟ್ಟಿದ್ದರು. ಲಿಯಾನ್​ ವಿರುದ್ಧ ಪ್ರತಿ ಎಸೆತವನ್ನು ಎದುರಿಸುವಾಗ ನನಗೆ ಹೃದಯಬಡಿತ ಹೆಚ್ಚಾಗುತ್ತಿತ್ತು..

ರವಿಚಂದ್ರನ್ ಅಶ್ವಿನ್​ ಸುದ್ದಿ
ರವಿಚಂದ್ರನ್ ಅಶ್ವಿನ್​ ಸುದ್ದಿ
author img

By

Published : Jan 25, 2021, 9:33 PM IST

ನವದೆಹಲಿ : ಮುಂಬರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಯಾವುದೇ ಸ್ಪಿನ್ನರ್​ ವಿರುದ್ಧ ಪೂಜಾರ ಪ್ರಾಬಲ್ಯ ಸಾಧಿಸಿದ್ರೆ ನಾನು ಅರ್ಧ ಮೀಸೆ ಬೋಳಿಸಿಕೊಂಡು ಆಡಲು ಸಿದ್ಧನಿದ್ಧೇನೆ ಎಂದು ಭಾರತದ ಅನುಭವಿ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್ ಸವಾಲೆಸೆದಿದ್ದಾರೆ.

ಬ್ಯಾಟಿಂಗ್ ಕೋಚ್​ ವಿಕ್ರಮ್ ರಾಥೋರ್​ ಅವರ ಜೊತೆ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ನಡೆಸಿದ ಸಂವಾದದ ವೇಳೆ ಅಶ್ವಿನ್, ಪೂಜಾರ ನನ್ನ ಸವಾಲನ್ನು ಪೂರ್ಣಗೊಳಿಸಿದ್ರೆ ನಾನು ಅರ್ಧ ಮೀಸೆ ತೆಗೆದು, ಮೈದಾನಕ್ಕೆ ಬಂದು ಆಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

"ಪೂಜಾರ ಆಫ್​ ಸ್ಪಿನ್ನರ್​ ವಿರುದ್ಧ ಓವರ್‌ದ ಟಾಪ್​ ಹೊಡೆಯುವುದನ್ನು ನಾವು ಎಂದಾದ್ರೂ ನೋಡಲು ಸಾಧ್ಯವೆ? "ಎಂದು ವಿಕ್ರಮ್ ರಾಥೋರ್​ಗೆ ಅಶ್ವಿನ್​ ಪ್ರಶ್ನೆ ಕೇಳಿದರು.

"ಆ ಕೆಲಸ ಪ್ರಗತಿಯಲ್ಲಿದೆ, ಒಮ್ಮೆಯಾದ್ರೂ ನೀವು ಸ್ಪಿನ್ನರ್​ ವಿರುದ್ಧ ಮೇಲುಗೈ ಸಾಧಿಸಬೇಕೆಂದು ನಾನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಅವರಿಗೆ ಮನವರಿಕೆಯಾಗುತ್ತಿಲ್ಲ. ಸ್ಪಿನ್ನರ್​ ವಿರುದ್ಧ ಹೋಗದಿರುವುದಕ್ಕೆ ಅವರು ನನಗೆ ದೊಡ್ಡ ಕಾರಣಗಳನ್ನು ನೀಡುತ್ತಿದ್ದಾರೆ" ಎಂದು ರಾಥೋರ್​ ಉತ್ತರಿಸಿದ್ದಾರೆ.

ನಾವು ಆಡಲು ಹೊರಟಿರುವ ಮುಂದಿನ ಇಂಗ್ಲೀಷ್​ ಸರಣಿಯಲ್ಲಿ ಒಂದು ವೇಳೆ ಅವರು (ಪೂಜಾರ) ಮೊಯೀನ್ ಅಲಿ ಅಥವಾ ಯಾವುದೇ ಸ್ಪಿನ್ನರ್​ಗಳ ವಿರುದ್ಧ ವಿಕೆಟ್​ ಬಿಟ್ಟು ಮುಂದೆ ಬಂದು ಸಿಕ್ಸರ್​ ಬಾರಿಸಿದ್ರೆ, ನಾನು ಅರ್ಧ ಮೀಸೆ ತೆಗೆಸಿ ಆಡಲು ಬರುತ್ತೇನೆ, ಇದು ನನ್ನ ಮುಕ್ತ ಸವಾಲು ಎಂದು ಅಶ್ವಿನ್​ ತಮಾಷೆಯಾಗಿ ಹೇಳಿದ್ದಾರೆ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ

ಇದೊಂದು ಅದ್ಭುತ ಸವಾಲು, ಅದನ್ನು ಅವರು ಹೇಗೆ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡೋಣ. ಆದರೆ, ಅವರು ಈ ಸವಾಲನ್ನು ಸ್ವೀಕರಿಸುತ್ತಾರೆ ಎಂದು ನಾನು ಭಾವಿಸಿಲ್ಲ ಎಂದು ರಾಥೋರ್ ತಿಳಿಸಿದ್ದಾರೆ.

ಕಳೆದ ಆಸೀಸ್ ಪ್ರವಾಸದಲ್ಲಿ ಆಸೀಸ್ ಸ್ಪಿನ್ನರ್​ ವಿರುದ್ಧ ಚೇತೇಶ್ವರ್ ಪೂಜಾರ ಪ್ರಾಬಲ್ಯ ಸಾಧಿಸಿದ್ದರು. ಆದರೆ, ಈ ಪ್ರವಾಸದಲ್ಲಿ ಲಿಯಾನ್ ಎದುರಿಸಲು ಅವರು ತುಂಬಾ ತಾಪತ್ರಯ ಪಟ್ಟಿದ್ದರು. ಲಿಯಾನ್​ ವಿರುದ್ಧ ಪ್ರತಿ ಎಸೆತವನ್ನು ಎದುರಿಸುವಾಗ ನನಗೆ ಹೃದಯಬಡಿತ ಹೆಚ್ಚಾಗುತ್ತಿತ್ತು.

ಇವರು ಆಡುವುದನ್ನು ನೋಡಿ ಬೇರೆ ಆಟಗಾರರು ಕೂಡ, ಆ ಬೌಲಿಂಗ್​ ಎದುರಿಸುವುದು ಕಷ್ಟವೇನೋ ಎಂದು ಭಾವಿಸುತ್ತಿದ್ದರು. ಅದಕ್ಕಾಗಿ ತಾವೂ ಪೂಜಾರರನ್ನು ಸ್ಲೆಡ್ಜ್​ ಮಾಡುತ್ತಿದ್ದೇನೆ ಎಂದು ಅಶ್ವಿನ್ ನಂತರ ರಾಥೋರ್​ಗೆ ವಿವಿರಿಸಿದ್ದಾರೆ.

ಇದನ್ನು ಓದಿ:ಪಂತ್ ಅಥವಾ ನಾನು ಆಡುವ ಬಗ್ಗೆ ಮ್ಯಾನೇಜ್​ಮೆಂಟ್​ ನಿರ್ಧರಿಸಲಿದೆ: ವೃದ್ಧಿಮಾನ್ ಸಹಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.