ಲಂಡನ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿದ ಕಾಂಗೂರು ಪಡೆ ಮೊದಲ ಇನ್ನಿಂಗ್ಸ್ನಲ್ಲಿ 179ರನ್ಗಳಿಗೆ ಆಲ್ ಔಟ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಸಿದ ಆಸ್ಟ್ರೇಲಿಯಾ ತಂಡಕ್ಕೆ ಆಂಗ್ಲ ಬೌಲರ್ಗಳು ಶಾಕ್ ಮೇಲೆ ಶಾಕ್ ನೀಡಿದ್ರು. ಕರಾರುವಕ್ಕು ಬಾಲಿಂಗ್ ನಡೆಸಿದ ಜೋಫ್ರಾ ಆರ್ಚರ್ 6 ವಿಕೆಟ್ ಪಡೆದುಕೊಂಡು ಆಸೀಸ್ ತಂಡವನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
-
Australia are bowled out for 179!
— ICC (@ICC) August 22, 2019 " class="align-text-top noRightClick twitterSection" data="
Jofra Archer finishes with figures of 6/45 – an outstanding display of fast bowling.#Ashes pic.twitter.com/2SGowEvAPH
">Australia are bowled out for 179!
— ICC (@ICC) August 22, 2019
Jofra Archer finishes with figures of 6/45 – an outstanding display of fast bowling.#Ashes pic.twitter.com/2SGowEvAPHAustralia are bowled out for 179!
— ICC (@ICC) August 22, 2019
Jofra Archer finishes with figures of 6/45 – an outstanding display of fast bowling.#Ashes pic.twitter.com/2SGowEvAPH
ಒಂದೆಡೆ ವಿಕೆಟ್ ಉರುಳುತ್ತಿದ್ದರು ತಾಳ್ಮೆಯ ಅಟವಾಡಿದ ಡೇವಿಡ್ ವಾರ್ನರ್ 61 ರನ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನ 74 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಸೀಸ್ ಆಟಗಾರ ಕೂಡ ಆಂಗ್ಲ ಬೌಲರ್ಗಳನ್ನ ಎದುರಿಸಿಲಾಗಲಿಲ್ಲ. ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಅಂತಿಮವಾಗಿ 52.1 ಓವರ್ಗಳಲ್ಲಿ 179 ರನ್ಗಳಿಗೆ ಆಸ್ಟ್ರೇಲಿಯಾ ತಂಡ ಸರ್ವಪತನ ಕಂಡಿತು. ಇಂಗ್ಲೆಂಡ್ಪರ ಜೋಫ್ರಾ ಆರ್ಚರ್ 6 ವಿಕೆಟ್, ಸ್ಟುವರ್ಟ್ ಬ್ರಾಡ್ 2, ಕ್ರಿಸ್ ವೋಕ್ಸ್ 1 ಮತ್ತು ಬೆನ್ ಸ್ಟೋಕ್ಸ್ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.