ETV Bharat / sports

ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ಗೆ 135 ರನ್​ಗಳ ಜಯ: ಸರಣಿ 2-2 ರಲ್ಲಿ ಸಮಬಲ - England win fifth Test

ಕೊನೆಯ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 135 ರನ್​ಗಳಿಂದ ಮಣಿಸಿದ ಇಂಗ್ಲೆಂಡ್​ ಸರಣಿಯನ್ನು 2-2ರಲ್ಲಿ ಸಮಬಲ ಸಾಧಿಸಿದೆ. ಈ ಮೂಲಕ ಶತಮಾನಗಳ ಇತಿಹಾಸವಿರುವ ಆ್ಯಶಸ್​ನಲ್ಲಿ 47 ವರ್ಷಗಳ ನಂತರ ಸರಣಿಯನ್ನು ಎರಡು ತಂಡಗಳು ಹಂಚಿಕೊಂಡಿವೆ.

Ashes 2019
author img

By

Published : Sep 15, 2019, 11:30 PM IST

ಲಂಡನ್​: ಆ್ಯಶಸ್​ ಸರಣಿಯ 5ನೇ ಪಂದ್ಯದಲ್ಲಿ 135 ರನ್​ಗಳ ಅಂತರದಿಂದ ಮಣಿಸಿದ ಇಂಗ್ಲೆಂಡ್​ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸುವ ಮೂಲಕ ತವರಿನಲ್ಲಿ ಸರಣಿ ಸೋಲಿನ ಮುಖಭಂಗವನ್ನು ತಪ್ಪಿಸಿಕೊಂಡಿದೆ.

ಕೆನ್ನಿಂಗ್ಟನ್​ ಓವಲ್​ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ 399 ರನ್​ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾ 263 ರನ್​ಗಳಿಗೆ ಆಲೌಟ್​ ಆಗುವ ಮೂಲಕ 135 ರನ್​ಗಳಿಂದ ಇಂಗ್ಲೆಂಡ್​ಗೆ ಶರಣಾಯಿತು. ಈ ಮೂಲಕ ಆ್ಯಶಸ್​ ಸರಣಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ತಂಡಗಳು ಆ್ಯಶಸ್​ ಸರಣಿಯನ್ನು ಹಂಚಿಕೊಂಡವು.

399 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಸ್ಟುವರ್ಟ್​ ಬ್ರಾಡ್​ ವಾರ್ನರ್​(11), ಮಾರ್ಕಸ್​ ಹ್ಯಾರೀಸ್​ (9) ಹಾಗೂ ಸ್ಟಿವ್​ ಸ್ಮಿತ್(23)​ ವಿಕೆಟ್​ ಪಡೆದು ಆರಂಭಿಕ ಆಘಾತ ನೀಡಿದರು. ಜಾಕ್​ ಲೀಚ್​ ಲ್ಯಾಬಸ್​ಚಾಗ್ನೆ ವಿಕೆಟ್ ಪಡೆದರು.

ಈ ಹಂತದಲ್ಲಿ ಮ್ಯಾಥ್ಯೂ ವೇಡ್​ ಹಾಗೂ ಮಿಚೆಲ್​ ಮಾರ್ಷ್ 63 ರನ್​ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಬೌಲಿಂಗ್​ ಮಾಡಿದ ನಾಯಕ ರೂಟ್​ 24 ರನ್​ಗಳಿಸಿದ್ದ ಮಿಚೆಲ್​ ಮಾರ್ಷ್​ ವಿಕೆಟ್​ ಪಡೆದರು. ನಂತರ ಬಂದ ಟಿಮ್​ ಪೇನ್​(21)ರನ್ನು ಲೀಚ್ ಪೆವಿಲಿಯನ್​ಗಟ್ಟಿದರು.

ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಮ್ಯಾಥ್ಯೂ ವೇಡ್​ 166 ಎಸೆತಗಳಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್​ ಸಿಡಿಸಿ ರೂಟ್ ಬೌಲಿಂಗ್​ನಲ್ಲಿ ಸ್ಟಂಪ್​ ಔಟಾದರು. ಜಾಕ್​ ಲೀಚ್​ ನಥನ್​ ಲಿಯಾನ್​ ಹಾಗೂ ಹೇಜಲ್​ವುಡ್​ರನ್ನು ಒಂದೇ ಓವರ್​ನಲ್ಲಿ ಔಟ್​ ಮಾಡುವ ಮೂಲಕ ಆಸೀಸ್​ ಇನ್ನಿಂಗ್ಸ್​ಗೆ ತೆರೆ ಎಳೆದರು.

ಸ್ಟುವರ್ಟ್​ ಬ್ರಾಡ್​ 4, ಜಾಕ್​ ಲೀಚ್​ 4 ಹಾಗೂ ರೂಟ್​ 2 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು.

ಇಂಗ್ಲೆಂಡ್​ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 294 2ನೇ ಇನ್ನಿಂಗ್ಸ್​ನಲ್ಲಿ 329 ರನ್​ಗಳಿಸಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 225 ರನ್ ​ಗಳಿಸಿತ್ತು.

ಜೋಫ್ರಾ ಆರ್ಚರ್​ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಬೆನ್​ಸ್ಟೋಕ್ಸ್​ ಇಂಗ್ಲೆಂಡ್​ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಸ್ಟಿವ್​ ಸ್ಮಿತ್​ ಆಸ್ಟ್ರೇಲಿಯ ಪರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Intro:Body:Conclusion:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.