ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ 7 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ಗಾಯಕ್ಕೆ ತುತ್ತಾಗಿದ್ದು ಸರಣಿಯಿಂದ ಹೊರಬಿದ್ದಿದ್ದಾರೆ.
ಇಂಗ್ಲೆಂಡ್ ತಂಡದ ಗರಿಷ್ಠ ಟೆಸ್ಟ್ ವಿಕೆಟ್ ಪಡೆದಿರುವ ಬೌಲರ್ ಆಗಿರುವ ಆ್ಯಂಡರ್ಸನ್ ಎರಡನೇ ಟೆಸ್ಟ್ ವೇಳೆ ಪಕ್ಕೆಲುಬು ನೋವಿಗೆ ತುತ್ತಾಗಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
ಮೊದಲ ಟೆಸ್ಟ್ ಸೋತಿದ್ದ ಇಂಗ್ಲೆಂಡ್ ಆ್ಯಂಡರ್ಸನ್ ಹಾಗೂ ಬೆನ್ಸ್ಟೋಕ್ ಉತ್ತಮ ಪ್ರದರ್ಶನದ ನೆರವಿನಿಂದ ಎರಡನೇ ಟೆಸ್ಟ್ನಲ್ಲಿ 189 ರನ್ಳಿಂದ ಗೆದ್ದು ಬೀಗಿತ್ತು. 37 ವರ್ಷದ ಆ್ಯಂಡರ್ಸನ್ ಈ ಪಂದ್ಯದಲ್ಲಿ ತಮ್ಮ 28 ನೇ 5 ವಿಕೆಟ್ ಗೊಂಚಲು ಪಡೆದು ಅಶ್ವಿನ್ ಹಾಗೂ ಇಯಾನ್ ಬೋಥಮ್ ದಾಖಲೆ ಬ್ರೇಕ್ ಮಾಡಿದ್ದರು.
ಆ್ಯಶಸ್ ಟೆಸ್ಟ್ ಸರಣಿ ವೇಳೆ ಗಾಯಕ್ಕೆ ತುತ್ತಾಗಿದ್ದ ಆ್ಯಂಡರ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಮರಳಿದ್ದರು. ಇದೀಗ ಮತ್ತೆ ಗಾಯ ಅವರ ಟೆಸ್ಟ್ ಕರಿಯರ್ಗೆ ಕಂಟಕವಾಗಿದೆ. ಅಲ್ಲದೇ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್ ಆಗಿದ್ದ ಆ್ಯಂಡಿ ಅನುಪಸ್ಥಿತಿ ಮೂರನೇ ಟೆಸ್ಟ್ನಲ್ಲಿ ಆಂಗ್ಲರನ್ನು ಕಾಡಲಿದೆ.