ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು 2021ರ ಮಿನಿ ಹರಾಜಿಗೂ ಮುನ್ನ 12 ಆಟಗಾರರನ್ನು ಉಳಿಸಿಕೊಂಡಿದ್ದು, ಕೆಲ ಆಟಗಾರರನ್ನು ಕೈಬಿಟ್ಟಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಅವರನ್ನು ಕೂಡ ತಂಡದಿಂದ ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡ ನಂತರ ಪಾರ್ಥೀವ್ ಪಟೇಲ್ ಟ್ವೀಟ್ ಮಾಡಿದ್ದು ಆರ್‌ಸಿಬಿಗೆ ಧನ್ಯವಾದ ಹೇಳುವ ಮೂಲಕ ನಯವಾಗೇ ತಿವಿದಂತಿದೆ.
ಕಳೆದ ಐಪಿಲ್ ಬಳಿಕ ಪಾರ್ಥೀವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯಲ್ಲಿ ಪಾರ್ಥೀವ್ ಪಟೇಲ್ ಅವರನ್ನು ಹೆಸರಿಸಿ ನಿವೃತ್ತರಾಗಿದ್ದಾರೆ ಎಂದು ಉಲ್ಲೇಖಿಸಿದೆ.
-
An absolute honour to be released after being retired . ... thank you @RCBTweets
— parthiv patel (@parthiv9) January 20, 2021 " class="align-text-top noRightClick twitterSection" data="
">An absolute honour to be released after being retired . ... thank you @RCBTweets
— parthiv patel (@parthiv9) January 20, 2021An absolute honour to be released after being retired . ... thank you @RCBTweets
— parthiv patel (@parthiv9) January 20, 2021
"ನಿವೃತ್ತಿ ಘೋಷಿಸಿದ ನಂತರ ಬಿಡುಗಡೆಗೊಳಿಸಿರುವುದಕ್ಕೆ ಗೌರವ ಸಲ್ಲಿಸುತ್ತಿದ್ದೇನೆ, ಧನ್ಯವಾದಗಳು ಆರ್‌ಸಿಬಿ" ಎಂದು ಪಾರ್ಥೀವ್ ಪಟೇಲ್ ಟ್ವೀಟ್ ಮಾಡಿದ್ದಾರೆ.
ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು
ವಿರಾಟ್ ಕೊಹ್ಲಿ, ಡಿವಿಲಿಯರ್ಸ್, ಯುಜ್ವೇಂದ್ರ ಚಹಾಲ್, ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್ಪೆ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಹ್ಬಾಜ್ ಅಹ್ಮದ್, ಪವನ್ ದೇಶಪಾಂಡೆ, ಆ್ಯಡಂ ಜಂಪಾ, ಕೇನ್ ರಿಚರ್ಡ್ಸನ್
ತಂಡದಿಂದ ಕೈಬಿಟ್ಟಿರುವ ಆಟಗಾರರು
ಆ್ಯರೋನ್ ಫಿಂಚ್, ಕ್ರಿಸ್ ಮೋರಿಸ್, ಉಮೇಶ್ ಯಾದವ್, ಮೊಯೀನ್ ಅಲಿ, ಇಸುರು ಉದಾನ, ಡೇಲ್ ಸ್ಟೈನ್, ಗುರುಕಿರಾತ್ ಮನ್, ಶಿವಂ ದುಬೆ, ಅನಿವೃದ್ ಜೋಶಿ, ಪವನ್ ನೇಗಿ ಸೇರಿದಂತೆ ಹಲವು ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.