ಸಿಡ್ನಿ (ಆಸ್ಟ್ರೇಲಿಯಾ): ಕ್ರಿಕೆಟ್ ಆಸ್ಟ್ರೇಲಿಯಾ 2023 ವಿಶ್ವಕಪ್ನ ಲೀಗ್ ಪಂದ್ಯಗಳು ಮುಗಿದ ಬಳಿಕ ತನ್ನ ಟೂರ್ನಿಯ ತಂಡವನ್ನು ಪ್ರಕಟಿಸಿದೆ. ಆಸಿಸ್ ಕ್ರಿಕೆಟ್ ಪ್ರಕಟಿಸಿರುವ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಆಸ್ಟ್ರೇಲಿಯಾದ ಮೂವರು ಆಟಗಾರರು ತಂಡದಲ್ಲಿದ್ದಾರೆ. ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲಾಗಿದೆ.
2023ರ ವಿಶ್ವಕಪ್ ಚಾಂಪಿಯನ್ ಯಾರಾಗುತ್ತಾರೆ ಎಂಬುದು ಇನ್ನು ಮೂರು ಪಂದ್ಯಗಳ ಫಲಿತಾಂಶದ ಬಳಿಕ ತಿಳಿದು ಬರಲಿದೆ. ಈಗಾಗಲೇ ಸೆಮೀಸ್ಗೆ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮ ತ್ತು ನ್ಯೂಜಿಲೆಂಡ್ ತಂಡ ಆಯ್ಕೆ ಆಗಿದೆ. ನ.15,16 ರಂದು ಸೆಮೀಸ್ ಪಂದ್ಯಗಳು ನಡೆದರೆ, 19 ರಂದು ಫೈನಲ್ ನಡೆಯಲಿದೆ. ಈ ನಾಲ್ಕು ಟಾಪ್ ತಂಡಗಳಿಂದ ಕ್ರಿಕೆಟ್ ಆಸ್ಟ್ರೇಲಿಯಾ 11 ಆಟಗಾರರ ಒಂದು ತಂಡವನ್ನು ಆಯ್ಕೆ ಮಾಡಿದೆ.
ಈ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಆಯ್ಕೆ ಆಗಿದ್ದಾರೆ. 4ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ನಡೆಯುತ್ತಿರುವ ವಿಶ್ವಕಪ್ನಲ್ಲಿ ವಿರಾಟ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. 9 ಪಂದ್ಯಗಳಲ್ಲಿ 88.50 ಸ್ಟ್ರೈಕ್ರೇಟ್ನಿಂದ 99ರ ಸರಾಸರಿಯಲ್ಲಿ 2 ಶತಕ ಮತ್ತು 5 ಅರ್ಧಶತಕ ಗಳಿಸಿ 594 ರನ್ ಕಲೆಹಾಕಿದ್ದಾರೆ.
ವಿರಾಟ್ ಜೊತೆಗೆ ಭಾರತ ಮೂವರು ಆಟಗಾರರು ಆಯ್ಕೆ ಆಗಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾ ಎಂಟನೇ ಆಟಗಾರ ಆಗಿದ್ದಾರೆ. ಜಡೇಜಾ ವಿಶ್ವಕಪ್ನ 9 ಪಂದ್ಯಗಳಿಂದ 111 ರನ್ ಗಳಿಸಿದ್ದು, 16 ವಿಕೆಟ್ ಪಡೆದುಕೊಂಡಿದ್ದಾರೆ. ಮೊಹಮ್ಮದ್ ಶಮಿ 9ನೇ ಆಟಗಾರ ಹಾಗೇ 11ನೇ ಆಟಗಾರನಾಗಿ ಜಸ್ಪ್ರೀತ್ ಬುಮ್ರಾ ಆಯ್ಕೆ ಆಗಿದ್ದಾರೆ. ಶಮಿ ಪ್ರಸ್ತುತ ವಿಶ್ವಕಪ್ನಲ್ಲಿ 5 ಪಂದ್ಯದಿಂದ 16 ವಿಕೆಟ್ ಪಡೆದುಕೊಂಡಿದ್ದಾರೆ. ಬುಮ್ರಾ 9 ಪಂದ್ಯದಿಂದ 17 ವಿಕೆಟ್ ಕಬಳಿಸಿದ್ದಲ್ಲದೇ, 3.65ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.
ಈ ತಂಡದಲ್ಲಿ ಆರಂಭಿಕರಾಗಿ ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ವಿಂಟನ್ ಡಿ ಕಾಕ್ ನಡೆಯುತ್ತಿರುವ ವಿಶ್ವಕಪ್ನಲ್ಲಿ 9 ಪಂದ್ಯಗಳನ್ನು ಆಡಿದ್ದು, 109.2 ಸ್ಟ್ರೈಕ್ ರೇಟ್ನಲ್ಲಿ 65.67 ಸರಾಸರಿಯಲ್ಲಿ 591 ರನ್ ಕಲೆಹಾಕಿದ್ದಾರೆ. ಪ್ರಸ್ತುತ ವಿಶ್ವಕಪ್ನಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಆಗಿದ್ದಾರೆ. ಅವರ ಬ್ಯಾಟ್ನಿಂದ ಈ ವರ್ಷ 4 ಶತಕಗಳು ಬಂದಿವೆ. ಡಿ ಕಾಕ್ ಅವರನ್ನು ಕೀಪರ್ ಆಗಿ ಸಹ ತಂಡಕ್ಕೆ ಸೇರಿಸಿಕೊಂಡಿದೆ.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನಡೆಯುತ್ತಿರುವ ವಿಶ್ವಕಪ್ನಲ್ಲಿ 9 ಪಂದ್ಯಗಳಿಂದ 55.44 ಸರಾಸರಿಯಲ್ಲಿ 105.5 ಸ್ಟ್ರೈಕ್ ರೇಟ್ನಿಂದ 499 ರನ್ ಗಳಿಸಿದ್ದಾರೆ. ಇವರ ಬ್ಯಾಟ್ನಿಂದ ಎರಡು ಶತಕಗಳು ಬಂದಿವೆ. ಟೂರ್ನಿಯಲ್ಲಿ ಈವರೆಗೆ 5ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ.
3ನೇ ಸ್ಥಾನಕ್ಕೆ ಕಿವೀಸ್ನ ಉದಯೋನ್ಮುಖ ಆಟಗಾರ ರಚಿನ್ ರವೀಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. 23 ವರ್ಷದ ಯುವ ಆಟಗಾರ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ ಸ್ಥಾನವನ್ನು ಅವರ ಅನುಪಸ್ಥಿತಿಯಲ್ಲಿ ತುಂಬಿದ್ದರು. 9 ಪಂದ್ಯಗಳಿಂದ 70.63 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 565 ರನ್ಗಳಿಸಿದರು. ಬೌಲಿಂಗ್ ಕೂಡಾ ಮಾಡಿದ್ದು, 5 ವಿಕೆಟ್ ಪಡೆದಿದ್ದಾರೆ.
4ನೇ ಸ್ಥಾನಕ್ಕೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದು, ಅಲ್ಲದೇ ತಂಡದ ನಾಯಕನನ್ನಾಗಿ ನೇಮಕ ಮಾಡಿದೆ. ನಡೆಯುತ್ತಿರುವ ವಿಶ್ವಕಪ್ನಲ್ಲಿ ವಿರಾಟ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. 9 ಪಂದ್ಯಗಳಲ್ಲಿ 88.50 ಸ್ಟ್ರೈಕ್ರೇಟ್ನಿಂದ 99ರ ಸರಾಸರಿಯಲ್ಲಿ 2 ಶತಕ ಮತ್ತು 5 ಅರ್ಧಶತಕ ಗಳಿಸಿ 594 ರನ್ ಕಲೆಹಾಕಿದ್ದಾರೆ.
ಉಳಿದಂತೆ ತಂಡದಲ್ಲಿ 5,6,7 ಸ್ಥಾನಕ್ಕೆ ಕ್ರಮವಾಗಿ ಐಡೆನ್ ಮಾರ್ಕ್ರಾಮ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್ ಇದ್ದಾರೆ. ಆಡಮ್ ಝಂಪಾ 10ನೇ ಆಟಗಾರ ಆಗಿದ್ದಾರೆ. ಹೆಚ್ಚುವರಿಯಾಗಿ ಶ್ರೀಲಂಕಾದ ದಿಲ್ಶನ್ ಮಧುಶಂಕ ಅವರನ್ನು ಬೌಲಿಂಗ್ ಯುನಿಟ್ಗೆ ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಸೇರಿ ಮೂವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ