ETV Bharat / sports

ಭಾರತದ ಟೆಸ್ಟ್​ ಕ್ರಿಕೆಟ್​ ಯಶಸ್ಸಿಗೆ ಕೊಹ್ಲಿ ಕಾರಣ: ರೋಹಿತ್ ಶರ್ಮಾ - ಭಾರತ ಟೆಸ್ಟ್​ ಯಶಸ್ಸು ಕೊಹ್ಲಿ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಶುಕ್ರವಾರದಿಂದ ಆರಂಭವಾಗಲಿದೆ. ರೋಹಿತ್ ಶರ್ಮಾ ಅವರಿಗೆ ನಾಯಕನಾಗಿ ಇದು ಮೊದಲ ಪಂದ್ಯವೂ ಹೌದು. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿರಾಟ್ ಕೊಹ್ಲಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

Rohit Sharma on virat kohli's 100th test
ವಿರಾಟ್​ ಕೊಹ್ಲಿ 100ನೇ ಟೆಸ್ಟ್, ರೋಹಿತ್ ಶರ್ಮಾ
author img

By

Published : Mar 3, 2022, 4:59 PM IST

ಮೊಹಾಲಿ: 100ನೇ ಟೆಸ್ಟ್​ ಮೈಲಿಗಲ್ಲಿನಲ್ಲಿರುವ ಭಾರತ ಟೆಸ್ಟ್ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹಾಲಿ ನಾಯಕ ರೋಹಿತ್ ಶರ್ಮಾ, ನಮ್ಮ ಟೆಸ್ಟ್​ ತಂಡ ಇಂದು ಅತ್ಯುತ್ತಮ ಸ್ಥಾನದಲ್ಲಿದೆ ಎಂದರೆ, ಇದರ ಯಶಸ್ಸಿನ ಶ್ರೇಯ ವಿರಾಟ್​ ಕೊಹ್ಲಿಗೆ ಸಲ್ಲಬೇಕು ಎಂದರು.

"ಒಂದು ತಂಡವಾಗಿ ನಾವಿಂದು ಅತ್ಯುತ್ತಮ ಸ್ಥಾನದಲ್ಲಿದ್ದೇವೆ. ಈ ಮಾದರಿಯಲ್ಲಿ ನಾವು ಶ್ರೇಷ್ಠ ಸ್ಥಾನ ತಲುಪಿರುವುದರ ಸಂಪೂರ್ಣ ಕೊಡುಗೆ ಕೊಹ್ಲಿಗೆ ಸಲ್ಲುತ್ತದೆ. ಅವರು ಟೆಸ್ಟ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಏನು ಮಾಡಿದ್ದಾರೋ ಅದು ನೋಡಲು ಅದ್ಭುತವಾಗಿದೆ. ಅವರು ಬಿಟ್ಟು ಹೋಗಿರುವ ಸ್ಥಳದಿಂದ ನಾನು (ನಾಯಕತ್ವ) ಅದನ್ನು ತೆಗೆದುಕೊಳ್ಳಬೇಕಾಗಿದೆ. ಸೂಕ್ತವಾದ ಆಟಗಾರರೊಂದಿಗೆ ಸರಿಯಾದ ಕೆಲಸವನ್ನು ತೆಗಿಸುವ ಜವಾಬ್ದಾರಿ ನನ್ನ ಮೇಲಿದೆ" ಎಂದು ರೋಹಿತ್ ಶರ್ಮಾ ಟೆಸ್ಟ್​ ನಾಯಕನಾಗಿ ಮೊದಲ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

100ನೇ ಟೆಸ್ಟ್​ ಅದ್ಭುತ ಪಯಣ: ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದಾಗಿನಿಂದ ಕೊಹ್ಲಿಗೆ ಇದೊಂದು ಸುದೀರ್ಘ ಪಯಣವಾಗಿದೆ. ಈಗ ಅವರು 100ನೇ ಟೆಸ್ಟ್​ ಪಂದ್ಯವನ್ನಾಡಲು ಹೊರಟಿದ್ದು ಅದ್ಭುತ ಸಾಧನೆ. ಈ ಸ್ವರೂಪದ ಕ್ರಿಕೆಟ್​ನಲ್ಲಿ ಅವರು ಅಮೋಘ ಸಾಧನೆ ಮಾಡಿದ್ದಾರೆ. ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಹಲವು ಮಹತ್ವದ ಬದಲಾವಣೆ ಮಾಡಿದ್ದಾರೆ ಎಂದು ಹಿಟ್​ಮ್ಯಾನ್​ ಶ್ಲಾಘಿಸಿದರು.

ಪಂದ್ಯವನ್ನು ವಿಶೇಷವಾಗಿಸಲು ಬಯಸುತ್ತೇವೆ: ಕೊಹ್ಲಿ ಪಾಲಿನ 100ನೇ ಟೆಸ್ಟ್​ ಪಂದ್ಯವನ್ನು ನಾವು ವಿಶೇಷವಾಗಿಸಲು ಬಯಸುತ್ತೇವೆ. ನಾವೆಲ್ಲರೂ ಅದಕ್ಕಾಗಿ ಸಿದ್ಧರಿದ್ದೇವೆ ಮತ್ತು ಐದು ದಿನಗಳ ಕ್ರಿಕೆಟ್ ಅತ್ಯುತ್ತಮವಾಗಿರಲಿದೆ. ವಿರಾಟ್ ಆಟವನ್ನು ನೋಡಲು ಪ್ರೇಕ್ಷಕರು ಬರುತ್ತಿದ್ದಾರೆ ಮತ್ತು ಅದು ಕೂಡ ಒಂದು ದೊಡ್ಡ ವಿಷಯ ಎಂದು ಟೀಮ್ ಇಂಡಿಯಾ ನಾಯಕ ಹೇಳಿದರು.

ಕೊಹ್ಲಿ ನಾಯಕತ್ವದ ಅತ್ಯುತ್ತಮ ಕ್ಷಣ: ಕೊಹ್ಲಿ ನಾಯಕತ್ವದಲ್ಲಿ ಆಡಿರುವ ರೋಹಿತ್ 2018ರ ಆಸ್ಟ್ರೇಲಿಯಾ ಪ್ರವಾಸ ಅತ್ಯುತ್ತಮವಾದ ಕ್ಷಣವಾಗಿದೆ. ತಂಡವಾಗಿ ನಾವು 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸಿದ್ದೆವು. ಅದೊಂದು ದೊಡ್ಡ ಸರಣಿ ಗೆಲುವಾಗಿತ್ತು. ಆ ವೇಳೆ ವಿರಾಟ್​ ಕೊಹ್ಲಿ ನಮ್ಮ ನಾಯಕನಾಗಿದ್ದರು ಎಂದು ಮೆಲುಕು ಹಾಕಿದರು.

ಕೊಹ್ಲಿಯ ಅತ್ಯುತ್ತಮ ಶತಕ: ದೀರ್ಘ ಮಾದರಿಯಲ್ಲಿ ಕೊಹ್ಲಿ 27 ಶತಕ ಸಿಡಿಸಿದ್ದಾರೆ. ಇದರಲ್ಲಿ ನಿಮ್ಮ ನೆಚ್ಚಿನ ಶತಕ ಯಾವುದು ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ನಾನೊಬ್ಬ ಬ್ಯಾಟರ್​ ಆಗಿ ಆತ 2013ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿದ ಶತಕ ಶ್ರೇಷ್ಠ ಇನ್ನಿಂಗ್ಸ್ ಎಂದು ಭಾವಿಸುತ್ತೇನೆ. ಆ ಪಿಚ್​ನಲ್ಲಿ ಆಡುವುದು ಸವಾಲಿನದ್ದಾಗಿತ್ತು. ಆ ಸಂದರ್ಭದಲ್ಲಿ ಮಾರಕ ವೇಗಿಗಳಾದ ಡೇಲ್ ಸ್ಟೈನ್, ಮಾರ್ನ್​ ಮಾರ್ಕೆಲ್, ಫಿಲಾಂಡರ್​, ಮತ್ತು ಜಾಕ್​ ಕಾಲಿಸ್ ಅಂತಹ ಬೌಲರ್​ಗಳನ್ನು ಎದುರಿಸುವುದು ಸುಲಭದ ಸಂಗತಿಯಾಗಿರಲಿಲ್ಲ. ಕೊಹ್ಲಿ ದ.ಆಫ್ರಿಕಾ ವೇಗಿಗಳ ಮಾರಕ ಬೌಲಿಂಗ್​ ಎದುರಿಸಿ ಶತಕ ಬಾರಿಸಿದ್ದರು. ಇನ್ನು ಅವರು 2018ರಲ್ಲಿ ಪರ್ತ್​ನಲ್ಲಿ ಶತಕ ಸಿಡಿಸಿದ್ದರು. ಆದರೆ ಜೋಹನ್ಸ್​ ಬರ್ಗ್​ನಲ್ಲಿ ಸಿಡಿಸಿದ ಶತಕ ಅತ್ಯುತ್ತಮವಾದದ್ದು ಎಂದು ರೋಹಿತ್ ನೆನಪಿಸಿಕೊಂಡರು.

ಇದನ್ನೂ ಓದಿ:

ವಿರಾಟ್‌ ಕೊಹ್ಲಿ 100ನೇ ಟೆಸ್ಟ್‌ ಪಂದ್ಯ ಗೆದ್ದು ಸ್ಮರಣೀಯವಾಗಿಸಲು ನಾಯಕ ರೋಹಿತ್‌ ಪಡೆ ರಣತಂತ್ರ..

ಕೊಹ್ಲಿ ಸಾಧನೆ ಯುವ ಕ್ರೀಡಾಪಟುಗಳಿಗೆ ನಿಜಕ್ಕೂ ಸ್ಪೂರ್ತಿ: ಸಚಿನ್​ ತೆಂಡೂಲ್ಕರ್​ ಗುಣಗಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.