ETV Bharat / sports

IPLಗೋಸ್ಕರ ದಿನಾಂಕ ಬದಲಿಸಿಕೊಂಡ ಕೆರಿಬಿಯನ್​ ಪ್ರೀಮಿಯರ್ ಲೀಗ್​

author img

By

Published : Jun 18, 2021, 9:19 PM IST

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳಿಗೋಸ್ಕರ ಕೆರಿಬಿಯನ್​ ಪ್ರೀಮಿಯರ್ ಲೀಗ್​ ತನ್ನ ವೇಳಾಪಟ್ಟಿ ಬದಲಿಸಿಕೊಳ್ಳಲು ನಿರ್ಧರಿಸಿದೆ.

IPL
IPL

ಮುಂಬೈ: ಇಂಡಿಯನ್​​ ಪ್ರೀಮಿಯರ್​ ಲೀಗ್​​ನ ಉಳಿದ ಪಂದ್ಯ ಯುಎಇನಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ಮಂಡಳಿ ಈಗಾಗಲೇ ನಿರ್ಧಾರ ಕೈಗೊಂಡಿದೆ. ಬರುವ ಅಕ್ಟೋಬರ್​​-ಸೆಪ್ಟೆಂಬರ್​ ತಿಂಗಳಲ್ಲಿ ಈ ಪಂದ್ಯಗಳು ನಡೆಯಲಿದ್ದು, ಅದಕ್ಕಾಗಿ ಬಿಸಿಸಿಐ ವೇಳಾಪಟ್ಟಿ ತಯಾರು ಮಾಡ್ತಿದೆ. ಅದಕ್ಕಾಗಿ ವೆಸ್ಟ್​ ಇಂಡೀಸ್​ನಲ್ಲಿ ನಡೆಯಬೇಕಾಗಿರುವ ಕೆರಿಬಿಯನ್​ ಪ್ರೀಮಿಯರ್ ಲೀಗ್​ ಟೂರ್ನಿ ಆದಷ್ಟು ಬೇಗ ಆರಂಭ ಮಾಡುವಂತೆ ಬಿಸಿಸಿಐ ಈಗಾಗಲೇ ವೆಸ್ಟ್​ ಇಂಡೀಸ್ ಕ್ರಿಕೆಟ್ ಮಂಡಳಿ ಬಳಿ ಮನವಿ ಮಾಡಿದ್ದು, ಅದಕ್ಕೆ ಇದೀಗ ಗ್ರೀನ್​​ ಸಿಗ್ನಿಲ್​ ಸಿಕ್ಕಿದೆ.

ಕೆರಿಬಿಯನ್​ ಪ್ರೀಮಿಯರ್​ ಲೀಗ್​ ಇದೀಗ ಆಗಸ್ಟ್​ ತಿಂಗಳಿಂದ ಸೆಪ್ಟೆಂಬರ್​ವರೆಗೆ​ ನಡೆಯಲಿದೆ. ಹೀಗಾಗಿ ಇಂಡಿಯನ್​ ಪ್ರೀಮಿಯರ್ ಲೀಗ್​​ ಸೆಪ್ಟೆಂಬರ್​ 18-19ರಿಂದ ಆರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾಗಿಯಾಗುವ ಅನೇಕ ಪ್ಲೇಯರ್ಸ್​ ಐಪಿಎಲ್​ನಲ್ಲಿ ಆಡುವ ಕಾರಣ, ಬಿಸಿಸಿಐ ಈ ಹಿಂದೆ ವೆಸ್ಟ್​ ಇಂಡೀಸ್ ಕ್ರಿಕೆಟ್ ಮಂಡಳಿ ಬಳಿ ಮನವಿ ಮಾಡಿಕೊಂಡಿತ್ತು. ಇದೀಗ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

ಇದನ್ನೂ ಓದಿರಿ: WTC ಫೈನಲ್​​ ಪಂದ್ಯ: ಮಳೆಯಾಟಕ್ಕೆ ಮೊದಲ ದಿನದಾಟ ಸಂಪೂರ್ಣ ರದ್ದು

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ ಭಾರತದಲ್ಲೇ ಆಯೋಜನೆಗೊಂಡಿತ್ತು. ಮೊದಲಾರ್ಧ ಪಂದ್ಯಗಳು ಮುಕ್ತಾಯಗೊಳ್ಳುವ ವೇಳೆಗೆ ವಿವಿಧ ತಂಡದ ಪ್ಲೇಯರ್ಸ್​ಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲು ಶುರುವಾಗುತ್ತಿದ್ದಂತೆ ಟೂರ್ನಿ ರದ್ದು ಮಾಡಿ ಬಿಸಿಸಿಐ ಮಹತ್ವದ ಆದೇಶ ಹೊರಹಾಕಿತ್ತು. ಹೀಗಾಗಿ ಟೂರ್ನಿ ಅರ್ಧಕ್ಕೆ ಮೊಟಕುಗೊಂಡಿದೆ. ಇದೀಗ ಉಳಿದ ಪಂದ್ಯ ನಡೆಸಲು ಮುಂದಾಗಿರುವ ಬಿಸಿಸಿಐ ಯುಎಇನಲ್ಲಿ ಟೂರ್ನಿ ಆಯೋಜನೆ ಮಾಡಲು ಪ್ಲಾನ್​ ಹಾಕಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.