ಮುಂಬೈ: ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನು ಗೆದ್ದು 1-0ಯಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಇದೇ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಯುವ ಬ್ಯಾಟರ್ ಶ್ರೇಯಸ್ ಇಂದು ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದು, ಇದಕ್ಕಿಂತ ಉತ್ತಮ ಜನ್ಮದಿನವನ್ನು ಕೇಳಲು ಸಾಧ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ಅಂತ್ಯಗೊಂಡ ಟೆಸ್ಟ್ನಲ್ಲಿ ಭಾರತ ತಂಡ ಕಿವೀಸ್ ವಿರುದ್ಧ 332 ರನ್ಗಳಿಂದ ಜಯ ಸಾಧಿಸಿತು. ವಿಶೇಷವೆಂದರೆ ಈ ದಿನ ಶ್ರೇಯಸ್ ಅಯ್ಯರ್ ಜೊತೆಗೆ ಆಲ್ರೌಂಡರ್ ರವೀಂದ್ರ ಜಡೇಜಾ, ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಕರ್ನಾಟದಕ ಕರುಣ್ ನಾಯರ್ ಜನ್ಮದಿನ ಕೂಡ ಹೌದು.
-
Test series win with #TeamIndia 🇮🇳 Couldn’t have asked for a better birthday 😁 Thank you everyone for your wishes. One to remember ❤️ pic.twitter.com/WBkXlgyjr5
— Shreyas Iyer (@ShreyasIyer15) December 6, 2021 " class="align-text-top noRightClick twitterSection" data="
">Test series win with #TeamIndia 🇮🇳 Couldn’t have asked for a better birthday 😁 Thank you everyone for your wishes. One to remember ❤️ pic.twitter.com/WBkXlgyjr5
— Shreyas Iyer (@ShreyasIyer15) December 6, 2021Test series win with #TeamIndia 🇮🇳 Couldn’t have asked for a better birthday 😁 Thank you everyone for your wishes. One to remember ❤️ pic.twitter.com/WBkXlgyjr5
— Shreyas Iyer (@ShreyasIyer15) December 6, 2021
" ಭಾರತ ತಂಡದ ಟೆಸ್ಟ್ ಸರಣಿಯನ್ನು ಗೆದ್ದಿದೆ. ಇದಕ್ಕಿಂತ ಉತ್ತಮವಾದ ಜನ್ಮದಿನವನ್ನ ಕೇಳುವುದಕ್ಕೆ ಸಾಧ್ಯವಿಲ್ಲ. ಶುಭಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇದು ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹದ್ದು" ಎಂದು ಟ್ರೋಫಿ ಸಹಿತ ಅಯ್ಯರ್ ಟ್ವೀಟ್ ಮಾಡಿ ತಮ್ಮ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ದೀರ್ಘ ಮಾದರಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 105 ಮತ್ತು 2ನೇ ಇನ್ನಿಂಗ್ಸ್ನಲ್ಲಿ 65 ರನ್ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಇದನ್ನೂ ಓದಿ:ಚೊಚ್ಚಲ ಪಂದ್ಯದಲ್ಲೇ ಅಯ್ಯರ್ ದಾಖಲೆ.. ಈ ಸಾಧನೆಗೈದ ದೇಶದ ಮೊದಲ ಕ್ರಿಕೆಟರ್ ಶ್ರೇಯಸ್