ಬರ್ಮಿಂಗ್‌ಹ್ಯಾಮ್: ಕಾಮನ್ವೆಲ್ತ್‌ನಲ್ಲಿ ಮೊದಲ ಬಾರಿಗೆ ನಡೆದ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡ ಬೆಳ್ಳಿ ರೇಖೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ನೀನಾ - ನಾನಾ ಹೋರಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಕೇವಲ 9 ರನ್ಗಳಿಂದ ಸೋಲು ಕಂಡಿದೆ. ಈ ಮೂಲಕ ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿತು.
-
A cliffhanger in Birmingham 😲
— ICC (@ICC) August 7, 2022 " class="align-text-top noRightClick twitterSection" data="
Australia held their nerve to take home the Gold medal 🙌🏻#B2022 | Report 👇🏻https://t.co/zWLBzlbKem
">A cliffhanger in Birmingham 😲
— ICC (@ICC) August 7, 2022
Australia held their nerve to take home the Gold medal 🙌🏻#B2022 | Report 👇🏻https://t.co/zWLBzlbKemA cliffhanger in Birmingham 😲
— ICC (@ICC) August 7, 2022
Australia held their nerve to take home the Gold medal 🙌🏻#B2022 | Report 👇🏻https://t.co/zWLBzlbKem
ಟಾಸ್ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಅಲಿಸ್ಸಾ ಹೀಲಿ (7 ರನ್) ಮೂರನೇ ಓವರ್‌ನಲ್ಲಿ ರೇಣುಕಾ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ನಂತರ ಆರಂಭಿಕ ಆಟಗಾರ್ತಿ ಬೆತ್ ಮೂನಿ ಜೊತೆ ಕೂಡಿಕೊಂಡ ನಾಯಕಿ ಮೆಗ್ ಲ್ಯಾನಿಂಗ್ 50 ರನ್‌ಗಳ ಜೊತೆಯಾಟ ನೀಡಿದರು. ತಂಡದ ಮೊತ್ತ 83 ಆಗಿದ್ದಾಗ ರನ್ ಕದಿಯಲು ಹೋದ ಮೆಗ್ ಲ್ಯಾನಿಂಗ್ (36 ರನ್) ರನೌಟ್ಗೆ ಬಲಿಯಾದರು.
ಲ್ಯಾನಿಂಗ್ ಔಟಾದ ಬಳಿಕ ಬಂದ ಆಟಗಾರ್ತಿಯರು ರನ್ಗಳಿಸಲು ವಿಫಲರಾದರು. ಆಸ್ಟ್ರೇಲಿಯಾ ಪರ ಬೆತ್ ಮೂನಿ 61 ರನ್, ತಹ್ಲಿಯಾ ಮೆಕ್‌ಗ್ರಾತ್ 2 ರನ್, ಆಶ್ಲೀ ಗಾರ್ಡ್ನರ್ 25 ರನ್, ಗ್ರೇಸ್ ಹ್ಯಾರಿಸ್ 2 ರನ್, ಅಲಾನಾ ಕಿಂಗ್ 1 ರನ್ಗೆ ಪೆವಿಲಿಯನ್ ಹಾದಿ ಹಿಡಿದ್ರೆ, ಹೇನ್ಸ್ 18 ರನ್ ಮತ್ತು ಸ್ಕಟ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.
ಒಟ್ಟಿನಲ್ಲಿ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ಗಳಿಗೆ 8 ವಿಕೆಟ್ಗಳನ್ನು ಕಳೆದುಕೊಂಡು 161 ರನ್ಗಳನ್ನು ಕಲೆ ಹಾಕಿತು. ಭಾರತದ ಪರ ರೆಣುಕಾ ಸಿಂಗ್ ಮತ್ತು ಸ್ನೇಹ ರಾಣ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
-
Silver for India in #B2022 🥈
— ICC (@ICC) August 7, 2022 " class="align-text-top noRightClick twitterSection" data="
Australia edge them in a thrilling final in Edgbaston! 😮
📝 Scorecard: https://t.co/2jCQ4wcdbl pic.twitter.com/xQTsodH0DU
">Silver for India in #B2022 🥈
— ICC (@ICC) August 7, 2022
Australia edge them in a thrilling final in Edgbaston! 😮
📝 Scorecard: https://t.co/2jCQ4wcdbl pic.twitter.com/xQTsodH0DUSilver for India in #B2022 🥈
— ICC (@ICC) August 7, 2022
Australia edge them in a thrilling final in Edgbaston! 😮
📝 Scorecard: https://t.co/2jCQ4wcdbl pic.twitter.com/xQTsodH0DU
ಆಸ್ಟ್ರೇಲಿಯಾ ನೀಡಿದ 162 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕರಾದ ಸ್ಮೃತಿ ಮಂಧಾನ (6 ರನ್) ಮತ್ತು ಶಪಾಲಿ ವರ್ಮಾ (11 ರನ್) ಕಡಿಮೆ ರನ್‌ಗಳಿಗೆ ಪೆವಿಲಿಯನ್ ಸೇರಿದರು. ಆಗ ತಂಡದ ಸ್ಕೋರ್ ಕೇವಲ 22 ರನ್ ಆಗಿತ್ತು. ಬಳಿಕ ಕ್ರೀಸ್ಗೆ ಬಂದ ರೋಡ್ರಿಗಾಸ್ (33 ರನ್) ಜತೆಗೂಡಿದ ಹರ್ಮನ್ ಪ್ರೀತ್ ಕೌರ್ ಇನಿಂಗ್ಸ್ ಕಟ್ಟಿದರು.
ಆದರೆ, ಈ ಜೋಡಿಯನ್ನು ಮೇಗನ್ ಸ್ಕಟ್ ಬೇರ್ಪಡಿಸಿದರು. ರೋಡ್ರಿಗಾಸ್ 14.3ನೇ ಎಸೆತದಲ್ಲಿ ಬೌಲ್ಡ್ ಆದರು. ಮುಂದಿನ ಓವರ್‌ಗಳಲ್ಲಿ ಪೂಜಾ ವಸ್ತ್ರಾಕರ್ (1 ರನ್) ಮತ್ತು ಹರ್ಮನ್‌ಪ್ರೀತ್ ಕೌರ್ ಅವರನ್ನು ಸತತ ಎಸೆತಗಳಲ್ಲಿ ಗಾರ್ಡ್ನರ್ ಔಟ್ ಮಾಡಿ ಭಾರತಕ್ಕೆ ಪೆಟ್ಟು ನೀಡಿದರು. ಇದರಿಂದಾಗಿ ಭಾರತ ಅಲ್ಪಾವಧಿಯಲ್ಲಿ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಸಹಿತ ಭಾರತ ಗೆಲುವಿನತ್ತ ಸಾಗಿತು. ವಿಕೆಟ್ ಕಳೆದುಕೊಂಡರೂ ಭಾರತ ರನ್ ರೇಟ್ ಕಡಿಮೆಯಾಗದಂತೆ ನೋಡಿಕೊಂಡಿತು. ದೀಪ್ತಿ ಶರ್ಮಾ (13 ರನ್) ಒಂದು ಬದಿಯಲ್ಲಿ ಕ್ರೀಸ್‌ನಲ್ಲಿದ್ದ ಕಾರಣ ಭಾರತ ಚಿನ್ನದ ಪದಕ ಗೆಲ್ಲಲು ಸಜ್ಜಾಗಿತ್ತು. ಆದರೆ 18.3 ಓವರ್‌ಗಳಲ್ಲಿ ದೀಪ್ತಿ ಶರ್ಮಾ ಅವರ ಸ್ಕಟ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆದರು. ಇದರಿಂದಾಗಿ ಭಾರತ ತೀವ್ರ ಒತ್ತಡಕ್ಕೆ ಸಿಲುಕಿತ್ತು. ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು.
ಯಾಸ್ತಿಕಾ ಭಾಟಿಯಾ ಮತ್ತು ಮೇಘನಾ ಸಿಂಗ್ ಕ್ರೀಸ್‌ನಲ್ಲಿದ್ದರು. ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಎಸೆತದಲ್ಲಿ ಮೇಘನಾ ಸಿಂಗ್ ಔಟಾದರು. ಮುಂದಿನ ಎಸೆತದಲ್ಲಿ ಯಾಸ್ತಿಕಾ ಭಾಟಿಯಾ ಎಲ್‌ಬಿಡಬ್ಲ್ಯೂ ಆಗಿ ಭಾರತದ ಹೋರಾಟವನ್ನು ಕೊನೆಗೊಳಿಸಿದರು. ಇದರೊಂದಿಗೆ ಚೊಚ್ಚಲ ಬಾರಿಗೆ ಚಿನ್ನಕ್ಕೆ ಮುತ್ತಿಕ್ಕುವ ಭಾರತದ ಆಸೆ ಬೆಳ್ಳಿಯೊಂದಿಗೆ ಕೊನೆಗೊಂಡಿತು.
ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ ಸರ್ವ ಪತನಗೊಂಡು 152 ರನ್ಗಳಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ 9 ರನ್‌ಗಳ ಸೋಲು ಕಂಡಿತು. ಆಸ್ಟ್ರೇಲಿಯಾ ತಂಡದ ಪರ ಆಶ್ಲೀ ಗಾರ್ಡ್ನರ್ 3 ವಿಕೆಟ್ ಪಡೆದು ಮಿಂಚಿದ್ರೆ, ಮೇಗನ್ ಸ್ಕಟ್ 2 ವಿಕೆಟ್, ಜೆಸ್ ಜೊನಾಸ್ಸೆನ್ ಮತ್ತು ಡಾರ್ಸಿ ಬ್ರೌನ್ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಆಸರೆಯಾದರು.
ಓದಿ: ಕಾಮನ್‌ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ ಜರೀನ್ಗೆ ಬಂಗಾರ, ಟೇಬಲ್ ಟೆನಿಸ್ನಲ್ಲಿ ಬೆಳ್ಳಿ ಪದಕ