ಕೊಲಂಬೊ(ಶ್ರೀಲಂಕಾ): ಕಳೆದ ಕೆಲ ತಿಂಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ ಹೀನಾಯ ಪ್ರದರ್ಶನ ನೀಡಿ 4-0 ಅಂತರದಿಂದ ಸರಣಿ ಕೈಚೆಲ್ಲಿತ್ತು. ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಅಂದಿನ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಹೆಗಲ ಮೇಲೆ ಹಾಕಿ ಅವರನ್ನು ಆ ಹುದ್ದೆಯಿಂದಲೇ ವಜಾಗೊಳಿಸಲಾಗಿತ್ತು. ಇದರ ನಂತರ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಎರಡು ವರ್ಷಗಳ ಅವಧಿಗೆ ಸಿಲ್ವರ್‌ವುಡ್ ಅವರನ್ನು ತನ್ನ ತಂಡದ ಮುಖ್ಯ ಕೋಚ್ ಆಗಿ ನೇಮಿಸಿತ್ತು.
ಕೇವಲ ಎರಡು ತಿಂಗಳ ಹಿಂದಷ್ಟೇ ಶ್ರೀಲಂಕಾ ಕೋಚ್ ಆಗಿ ಕೆಲಸ ಶುರು ಮಾಡಿರುವ 47 ವರ್ಷದ ಕ್ರಿಸ್ ಸಿಲ್ವರ್‌ವುಡ್ ಇದೀಗ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಏಷ್ಯಾ ಕಪ್ನಲ್ಲಿ ಯಾರೂ ಸಹ ಊಹಿಸಿದ ರೀತಿಯಲ್ಲಿ ತಂಡವನ್ನು ಸನ್ನದ್ಧಗೊಳಿಸಿದ್ದ ಕ್ರಿಸ್ ಸಿಲ್ವರ್‌ವುಡ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾರೆ. ಪಂದ್ಯ ನಡೆಯುತ್ತಿದ್ದಾಗ ಇವರು ಕೆಲವು ಕೋಡ್ ಬಳಕೆ ಮಾಡಿ, ಆಟಗಾರರಿಗೆ ಮಾಹಿತಿ ರವಾನಿಸುತ್ತಿದ್ದರು. ಅದು ಸಹ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.
-
Sri Lankan coach passing the information to the players on the ground, did the same when he was the England coach. pic.twitter.com/QeJOuFGxGz
— Johns. (@CricCrazyJohns) September 1, 2022 " class="align-text-top noRightClick twitterSection" data="
">Sri Lankan coach passing the information to the players on the ground, did the same when he was the England coach. pic.twitter.com/QeJOuFGxGz
— Johns. (@CricCrazyJohns) September 1, 2022Sri Lankan coach passing the information to the players on the ground, did the same when he was the England coach. pic.twitter.com/QeJOuFGxGz
— Johns. (@CricCrazyJohns) September 1, 2022
ಇದನ್ನೂ ಓದಿ: ಏಷ್ಯಾ ಕಪ್ 2022: ಪ್ರಶಸ್ತಿಗೆ ಮುತ್ತಿಕ್ಕಿದ ಶ್ರೀಲಂಕಾ ಗೆದ್ದ ಬಹುಮಾನದ ಮೊತ್ತ ಎಷ್ಟು ಗೊತ್ತೇ?
ಏಷ್ಯಾ ಕಪ್ನಲ್ಲಿ ಶ್ರೀಲಂಕಾ ಚಾಂಪಿಯನ್ ಆಗಲಿದೆ ಎಂಬ ವಿಶ್ವಾಸ ಯಾರಿಗೂ ಇರಲಿಲ್ಲ. ಅದೇ ರೀತಿಯಲ್ಲೇ ಅಭಿಯಾನವನ್ನೂ ಸಹ ಆರಂಭಿಸಿತ್ತು. ತಾನು ಆಡಿದ ಮೊದಲ ಪಂದ್ಯದಲ್ಲೇ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲುಂಡಿತ್ತು. ನಂತರ ಬಾಂಗ್ಲಾದೇಶದ ವಿರುದ್ಧ 2 ವಿಕೆಟ್ಗಳ ರೋಚಕ ಗೆಲುವು ಪಡೆದು, ಸೂಪರ್ ಫೋರ್ಗೆ ಲಗ್ಗೆ ಹಾಕಿತ್ತು. ಸೂಪರ್ ಫೋರ್ ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧ 4 ವಿಕೆಟ್ಗಳ ಭರ್ಜರಿ ವಿಜಯ ಸಾಧಿಸಿ, ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಬಳಿಕ ತಂಡ ಹಿಂತಿರುಗಿ ನೋಡಲಿಲ್ಲ. ಬಲಿಷ್ಠ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನೂ ಹಿಮ್ಮೆಟ್ಟಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಏಷ್ಯಾ ಕಪ್ನಲ್ಲಿ ಪಂದ್ಯದಿಂದ ಪಂದ್ಯಕ್ಕೆ ಚೇತರಿಕೆ ಕಂಡು, ಅತ್ಯುತ್ತಮ ಪ್ರದರ್ಶನವನ್ನೂ ನೀಡುತ್ತಾ ಸಾಗಿದ ಲಂಕಾ ಕೊನೆಯದಾಗಿ ಪ್ರಶಸ್ತಿ ಸುತ್ತಿನಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು ಪ್ರಶಸ್ತಿ ಗೆದ್ದುಕೊಂಡಿತು. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಶ್ರೀಲಂಕಾ ತಂಡದ ಕ್ಯಾಪ್ಟನ್ ಶನಕ, ತಂಡದ ಗೆಲುವಿನಲ್ಲಿ ಕೋಚ್ ಕ್ರಿಸ್ ಸಿಲ್ವರ್‌ವುಡ್ ಅವರ ಕೊಡುಗೆ ತುಂಬಾ ಇದೆ ಎಂದು ಸ್ಮರಿಸಿದರು.