ಹೈದರಾಬಾದ್: ಯೂನಿವರ್ಸಲ್ ಬಾಸ್ ಎಂದೇ ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಕೆಟಿಗ ಕ್ರಿಸ್‌ಗೇಲ್ ಆಗಾಗ ಮೈದಾನದಲ್ಲಿ ಮತ್ತು ಮೈದಾನದಾಚೆಗೂ ಅಭಿಮಾನಿಗಳನ್ನು ಎಂಟರ್ಟೈನ್ ಮಾಡುತ್ತಾರೆ. ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಗೇಲ್ ಇನ್ಸ್ಟಾಗ್ರಾಮ್ನಲ್ಲಿ ಸಮುದ್ರದಾಳಕ್ಕಿಳಿದು ವ್ಯಾಯಾಮ ಮಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಸ್ಕೂಬಾ ಡೈವ್ ಮಾಡಿದ ಕ್ರಿಸ್ ಗೇಲ್ ಸಮುದ್ರದಾಳದ ಜಲಚರಗಳನ್ನು ಬೆರಗುಗಣ್ಣಿಂದ ನೋಡಿ, ಆನಂದಿಸಿದ್ದಾರೆ. ಅಷ್ಟೇ ಏಕೆ?, ಸಮುದ್ರ ತಳದಲ್ಲಿ ಪುಶ್ ಆಪ್ಸ್ ಹೊಡೆದಿದ್ದಾರೆ. ಒಂದಷ್ಟು ಮರಳನ್ನು ಜೇಬಿಗೆ ಹಾಕಿಕೊಂಡು ಸಾಹಸವನ್ನೂ ಮಾಡಿದ್ದಾರೆ. ಇದ್ರ ಜೊತೆಗೆ ಇದೇ ವಿಡಿಯೋದಲ್ಲಿ ತಮ್ಮ ಎರಡು ಆಲ್ಬಂ ಹಾಡುಗಳನ್ನೂ (Oh Mama and Choco Loco Remix) ಪ್ರಮೋಟ್ ಮಾಡಿದ್ದಾರೆ.
ತಮ್ಮ ದೇಶದ ಉಳಿದ ಆಟಗಾರರ ಜೊತೆ ಹುಟ್ಟೂರಿಗೆ ವಾಪಸ್ಸಾಗದೆ ಮಾಲ್ಡೀವ್ಸ್ನಲ್ಲಿ ತಂಗಿರುವ ಗೇಲ್ ಇದೀಗ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದರಂತೆ ವಿಡಿಯೋ ಪೋಸ್ಟ್ ಮಾಡುತ್ತಾ ಅಭಿಮಾನಿಗಳಿಗೆ ರಂಜಿಸುತ್ತಿದ್ದಾರೆ.