ETV Bharat / sports

ಚೆನ್ನೈ ಸೂಪರ್​ ಕಿಂಗ್ಸ್​ ಪಾಲಾದ ಯುವ ಬ್ಯಾಟರ್​ ಸಮೀರ್​ ರಿಜ್ವಿ: ಈಟಿವಿ ಭಾರತದೊಂದಿಗೆ ವಿಶೇಷ ಸಂವಾದ - ಐಪಿಎಲ್ 17ನೇ ಆವೃತ್ತಿಯ ಹರಾಜು

ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಆಯ್ಕೆಯಾದ ಯುವ ಬ್ಯಾಟರ್​ ಸಮೀರ್​ ರಿಜ್ವಿ ಈಟಿವಿ ಭಾರತದೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ​

ಸಮೀರ್​ ರಿಜ್ವಿ ಈಟಿವಿ ಭಾರತದೊಂದಿಗೆ ವಿಶೇಷ ಸಂವಾದ

author img

By ETV Bharat Karnataka Team

Published : Dec 20, 2023, 11:59 AM IST

ಮೀರತ್( ಉತ್ತರಪ್ರದೇಶ)​: ನಿನ್ನೆ ದುಬೈನಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆದ ಯುವ ಬ್ಯಾಟರ್​ ಎಂದರೆ ಅದು ಸಮೀರ್ ರಿಜ್ವಿ. ಮೀರತ್ ಮೂಲದ 20 ವರ್ಷದ ಯುವ ಬ್ಯಾಟರ್​ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 8.40 ಕೋಟಿ ರೂ.ಗೆ ಖರೀದಿಸುವ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಬಲಗೈ ಬ್ಯಾಟರ್ ಆ​ದ ರಿಜ್ವಿ ದೇಶೀಯ ಕ್ರಿಕೆಟ್​ನಲ್ಲೂ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದೀಗ ಸಿಎಸ್​ಕೆ ಪಾಲಾದ ಬಗ್ಗೆ ರಿಜ್ವಿ ಈಟಿವಿ ಭಾರತದೊಂದಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಸಮೀರ್ ರಿಜ್ವಿ ಈಟಿವಿ ಭಾರತ್ ಜೊತೆ ಮಾತನಾಡಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದು ನನಗೆ ಅತೀವ ಸಂತೋಷವನ್ನು ನೀಡುತ್ತಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಅವರ ಜೊತೆ ಆಡುವುದು ನನ್ನ ದೊಡ್ಡ ಸಾಧನೆ ಆಗಿದೆ. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ತುಂಬಾ ಕೌಶಲ್ಯಗಳು ಕಲಿತುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಇನ್ನು ಸಮೀರ್​ನ ತಾಯಿ ರುಖ್ಯಾನ್​ ಮಾತನಾಡಿ, ತನ್ನ ಮಗನಿಗೆ ಬಾಲ್ಯದಿಂದಲೂ ಕ್ರಿಕೆಟ್‌ ಬಗ್ಗೆ ಒಲವು ಇತ್ತು. ಚಿಕ್ಕ ಹುಡುಗನಾಗಿದ್ದನಿಂದಲೂ ಆತನಿಗೆ ಕ್ರಿಕೆಟ್​ ಹುಚ್ಚಿತ್ತು. ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ ಆಗಿದ್ದಾನೆ. ತಮ್ಮ ಮಗ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಉತ್ತಮ ಪ್ರದರ್ಶನ ನೀಡಲಿದ್ದಾನೆ ಎಂಬ ಸಂಪೂರ್ಣ ಭರವಸೆ ಇದೆ. ಮುಂದೆ ಕೂಡ ಆತ ಭಾರತ ತಂಡಕ್ಕೆ ಆಯ್ಕೆಯಾಗಿ ದೇಶಕ್ಕಾಗಿ ಆಡಬೇಕು ಎಂದು ಹೇಳಿದರು

ಕ್ರಿಕೆಟಿಗನ ತಂದೆ ಮಾತನಾಡಿ, ಬಾಲ್ಯದಲ್ಲಿ ಸಮೀರ್ ಶಾಲೆಯ ಬದಲು ಕ್ರಿಕೆಟ್ ಮೈದಾನಕ್ಕೆ ಹೋಗುತ್ತಿದ್ದ. ಮೊದಲಿಗೆ ಆತ ಓದಿ ಒಳ್ಳೆಯ ಹುದ್ದೆಗೆ ಸೇರಬೇಕು ಎಂದುಕೊಂಡಿದ್ದೆ. ಆದರೆ ಆತ ಓದಿನ ಕಡೆ ಗಮನ ಹರಿಸಲೇ ಇಲ್ಲ. ಬಾಲ್ಯದಲ್ಲಿ ಓದಿಲ್ಲ ಎಂಬ ಕಾರಣಕ್ಕೆ ನನ್ನಿಂದ ಮಗ ಸಾಕಷ್ಟು ಪೆಟ್ಟುಗಳನ್ನು ತಿಂದಿದ್ದಾನೆ. ಸಮೀರ್​ಗೆ ಮೊದಲಿನಿಂದಲೂ ಕ್ರಿಕೆಟ್ ಬಗ್ಗೆ ಹೆಚ್ಚಿನ ಇತ್ತು. ಇದನ್ನು ಗಮನಿಸಿದ ಸಮೀರ್​ನ ಚಿಕ್ಕಪ್ಪ ತನ್ವೀರ್, ಆತನಿಗೆ ಕ್ರಿಕೆಟ್‌ಗೆ ತರಬೇತಿಗೆ ಸೇರಿಸಿದ್ದರು.

ಇದೀಗ ಐಪಿಎಲ್​ಗೆ ಆಯ್ಕೆಯಾಗಿದ್ದು ಅತೀವ ಖುಷಿ ತಂದಿದೆ. ತನ್ನ ಮಗ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಮೀರತ್‌ಗೆ ವಿಶ್ವಮಟ್ಟದಲ್ಲಿ ಹೆಸರು ಮಾಡಬೇಕು ಎಂಬುದು ನನ್ನ ಮಹದಾಸೆ ಎಂದರು.

ಸಮೀರ್​ ರಿಜ್ವಿ ಸಾಧನೆ: ಸಮೀರ್​ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​(UPCA)ದ ದೇಶೀಯ ಋತುವಿನಲ್ಲಿ ಆಡಿದ್ದಾರೆ. ಕಾನ್ಪುರ್ ಸೂಪರ್ ಸ್ಟಾರ್ಸ್ ಪರ ಆಡುವಾಗ ಲೀಗ್​ನಲ್ಲಿ ಅತಿ ವೇಗದ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಗೋರಖ್‌ಪುರ ಲಯನ್ಸ್ ವಿರುದ್ಧ 49 ಎಸೆತಗಳಲ್ಲಿ 104 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ಹಿಂದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಸಮೀರ್ ತಮ್ಮ ಪ್ರತಿಭೆ ತೋರಿದ್ದರು. ದೇಶೀಯ ಟಿ-20 ಸರಣಿಯಲ್ಲಿ ಅತಿ ಹೆಚ್ಚು ರನ್​​ ಗಳಿಸಿದ 13ನೇ ಆಟಗಾರನೂ ಆಗಿದ್ದಾರೆ.

ಟಿ-20 ಲೀಗ್​ನಲ್ಲಿ ಸಮೀರ್ 10 ಪಂದ್ಯಗಳನ್ನು ಆಡಿದ್ದು, 9 ಇನ್ನಿಂಗ್ಸ್‌ಗಳಲ್ಲಿ 50.56 ಸರಾಸರಿಯಲ್ಲಿ 455 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು ಒಂದು ಅರ್ಧ ಶತಕ ಸೇರಿದೆ. ಟಿ-20ಯಲ್ಲಿ ಸಮೀರ್ ರಿಜ್ವಿ 35 ಸಿಕ್ಸರ್ ಹಾಗೂ 38 ಬೌಂಡರಿ ಕೂಡ ಬಾರಿಸಿದ್ದಾರೆ.

ಇದನ್ನೂ ಓದಿ: ಅನ್​​​​​ಕ್ಯಾಪ್ಡ್​ ಆಟಗಾರನಿಗೆ ಕೋಟಿ ಸುರಿದ ಚೆನ್ನೈ: ಯಾರೀತ ಬಲ್ಲಿರಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.