ದುಬೈ: ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೇಲೆ ಯಾವ ರೀತಿಯ ಪ್ರಭಾವ ಬೀರಿದ್ದಾರೆ ಎಂಬುದನ್ನು ಅವರಿಂದಲೇ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ದೀರ್ಘಕಾಲದಿಂದ ಬೆಂಗಳೂರು ಫ್ರಾಂಚೈಸಿಯಲ್ಲಿರುವ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಸೋಮವಾರ ಕೆಕೆಆರ್ ವಿರುದ್ಧ 4 ವಿಕೆಟ್ಗಳ ಸೋಲು ಕಾಣುವ ಮೂಲಕ ಕೊಹ್ಲಿಯ 9 ವರ್ಷಗಳ ಆರ್ಸಿಬಿ ನಾಯಕತ್ವ ಕೊನೆಯಾಯಿತು. " ವಿರಾಟ್ ನಾಯಕನಾಗಿದ್ದ ಎಲ್ಲ ವರ್ಷಗಳಲ್ಲೂ ನಾನು ತಂಡದಲ್ಲಿದ್ದೇನೆ. ಈ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಬರುವ ಪದ ಕೃತಜ್ಞತೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮಂತಹ ನಾಯಕನನ್ನು ಪಡೆದಿರುವುದಕ್ಕೆ ನಾವು ತುಂಬಾ ಅದೃಷ್ಟವಂತರು" ಎಂದು ಡಿವಿಲಿಯರ್ಸ್ ಫ್ರಾಂಚೈಸಿ ಪೋಸ್ಟ್ ಮಾಡಿ ವಿಡಿಯೋದಲ್ಲಿ ಹೇಳಿದ್ದಾರೆ.
ನೀವು ಈ ತಂಡವನ್ನು ಮುನ್ನಡೆಸಿದ ರೀತಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ವಿಶೇಷವಾಗಿ ನಾನೊಬ್ಬ ಉತ್ತಮ ಆಟಗಾರನಾಗಲು ಮತ್ತು ಒಬ್ಬ ವ್ಯಕ್ತಿಯಾಗಲೂ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಪ್ರಭಾವ ಹೇಗೆ ಬೀರಿದೆ ಎಂದರೆ ನಿಮ್ಮಿಂದ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ತುಂಬಾ ದೂರ ಸಾಗಿದೆ ಎಂದು ಮಿಸ್ಟರ್ 360 ಡಿಗ್ರಿ ಭಾವುಕರಾಗಿ ನುಡಿದಿದ್ದಾರೆ.
ನಿಮ್ಮ ಬಗ್ಗೆ ನಾನು ಮೈದಾನದ ಒಳಗೆ ಮತ್ತು ಹೊರಗೆ ಚೆನ್ನಾಗಿ ತಿಳಿದಿದ್ದೇನೆ. ನೀವು ಜನರ ತಮ್ಮನ್ನು ತಾವೂ ನಂಬುವಂತೆ ಮಾಡಿದ್ದೀರಿ, ಅದು ಟ್ರೋಪಿ ಗೆಲ್ಲುವುದಕ್ಕಿಂತ ಹೆಚ್ಚು ಮುಖ್ಯವಾಗಿದೆ. ಮುಂದೊಂದು ದಿನ ಅದೂ ಕೂಡ ನಿಮ್ಮ ಹಾದಿಯಲ್ಲಿ ಬರಲಿದೆ ಎಂದು ನಾನು ಭಾವಿಸುತ್ತೇನೆ ಎಂದು ದಕ್ಷಿಣ ಆಫ್ರಿಕಾ ಶ್ರೇಷ್ಠ ಕ್ರಿಕೆಟಿಗ ಕೊಹ್ಲಿಯನ್ನು ಗುಣಗಾನ ಮಾಡಿದ್ದಾರೆ.
ಇದನ್ನು ಓದಿ:ಕೆಲವೇ ಕ್ರಿಕೆಟಿಗರು ಫ್ರಾಂಚೈಸಿಗೆ ನೀಡಲು ಸಾಧ್ಯವಾಗುವ ಕೊಡುಗೆಯನ್ನು ಕೊಹ್ಲಿ ಆರ್ಸಿಬಿಗೆ ನೀಡಿದ್ದಾರೆ : ಗವಾಸ್ಕರ್