ಅಬುಧಾಬಿ: ಶಿಸ್ತುಬದ್ಧ ಬೌಲಿಂಗ್ ದಾಳಿ ಮತ್ತು ಭರ್ಜರಿ ಬ್ಯಾಟಿಂಗ್ ನೆರವಿನಿಂದ ಐರ್ಲೆಂಡ್ ತಂಡ 7 ವಿಕೆಟ್ಗಳಿಂದ ನೆದರ್ಲೆಂಡ್ಸ್ ವಿರುದ್ಧ ಜಯ ಸಾಧಿಸಿ ಟಿ-20 ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ.
ಅಬುಧಾಬಿಯಲ್ಲಿ ನಡೆದ 3ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 20 ಓವರ್ಗಳಲ್ಲಿ ಕೇವಲ 106 ರನ್ಗಳಿಗೆ ಸರ್ವಪತನ ಕಂಡಿತು. ಮ್ಯಾಕ್ಸ್ ಒಡೋಡ್ 51 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಬಿಟ್ಟರೆ ನಾಯಕ ಸೀಲರ್(21) ಮಾತ್ರ 20ರ ಗಡಿ ದಾಟಿದರು.
-
A comprehensive victory for Ireland 💪
— T20 World Cup (@T20WorldCup) October 18, 2021 " class="align-text-top noRightClick twitterSection" data="
They win with 7 wickets in hand 🙌#T20WorldCup | #IREvNED | https://t.co/TRm5wxM8Qo pic.twitter.com/GS0pQymV0I
">A comprehensive victory for Ireland 💪
— T20 World Cup (@T20WorldCup) October 18, 2021
They win with 7 wickets in hand 🙌#T20WorldCup | #IREvNED | https://t.co/TRm5wxM8Qo pic.twitter.com/GS0pQymV0IA comprehensive victory for Ireland 💪
— T20 World Cup (@T20WorldCup) October 18, 2021
They win with 7 wickets in hand 🙌#T20WorldCup | #IREvNED | https://t.co/TRm5wxM8Qo pic.twitter.com/GS0pQymV0I
ಐರ್ಲೆಂಡ್ ಪರ ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ಸೇರಿದಂತೆ ಒಂದೇ ಓವರ್ನಲ್ಲಿ 4 ವಿಕೆಟ್ ಪಡೆದು ಮಿಂಚಿದರು. ಅವರು ಒಟ್ಟಾರೆ 4 ಓವರ್ಗಳಲ್ಲಿ 26 ರನ್ ನೀಡಿದ 4 ವಿಕೆಟ್ ಪಡೆದರು. ಇವರಿಗೆ ಸಾಥ್ ನೀಡಿದ ಮಾರ್ಕ್ ಅದೈರ್ 4 ಓವರ್ಗಳಲ್ಲಿ ಕೇವಲ 9 ರನ್ ನೀಡಿ 3 ವಿಕೆಟ್ ಪಡೆದರು. ಲಿಟಲ್ 14ಕ್ಕೆ 1 ವಿಕೆಟ್ ಪಡೆದರು.
107 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಐರ್ಲೆಂಡ್ 15.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ಅಜೇಯ 30 ರನ್, ಗೆರೆತ್ ಡೆಲಾನಿ 29 ಎಸೆತಗಳಲ್ಲಿ 44 ರನ್ಗಳಿಸಿದರು. ನೆದರ್ಲೆಂಡ್ಸ್ ಪರ ಪೀಟರ್ ಸೀಲರ್ 14ಕ್ಕೆ1, ಬ್ರೆಂಡನ್ ಗ್ಲೋವರ್ 21ಕ್ಕೆ1, ಫ್ರೆಡ್ ಕ್ಲಾಸೆನ್ 18ಕ್ಕೆ 1 ವಿಕೆಟ್ ಪಡೆದರು.
ಶುಕ್ರವಾರ ಐರ್ಲೆಂಡ್ ತನ್ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ, ನೆದರ್ಲೆಂಡ್ಸ್ ತಂಡ ನಮೀಬಿಯಾ ವಿರುದ್ಧ ಸೆಣಸಾಡಲಿವೆ.