ಹೊಬರ್ಟ್: ನಾನೊಬ್ಬ ಬೌಲರ್ ಆಗಿ ತಂಡದಲ್ಲಿದ್ದೇನೆ. ಅದನ್ನು ಉಳಿಸಿಕೊಳ್ಳಲು ಬಯಸುತ್ತೇನೆ ಎಂದು ಆಸೀಸ್ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ. ಟಿಮ್ ಪೈನ್ ಅವರು ಲೈಂಗಿಕ ಹಗರಣದಲ್ಲಿ ಸಿಲುಕಿ ಕೆಲದಿನಗಳ ಮಟ್ಟಿಗೆ ಕ್ರಿಕೆಟ್‌ನಿಂದ ದೂರವಾದ ನಂತರ ಆ್ಯಶಸ್ ಸರಣಿಗೆ 28ರ ಹರೆಯದ ಪ್ಯಾಟ್ ಕಮ್ಮಿನ್ಸ್ ನಾಯಕನಾಗಿ ಆಯ್ಕೆ ಆಗಿದ್ದರು.
ಆರು ವಾರಗಳ ನಂತರ ಕಮ್ಮಿನ್ಸ್ ನೇತೃತ್ವದ ಆಸೀಸ್ ತಂಡ ನಿನ್ನೆ ಹೋಬರ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 146 ರನ್‌ಗಳ ವಿಜಯದೊಂದಿಗೆ 4-0 ಆ್ಯಶಸ್ ವಿಜೇತರಾಗಿ ಟೂರ್ನಿ ಕೊನೆಗೊಳಿಸಿದೆ. ನಾಯಕ ಪ್ಯಾಟ್ ಸರಣಿಯಲ್ಲಿ 21 ವಿಕೆಟ್ ಕಬಳಿಸಿದ್ದಾರೆ. ಇನ್ನು ಕಮಿನ್ಸ್ ಸರಣಿ ವೇಳೆ ಒಬ್ಬ ವ್ಯಕ್ತಿಯ ನಿಕಟ ಸಂಪರ್ಕಕ್ಕೆ ಬಂದಿದ್ದ ಅಡಿಲೇಡ್ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ಯಾಟ್ ಕಮ್ಮಿನ್ಸ್, ಅಲ್ಪಾವಧಿಯಲ್ಲಿ ನಾಯಕನ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡರೂ ಬೌಲಿಂಗ್‌ನಿಂದ ತಾವು ದೂರವಾಗಲಿಲ್ಲ. ನಾಯಕನ ಪಾತ್ರ ಒಪ್ಪಿಕೊಳ್ಳುವ ಮುನ್ನ ಈ ಬಗ್ಗೆ ನಾನು ಆತಂಕಿತನಾಗಿದ್ದೆ, ಆದರೆ ಸರಣಿ ಆರಂಭವಾದ ಬಳಿಕ ಈ ಬಗ್ಗೆ ಇದ್ದ ಅಳಕು ದೂರವಾಯಿತು ಎಂದು ತಮ್ಮ ಮನದ ಮಾತಗಳನ್ನು ಹಂಚಿಕೊಂಡಿದ್ದಾರೆ.
ನಾನೊಬ್ಬ ಬೌಲರ್ ಆಗಿ ತಂಡದಲ್ಲಿದ್ದೇನೆ. ಅದನ್ನು ಉಳಿಸಿಕೊಳ್ಳಲು ಬಯಸುತ್ತೇನೆ. ಉತ್ತಮವಾಗಿ ಕಾರ್ಯನಿರ್ವಹಿಸಲು ನನಗೆ ಸಾಧ್ಯವಾಗುತ್ತದೆ. ಪ್ರತಿ ಪಂದ್ಯದಿಂದ ಪಂದ್ಯಕ್ಕೆ ನನ್ನ ನಿರ್ವಹಣೆಯನ್ನು ಉತ್ತಮಪಡಿಸಿಕೊಂಡಿದ್ದೇನೆ ಎಂದು ಭಾವಿಸುತ್ತೇನೆ.
ಫೀಲ್ಡರ್‌ಗಳನ್ನು ನಿಲ್ಲಿಸುವ ವಿಚಾರದಲ್ಲಿ ಮಾಜಿ ನಾಯಕ ಮತ್ತು ಉಪನಾಯಕ ಸ್ಟೀವ್ ಸ್ಮಿತ್ ಸಹಾಯ ಪಡೆದಿಕೊಂಡೆ. ಬೌಲಿಂಗ್ ಮಾಡುವಾಗ ನಾನು ನಾಯಕ ಎಂಬ ವಿಚಾರವನ್ನು ಸ್ವಿಚ್ಡ್ ಆಫ್ ಮಾಡಿದ್ದೆ ಎಂಬ ವಿಚಾರವನ್ನು ಅವರು ಇದೇ ವೇಳೆ ಹಂಚಿಕೊಂಡರು.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 146 ರನ್‌ಗಳ ಜಯ; 4-0 ಆ್ಯಶಸ್ ಗೆದ್ದ ಕಮಿನ್ಸ್ ಪಡೆ