ETV Bharat / sports

ನಾಳೆ ಕ್ರಿಕೆಟ್ ಸಲಹಾ ಸಮಿತಿಯ ಮಹತ್ವದ ಸಭೆ: ಜನವರಿಯಲ್ಲಿ ಹೊಸ ಆಯ್ಕೆ ಸಮಿತಿ ರಚನೆ? - Team india

ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್​ ತಂಡಕ್ಕೆ ಆಟಗಾರರ ಆಯ್ಕೆಗೆ ಬಿಸಿಸಿಐ ಹೊಸ ಸಮಿತಿಯನ್ನು ರಚಿಸಲು ನಿರ್ಧರಿಸಿದ್ದು, ಸಮಿತಿಯ ಸದಸ್ಯರ ಆಯ್ಕೆ ಪ್ರಕ್ರಿಯೆಗಾಗಿ ನಾಳೆ ಮಹತ್ವದ ಸಭೆ ನಡೆಯಲಿದೆ.

bccis-new-selection-committee-likely-to-be-formed-in-january-next-year-sources
ನಾಳೆ ಕ್ರಿಕೆಟ್ ಸಲಹಾ ಸಮಿತಿಯ ಮಹತ್ವದ ಸಭೆ
author img

By

Published : Dec 29, 2022, 5:04 PM IST

ಮುಂಬೈ (ಮಹಾರಾಷ್ಟ್ರ): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಆಯ್ಕೆ ಸಮಿತಿಯನ್ನು ಮುಂದಿನ ವರ್ಷ ಜನವರಿಯಲ್ಲಿ ರಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಆಟಗಾರ ಅಶೋಕ್ ಮಲ್ಹೋತ್ರಾ, ಜತಿನ್ ಪರಂಜ್ಪೆ ಮತ್ತು ಸುಲಕ್ಷಣಾ ಮೇಲ್ ಅವರನ್ನೊಳಗೊಂಡ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯು ಹೊಸ ಆಯ್ಕೆ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಡಿಸೆಂಬರ್ 30ರಂದು ಸಭೆ ಸೇರುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಟಿ20ಗೆ ಹಾರ್ದಿಕ್​ ಪಾಂಡ್ಯ, ಏಕದಿನಕ್ಕೆ ರೋಹಿತ್​ ಸಾರಥ್ಯ: ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ

ಕಳೆದ ನವೆಂಬರ್‌ನಲ್ಲಿ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿತ್ತು. ನೂತನ ಸಮಿತಿ ರಚನೆಗೆ ಹೊಸ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಅರ್ಜಿಗಳನ್ನು ಸಲ್ಲಿಸಲು ನಿನ್ನೆಗೆ (ನ.28) ಕೊನೆಯ ದಿನಾಂಕವಾಗಿತ್ತು.

ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ 2022ರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಹತ್ತು ವಿಕೆಟ್‌ಗಳ ಅವಮಾನಕರ ಸೋಲಿನ ನಂತರ ರಾಷ್ಟ್ರೀಯ ಆಯ್ಕೆ ಸಮಿತಿ ವಜಾಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಹಳೆ ಸಮಿತಿಯು ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರೊಂದಿಗೆ ಸುನಿಲ್ ಜೋಶಿ, ಹರ್ವಿಂದರ್ ಸಿಂಗ್ ಮತ್ತು ದೇಬಶಿಶ್ ಮೊಹಾಂತಿ ಅವರನ್ನು ಒಳಗೊಂಡಿತ್ತು.

ಇದನ್ನೂ ಓದಿ: ಉಪ ನಾಯಕತ್ವ ಪಟ್ಟ: 'ಇದು ಕನಸೇ ಎಂದು ಅರೆಕ್ಷಣ ನನ್ನನ್ನೇ ಕೇಳಿಕೊಂಡಿದ್ದೆ': ಸೂರ್ಯಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.