ETV Bharat / sports

Harmanpreet Kaur: ನಾಳೆಯಿಂದ ಬಾಂಗ್ಲಾ ವಿರುದ್ಧ ಟಿ20 ಸರಣಿ ಆರಂಭ.. - ETV Bharath Karnataka

ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡದ ಯುವ ಪ್ರತಿಭೆಗಳನ್ನ ಹೊಂದಿದ ತಂಡದ ಜೊತೆಗೆ ಕೌರ್​ ನಾಯಕತ್ವದ ತಂಡ ಬಾಂಗ್ಲಾದೇಶದ ವಿರುದ್ಧ ನಾಳೆ ಕಣಕ್ಕಿಳಿಯಲಿದೆ.

Harmanpreet Kaur
Harmanpreet Kaur
author img

By

Published : Jul 8, 2023, 6:20 PM IST

ಭಾರತದ ಮಹಿಳಾ ತಂಡ ನಾಲ್ಕು ತಿಂಗಳ ಬ್ರೇಕ್​ನ ನಂತರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದೆ. ಹರ್ಮನ್​ಪ್ರೀತ್ ಕೌರ್​​ ನಾಯಕತ್ವದಲ್ಲಿ ಆಟಗಾರ್ತಿಯರು ಬಾಂಗ್ಲಾ ನೆಲದಲ್ಲಿ ಮೂರು ಟಿ20 ಪಂದ್ಯಕ್ಕೆ ಅಣಿಯಾಗುತ್ತಿದ್ದಾರೆ. ನಾಳೆಯಿಂದ ಮೂರು ಟಿ20 ಪಂದ್ಯದ ಸರಣಿ ಆರಂಭವಾಗಲಿದೆ. ಟಿ20 ನಂತರ ಮೂರು ಏಕದಿನ ಪಂದ್ಯವನ್ನು ಬಾಂಗ್ಲಾದೇಶದಲ್ಲಿ ಕೌರ್​ ನಾಯಕತ್ವದ ತಂಡ ಆಡಲಿದೆ.

ಮಹಿಳಾ ತಂಡವು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್​ನ ನಂತರ ಮತ್ತೆ ರಾಷ್ಟ್ರೀಯ ಜರ್ಸಿಯನ್ನು ತೊಡುತ್ತಿದ್ದಾರೆ. ವಿಶ್ವಕಪ್​ನಲ್ಲಿ ನಾಕೌಟ್​ ಹಂತದಲ್ಲಿ ಭಾರತ ಸೋಲನುಭವಿಸಿತು. ಇದಾದ ನಂತರ ಭಾರತದಲ್ಲಿ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್​​ ಲೀಗ್​ನಲ್ಲಿ ಭಾರತ ತಂಡದ ವನಿತೆಯರು ಭಾಗವಹಿಸಿದ್ದರು.

ಭಾರತದ ಮಹಿಳಾ ತಂಡ ಫಿನಿಶರ್​ಗಳ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣಕ್ಕೆ ಭಾರತ ತಂಡ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಣಿಯ ಬೇಕಾಯಿತು. ಇದನ್ನು ನಿವಾರಿಸಿಕೊಳ್ಳುವ ಅಗತ್ಯವೂ ಇದೆ. ಅಲ್ಲದೇ ಕಳೆದ ಒಂದು ವರ್ಷ​ದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಸ್ಟಾರ್ ಪರ್ಫಾರ್ಮರ್‌ಗಳಾದ ವೇಗಿ ರೇಣುಕಾ ಠಾಕೂರ್ ಮತ್ತು ವಿಕೆಟ್‌ಕೀಪರ್ ರಿಚಾ ಘೋಷ್ ಗಾಯ ಮತ್ತು ಫಿಟ್‌ನೆಸ್ ಸಮಸ್ಯೆಗಳಿಂದ ಈ ತಂಡದ ಭಾಗವಾಗಿಲ್ಲ. ಘೋಷ್ ಅವರ ಅನುಪಸ್ಥಿತಿಯಲ್ಲಿ ಅನುಭವಿ ದೀಪ್ತಿ ಶರ್ಮಾ ಫಿನಿಶರ್ ಪಾತ್ರವನ್ನು ನಿರ್ವಹಿಸ ಬೇಕಾಗಿದೆ.

ಪಂದ್ಯದ ಮುನ್ನಾದಿನವಾದ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಕೌರ್​​,"ಬಾಂಗ್ಲಾದೇಶವು ಉತ್ತಮ ತಂಡವಾಗಿದೆ ಮತ್ತು ಅವರು ತವರಿನ ಪರಿಸ್ಥಿತಿಯಲ್ಲಿ ಉತ್ತಮ ಕ್ರಿಕೆಟ್ ಆಡುತ್ತಾರೆ. ಇದು ನಮಗೆ ತುಂಬಾ ಸವಾಲಾಗಿದೆ ಮತ್ತು ನಾವು ಸವಾಲಿಗೆ ಸಿದ್ಧರಿದ್ದೇವೆ. 2-3 ದಿನಗಳಿಂದ ಇಲ್ಲಿ ಅಭ್ಯಾಸ ಮಾಡುತ್ತಿದ್ದು, ಎಲ್ಲಾ ವಿಭಾಗದಲ್ಲೂ ತಂಡ ಬಲಿಷ್ಠವಾಗಿದೆ. ನಾವು ಉತ್ತಮ ಕ್ರಿಕೆಟ್​ ಅನ್ನು ಇಲ್ಲಿ ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.

ರಾಧಾ ಯಾದವ್ ಮತ್ತು ರಾಜೇಶ್ವರಿ ಗಾಯಕ್‌ವಾಡ್‌ಗೆ ಅವರನ್ನು ತಂಡದಲ್ಲಿ ಕೈ ಬಿಡಲಾಗಿದ್ದು, ಅವರ ಬದಲಿಯಾಗಿ ಹೊಸ ಮುಖಗಳಿಗೆ ಅವಕಾಶ ನೀಡಲಾದೆ. ಈ ಬಗ್ಗೆ ನಾಯಕಿ ಹೆಚ್ಚು ಉತ್ಸುಕರಾಗಿದ್ದಾರೆ."ದೇಶೀಯ ಆಟಗಾರರಿಗೆ ಮಹಿಳಾ ಪ್ರೀಮಿಯರ್ ಲೀಗ್ ಒಂದು ಉತ್ತಮ ವೇದಿಕೆಯಾಗಿದೆ. ಹೊಸ ಪ್ರತಿಭೆಗಳು ಡಬ್ಲ್ಯೂಪಿಎಲ್​ನಿಂದ ಅವಕಾಶ ಪಡೆದುಕೊಂಡಿದ್ದು, ಸಿಕ್ಕ ಚಾನ್ಸ್​ ಅನ್ನು ಆಟಗಾರ್ತಿಯರು ಉತ್ತಮವಾಗಿ ಬಳಸಿಕೊಳ್ಳಬೇಕು" ಎಂದು ಹೇಳಿದರು.

"ಏಷ್ಯನ್ ಪರಿಸ್ಥಿತಿಗಳಲ್ಲಿ, ನಾವು ಸಾಮಾನ್ಯವಾಗಿ ಟರ್ನಿಂಗ್ ಟ್ರ್ಯಾಕ್ ಅನ್ನು ನೋಡುತ್ತೇವೆ, ಆದರೆ ಇಲ್ಲಿ ನಾನು ವಿಕೆಟ್ ತುಂಬಾ ಚೆನ್ನಾಗಿದೆ ಎಂದು ಕೇಳಿದ್ದೇನೆ. ಅದನ್ನೇ ನಾವು ನಿರೀಕ್ಷಿಸುತ್ತಿದ್ದೇವೆ, ಟಿ 20 ಕ್ರಿಕೆಟ್‌ನಲ್ಲಿ ನಾವು ಉತ್ತಮ ಬ್ಯಾಟಿಂಗ್ ಟ್ರ್ಯಾಕ್‌ಗಾಗಿ ನೋಡುತ್ತೇವೆ ಮತ್ತು ನಾಳೆ ಪಿಚ್ ಚೆನ್ನಾಗಿ ಆಡುತ್ತದೆ ಎಂದು ಆಶಿಸುತ್ತೇವೆ. ನಮಗೆ ಪ್ರತಿಯೊಂದು ಪಂದ್ಯವೂ ಮುಖ್ಯವಾಗಿದೆ ಮತ್ತು ಪ್ರಯೋಗ ಏನೂ ಇಲ್ಲ. ನಾವು ನಮ್ಮ ಅತ್ಯುತ್ತಮ ತಂಡದೊಂದಿಗೆ ಆಡಲು ಬಯಸುತ್ತೇವೆ ಏಕೆಂದರೆ ಸಂಪೂರ್ಣ ಆಲೋಚನೆ ಪಂದ್ಯವನ್ನು ಗೆಲ್ಲುವುದಾಗಿದೆ. ಬಾಂಗ್ಲಾದೇಶ ತಂಡವು ಅದೇ ಮನೋಭಾವವನ್ನು ಹೊಂದಿರುತ್ತದೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ

ತಂಡಗಳು ಇಂತಿದೆ; ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್​), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಚೆಟ್ರಿ, ಅಮನ್‌ಜೋತ್ ಕೌರ್, ಎಸ್. ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್ , ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಮಿನ್ನು ಮಣಿ.

ಬಾಂಗ್ಲಾದೇಶ: ನಿಗರ್ ಸುಲ್ತಾನ (ನಾಯಕ, ವಿಕೆಟ್ ಕೀಪರ್​​), ನಹಿದಾ ಅಕ್ಟರ್, ದಿಲಾರಾ ಅಕ್ಟರ್, ಶತಿ ರಾಣಿ, ಶಮೀಮಾ ಸುಲ್ತಾನಾ, ಸೋಭಾನಾ ಮೊಸ್ತರಿ, ಮುರ್ಷಿದಾ ಖಾತುನ್, ಶೋರ್ನಾ ಅಕ್ಟರ್, ರಿತು ಮೋನಿ, ದಿಶಾ ಬಿಸ್ವಾಸ್, ಮಾರುಫಾ ಅಕ್ಟರ್, ಸಂಜಿದಾ ಅಕ್ಟರ್ ಮೇಘಲಾ, ರಬೇಯಾ ಖಾನ್, ಸುಲ್ತಾನಾ ಖಾತುನ್, ಸಲ್ಮಾ ಖಾತುನ್, ಫಾಹಿಮಾ ಖಾತುನ್.

ಇದನ್ನೂ ಓದಿ: Cricket World Cup 2023: ವಿಶ್ವಕಪ್​ ಪ್ರವಾಸ ನಿರ್ಧಾರಕ್ಕೆ ಪಾಕ್​​​ನಲ್ಲಿ ಉನ್ನತ ಮಟ್ಟದ ಸಮಿತಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.