ETV Bharat / sports

ಬೌಲರ್ಸ್, ಬೈರ್​ಸ್ಟೋವ್​ ಮಿಂಚು: ಪಂಜಾಬ್​ ಮಣಿಸಿ 14ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದ ಸನ್​ರೈಸರ್ಸ್​ - ಪಂಜಾಬ್ ವಿರುದ್ಧ ಹೈದರಾಬಾದ್​ಗೆ ಗೆಲುವು

ಸನ್​ರೈಸರ್ಸ್​ ಹೈದರಾಬಾದ್​ ತಂಡ ಜಾನಿ ಬೈರ್​ಸ್ಟೋವ್​ ಅಜೇಯ ಅರ್ಧಶತಕ ಮತ್ತು ಬೌಲರ್​ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಪಂಜಾಬ್​ ವಿರುದ್ಧ 9 ವಿಕೆಟ್​ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಪಂಜಾಬ್ ವಿರುದ್ಧ 9 ವಿಕೆಟ್​ಗಳ ಗೆಲುವು ಸಾಧಿಸಿದ ಹೈದರಾಬಾದ್​
ಜಾನಿ ಬೈರ್​ಸ್ಟೋವ್​ ಅರ್ಧಶತಕ
author img

By

Published : Apr 21, 2021, 7:05 PM IST

ಚೆನ್ನೈ: ಪಂಜಾಬ್ ವಿರುದ್ಧ 9 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್​ ತಂಡ 2021ರ ಐಪಿಎಲ್​ನಲ್ಲಿ ತನ್ನ ಸೋಲಿನ ಸರಪಳಿ ಕಳಚಿ ಗೆಲುವಿನ ಹಳಿಗೆ ಮರಳಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡ ಕಿಂಗ್ಸ್​ ಇಲೆವೆನ್​ ಪಂಜಾಬ್ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಿರಂತರವಾಗಿ ವಿಕೆಟ್​ ಕಳೆದುಕೊಂಡ ರಾಹುಲ್ ಪಡೆ 19.4 ಓವರ್​ಗಳಲ್ಲಿ 120 ರನ್​ಗಳಿಗೆ ಸರ್ವಪತನಗೊಂಡಿತು. ಹೈದರಾಬಾದ್​ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ಕಿಂಗ್ಸ್​ ಪರ ಮಯಾಂಕ್ (22) ಮತ್ತು ಶಾರುಖ್​ ಖಾನ್(22) ಮಾತ್ರ 20ರ ಗಡಿದಾಟಿದರು. ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳು 15ರೊಳಗೆ ಕುಸಿದರು.

ಉತ್ತಮ ಫಾರ್ಮ್​ನಲ್ಲಿದ್ದ ರಾಹುಲ್​ 4 ರನ್​ಗೆ ವಿಕೆಟ್​ ಒಪ್ಪಿಸಿದರೆ, ಸ್ಫೋಟಕ ದಾಂಡಿಗ ಗೇಲ್ (15), ದೀಪಕ್​ ಹೂಡ(13 )ಹಾಗೂ ಪೂರನ್(0) ಬಂದಷ್ಟೇ ವೇಗವಾಗಿ ಹಿಂತಿರುಗಿದರು . ಸಾಕಷ್ಟು ಭರವಸೆಗಳೊಂದಿಗೆ ಪಂಜಾಬ್ ಪರ ಪದಾರ್ಪಣೆ ಮಾಡಿದ್ದ ಹೆನ್ರಿಕ್ಸ್ 14 ಮತ್ತು ಅಲೆನ್​ ಕೇವಲ 6 ರನ್​ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.

ಕೇವಲ 121 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಸನ್​ರೈಸರ್ಸ್​ ಹೈದರಾಬಾದ್​ ಓವರ್​ಗಳಲ್ಲಿ ಕೇವಲ ಒಂದು ವಿಕೆಟ್​ ಕಳೆದುಕೊಂದು ಗುರಿ ತಲುಪಿತು. ನಾಯಕ ವಾರ್ನರ್​ 37 ಎಸೆತಗಳಲ್ಲಿ 3 ಬೌಂಡರಿ, ಒಂದು ಸಿಕ್ಸರ್​ ಸಹಿತ 37 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಾನಿ ಬೈರ್​ಸ್ಟೋವ್​ 56 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ 63 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಕೇನ್ ವಿಲಿಯಮ್ಸನ್​ ಅಜೇಯ 16 ರನ್​ಗಳಿಸಿದರು.

ಈ ಗೆಲುವಿನೊಂದಿಗೆ ಹೈದರಾಬಾದ್ ತಂಡ ಅಂಕಟ್ಟಿಯಲ್ಲಿ ಖಾತೆ ತೆರೆದು 5ನೇ ಸ್ಥಾನಕ್ಕೇರಿದರೆ, ಪಂಜಾಬ್​ ಕಿಂಗ್ಸ್​ ಸತತ ಮೂರು ಸೋಲು ಅನುಭವಿಸಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.