ಅಬುಧಾಬಿ: ಪಾಕಿಸ್ತಾನ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಜೋಡಿ ಟಿ20 ಕ್ರಿಕೆಟ್ನಲ್ಲಿ 5ನೇ ಬಾರಿಗೆ ಮೊದಲ ವಿಕೆಟ್ಗೆ ಶತಕದ ಜೊತೆಯಾಟ ನೀಡುವ ಮೂಲಕ ದಾಖಲೆ ಬರೆದಿದ್ದಾರೆ.
ಮಂಗಳವಾರ ಟಿ20 ವಿಶ್ವಕಪ್ನ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ಜೋಡಿ 113 ರನ್ಗಳ ಆರಂಭಿಕ ಜೊತೆಯಾಟ ನೀಡುವ ಮೂಲಕ 5ನೇ ಬಾರಿಗೆ ಶತಕದ ಜೊತೆಯಾಟ ನೀಡಿ ಭಾರತದ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಭಾರತೀಯ ಜೋಡಿ ಚುಟುಕು ಕ್ರಿಕೆಟ್ನಲ್ಲಿ 4 ಬಾರಿ ಶತಕದ ಜೊತೆಯಾಟ ನಡೆಸಿದ್ದಾರೆ.
ನಮೀಬಿಯಾ ಬೌಲರ್ಗಳೆದುರು ಪಾಕಿಸ್ತಾನ ಜೋಡಿ ಆರಂಭದಲ್ಲಿ ಪರದಾಡಿದರೂ ನಂತರ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಬಾಬರ್ 49 ಎಸೆತಗಳಲ್ಲಿ 70 ರನ್ಗಳಿಸಿದರೆ, ರಿಜ್ವಾನ್ 50 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ಅಜೇಯ 79 ರನ್ಗಳಿಸಿದರು.
ಟಿ20ಯಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ಗಳಿಸಿ ಮೊದಲ ಆರಂಭಿಕ ಜೋಡಿ
ಚುಟುಕು ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ಗಳಿಸಿದ ಮೊದಲ ಜೋಡಿ ಎಂಬ ದಾಖಲೆಗೆ ಪಾತ್ರರಾದರು. ಬಾಬರ್-ರಿಜ್ವಾನ್ ಟಿ20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದರೆ, ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ಮೂನ್ ಮತ್ತು ಜೆಫ್ ಮಾರ್ಷ್ ಜೋಡಿ 1986ರಲ್ಲಿ 1000 ರನ್ ಸಿಡಿಸಿದ್ದರು. ಆಸ್ಟ್ರೇಲಿಯಾದ ಬಿಲ್ ಲೋರಿ ಮತ್ತು ಬಾಬ್ ಸಿಂಪ್ಸನ್ 1964ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 1000 ರನ್ ಸಿಡಿಸಿದ ಮೊದಲ ಜೋಡಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಇದನ್ನೂ ಓದಿ:ಚುಟುಕು ಕ್ರಿಕೆಟ್ನಲ್ಲಿ ಧೋನಿ ಹಿಂದಿಕ್ಕಿ ವಿಶ್ವದಾಖಲೆ ಬರೆದ ಇಯಾನ್ ಮಾರ್ಗನ್