ಹೈದರಾಬಾದ್: ಮೊದಲ ಮಹಿಳಾ ಆವೃತ್ತಿಯ ಪ್ರೀಮಿಯರ್ ಲೀಗ್ ಹರಾಜು ನಿನ್ನೆ ನಡೆದಿದೆ. ಭಾರತದ ಬ್ಯಾಟರ್ ಸ್ಮೃತಿ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಆಟಗಾರ ಬಾಬರ್ ಅಜಮ್ನ್ನು ಟ್ವಿಟರ್ನಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಸ್ಮೃತಿ ಮಂಧಾನ ಹೆಸರಿನಲ್ಲಿ ನಿನ್ನೆ ಎರಡು ದಾಖಲೆಗಳು ನಿರ್ಮಾಣ ಆಗಿದೆ. ಮಹಿಳಾ ಮೊದಲ ಆವೃತ್ತಿಯ ಐಪಿಎಲ್ ಹಾರಾಜಿನ ಮೊದಲ ಆಟಗಾರ್ತಿ ಸ್ಮೃತಿ ಮಂಧಾನ. ಮಹಿಳಾ ಆಟಗಾರ್ತಿಯರ ಬಿಡ್ನಲ್ಲಿ ಅತೀ ಹೆಚ್ಚು ಮೌಲ್ಯಕ್ಕೆ ಖರೀದಿಯಾದ ಆಟಗಾರ್ತಿ ಎಂಬ ದಾಖಲೆ ಮಂಧಾನ ಹೆಸರಿಗಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಯಂತೆ ಮಂಧಾನ ಅವರನ್ನು 3.4 ಕೋಟಿ ಕೊಟ್ಟು ಖರೀದಿ ಮಾಡಿದೆ.
ಮಂಧಾನಗೆ ಆರ್ಸಿಬಿ 3.4 ಕೋಟಿ ಕೊಟ್ಟು ಖರೀದಿ ಮಾಡಿದ ನಂತರ ಟ್ವಿಟರ್ನಲ್ಲಿ ಪಾಕಿಸ್ತಾನದ ಆಟಗಾರ ಬಾಬರ್ ಅಜಮ್ರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಪಾಕಿಸ್ತಾನಿ ಕ್ರಿಕೆಟ್ ಲೀಗ್ನಲ್ಲಿ ಬಾಬರ್ ಅಜಮ್ ಅವರಿಗೆ ಬಿಡ್ ಆದ ಮೊತ್ತ 1.4ಕೋಟಿ. ನಮ್ಮಲ್ಲಿನ ಮಹಿಳಾ ಆಟಗಾರ್ತಿಯರಿಗೆ ಅವರಿಗಿಂತ ಮೂರು ಪಟ್ಟು ಹಣ ಹೆಚ್ಚು ಕೊಡುತ್ತೇವೆ ಎಂದು ಟ್ರೋಲ್ ಮಾಡಲಾಗುತ್ತಿದೆ.
-
The reactions say it all! 😊🤗
— Women's Premier League (WPL) (@wplt20) February 13, 2023 " class="align-text-top noRightClick twitterSection" data="
Absolute scenes in the #TeamIndia camp at the #T20WorldCup as they witness the #WPLAuction 👌 👌 pic.twitter.com/z01V1zB0XN
">The reactions say it all! 😊🤗
— Women's Premier League (WPL) (@wplt20) February 13, 2023
Absolute scenes in the #TeamIndia camp at the #T20WorldCup as they witness the #WPLAuction 👌 👌 pic.twitter.com/z01V1zB0XNThe reactions say it all! 😊🤗
— Women's Premier League (WPL) (@wplt20) February 13, 2023
Absolute scenes in the #TeamIndia camp at the #T20WorldCup as they witness the #WPLAuction 👌 👌 pic.twitter.com/z01V1zB0XN
ಇದರ ಜೊತೆಗೆ ಪಾಕಿಸ್ತಾನದಲ್ಲಿ ಆರ್ಥಿಕತೆ ಕುಸಿತಾಗಿರುವುದರ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿದೆ. ಭಾರತೀಯ ಮಹಿಳಾ ಆಟಗಾರ್ತಿಯರ ಬೆಲೆಗಿಂತ ಕಡಿಮೆ ಬೆಲೆಗೆ ಅಜಮ್ ರನ್ನು ಅಲ್ಲಿನ ಪ್ರ್ಯಾಂಚೈಸಿ ಖರೀದಿಸಿದೆ. ಮಂಧಾನ ಅಲ್ಲದೇ ಸುಮಾರು 10ಕ್ಕೂ ಹೆಚ್ಚು ಆಟಗಾರ್ತಿಯರು ಕೋಟಿ ಮೊತ್ತದಲ್ಲಿ ಹರಾಜಿನಲ್ಲಿ ಕೊಳ್ಳಲ್ಪಟ್ಟಿದ್ದಾರೆ.
ಇದನ್ನೂ ಓದಿ: ಮಹಿಳಾ ಐಪಿಎಲ್: ಹರಾಜಿನಲ್ಲಿ ಆಟಗಾರ್ತಿಯರ ಕಮಾಲ್.. ಅಂತಿಮ ತಂಡಗಳು ಇಂತಿವೆ
ಅದರಲ್ಲಿ ಪ್ರಮುಖ ಭಾರತೀಯರೆಂದರೆ ಹರ್ಮನ್‌ಪ್ರೀತ್ ಕೌರ್ ಅವರನ್ನು ಮುಂಬೈ 1.80 ಕೋಟಿಗೆ ಖರೀದಿಸಿ ತಂಡಕ್ಕೆ, ಇದಲ್ಲದೇ ಶೆಫಾಲಿ ವರ್ಮಾ ಅವರನ್ನು 2 ಕೋಟಿಗೆ ಡೆಲ್ಲಿ ಖರೀದಿಸಿದೆ. ಭಾರತದ ವಿಕೆಟ್- ಕೀಪರ್ ಸ್ಫೋಟಕ ಬ್ಯಾಟರ್ ರಿಚ್ಚಾ ಘೋಷ್ ಅವರನ್ನು ಕೂಡ 1.90 ಕೋಟಿ ರೂಪಾಯಿ ನೀಡಿ ಆರ್ಸಿಬಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಜೆಮಿಕಾ, ಪೂಜಾ ವಸ್ತ್ರಾಕರ್, ಹರ್ಮನ್ ಪ್ರಿತ್ ಕೌರ್ ಕೋಟಿಗೆ ಬಿಕರಿಯಾಗಿದ್ದಾರೆ.
ಲೈವ್ ನೋಡಿ ಸಂಭ್ರಮಿಸಿದ ಆಟಗಾರ್ತಿಯರು: ಭಾರತ ಮಹಿಳಾ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾದಲ್ಲಿದೆ. ವನಿತೆಯರ ಟಿ20 ವಿಶ್ವಕಪ್ ನಡೆಯುತ್ತಿದ್ದು ಭಾರತದ ಪ್ರಮುಖ ಆಟಗಾರ್ತಿಯರು ಅಲ್ಲಿದ್ದಾರೆ. ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಬಿಡ್ ಕಾರ್ಯಕಮವನ್ನು ವೀಕ್ಷಿಸಿದ ಮಹಿಳಾ ಆಟಗಾರ್ತಿಯರು ಸಂಭ್ರಮಿಸಿದರು. ಮೊದಲ ಹರಾಜಿಗೆ ಮಂಧಾನ ಹೆಸರು ತೆಗೆದು ಕೊಳ್ಳಲಾಗಿತ್ತು. ಭಾರತ ಎಲ್ಲಾ ಆಟಗಾರ್ತಿಯರು ಮಂಧಾನ ಯಾವ ತಂಡಕ್ಕೆ ಸೇರುತ್ತಾರೆ ಎಂದು ಕುತೂಹಲದಿಂದ ಕುಳಿತು ನೋಡುತ್ತಿರುತ್ತಾರೆ. ಬೆಂಗಳೂರಿಗೆ ಮಂದಾನ ಆಯ್ಕೆ ಆಗುತ್ತಿದ್ದಂತೆ ಸಂಭ್ರಮಿಸುತ್ತಿರುವುದು ಕಾಣಬಹುದಾಗಿದೆ. ಇದನ್ನು ಟ್ವಿಟರ್ನಲ್ಲಿ ಮಹಿಳಾ ಐಪಿಎಲ್ ಹ್ಯಾಂಡಲ್ ಹಂಚಿಕೊಂಡಿದೆ.
ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್ ಹರಾಜು : ಆರ್ಸಿಬಿ ಪಾಲಾದ ಸ್ಟಾರ್ ಆಟಗಾರ್ತಿಯರು.. ಮಂದಾನ 3.40 ಕೋಟಿಗೆ ಬಿಕರ