ದುಬೈ: ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 3 ಪಂದ್ಯಗಳನ್ನು ಸರಣಿಯನ್ನು 2-1ರಲ್ಲಿ ಗೆಲ್ಲುವುದಕ್ಕೆ ನೆರವಾಗಿದ್ದರು. ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ಶ್ರೇಯಾಂಕ ಪಟ್ಟಿಯಲ್ಲಿ ಅವರ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಈಗಾಗಲೇ ಅಗ್ರಸ್ಥಾನದಲ್ಲಿರುವ ಬಾಬರ್, ಆಸೀಸ್ ವಿರುದ್ಧದ ಸರಣಿಯ ಕೊನೆಯ 2 ಪಂದ್ಯಗಳಲ್ಲಿ ಕ್ರಮವಾಗಿ 105 ಮತ್ತು 115 ರನ್ಗಳಿಸಿದ್ದರು. ಇದು ಅವರ ಏಕದಿನ ಶ್ರೇಯಾಂಕದ ರೇಟಿಂಗ್ ಅಂಕವನ್ನು 891ಕ್ಕೆ ಏರಿಕೆಯಾಗಲು ನೆರವಾಗಿತ್ತು. ಈ ಮೂಲಕ ಸಾರ್ವಕಾಲಿಕ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 15ನೇ ಸ್ಥಾನಕ್ಕೇರಿದ್ದು, ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್(887) ಅವರನ್ನು ಹಿಂದಿಕ್ಕಿದರು.
-
Did You Know?
— Huzaifa🇵🇰🥀 (@_beinghuzaifa) April 7, 2022 " class="align-text-top noRightClick twitterSection" data="
Babar Azam Cross Sachin Tendulkar In All Time ODI Ranking 💥♥️#TeamEverGreen🇵🇰 pic.twitter.com/G0ItDAG6CT
">Did You Know?
— Huzaifa🇵🇰🥀 (@_beinghuzaifa) April 7, 2022
Babar Azam Cross Sachin Tendulkar In All Time ODI Ranking 💥♥️#TeamEverGreen🇵🇰 pic.twitter.com/G0ItDAG6CTDid You Know?
— Huzaifa🇵🇰🥀 (@_beinghuzaifa) April 7, 2022
Babar Azam Cross Sachin Tendulkar In All Time ODI Ranking 💥♥️#TeamEverGreen🇵🇰 pic.twitter.com/G0ItDAG6CT
ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಸರ್ ವಿವಿಯನ್ ರಿಚರ್ಡ್ಸ್ 935 ರೇಟಿಂಗ್ ಅಂಕ ಹೊಂದಿದ್ದು ಸಾರ್ವಕಾಲಿಕ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ ಸಕ್ರಿಯ ಕ್ರಿಕೆಟಿಗರಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 6 (911) , ಬಾಬರ್ ಅಜಮ್ 15(891) ಮತ್ತು ರೋಹಿತ್ ಶರ್ಮಾ 18(885) ಹಾಗೂ ಡೇವಿಡ್ ವಾರ್ನರ್ 19(880) ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: 'ಪಾಕ್ ವಿರುದ್ಧ ಆ ಪಂದ್ಯದಲ್ಲಿ ಧೋನಿ ನನಗೆ ಚೆಂಡು ನೀಡಿದಾಗ ನಡುಕ ಶುರುವಾಗಿತ್ತು! ಆದರೆ...'