ಬ್ರಿಸ್ಬೇನ್ : ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡಗಳ ನಡುವೆ ಆರಂಭಗೊಂಡಿರುವ ಮೊದಲ ಆ್ಯಶಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಆಂಗ್ಲ ಪಡೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ನಷ್ಟಕ್ಕೆ 220 ರನ್ಗಳಿಕೆ ಮಾಡಿದ್ದು, 58 ರನ್ಗಳ ಹಿನ್ನೆಡೆಯಲ್ಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಕೇವಲ 147 ರನ್ಗಳಿಗೆ ಆಂಗ್ಲರ ಪಡೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ತಂಡ ವಾರ್ನರ್ 94 ರನ್ ಹಾಗೂ ಟ್ರಾವಿಸ್ ಹೆಡ್ ಅಬ್ಬರದ 152 ರನ್ಗಳ ಸಹಾಯದಿಂದ 425 ರನ್ಗಳಿಕೆ ಮಾಡಿತ್ತು. ಜೊತೆಗೆ 278ರನ್ಗಳ ಮುನ್ನಡೆ ಪಡೆದುಕೊಂಡಿತ್ತು.
-
Joe Root and Dawid Malan led England’s fightback in the final session of day three with an unbeaten 159-run partnership 💪#WTC23 | #AUSvENG | https://t.co/pR2hqnigau pic.twitter.com/KS8iaPfffS
— ICC (@ICC) December 10, 2021 " class="align-text-top noRightClick twitterSection" data="
">Joe Root and Dawid Malan led England’s fightback in the final session of day three with an unbeaten 159-run partnership 💪#WTC23 | #AUSvENG | https://t.co/pR2hqnigau pic.twitter.com/KS8iaPfffS
— ICC (@ICC) December 10, 2021Joe Root and Dawid Malan led England’s fightback in the final session of day three with an unbeaten 159-run partnership 💪#WTC23 | #AUSvENG | https://t.co/pR2hqnigau pic.twitter.com/KS8iaPfffS
— ICC (@ICC) December 10, 2021
ಇದೀಗ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡ ಹೊರತಾಗಿ ಕೂಡ ಡೇವಿಡ್ ಮಲನ್ ಅಜೇಯ 80ರನ್ ಹಾಗೂ ಕ್ಯಾಪ್ಟನ್ ರೂಟ್ ಅವರ ಅಜೇಯ 86 ರನ್ಗಳ ಸಹಾಯದಿಂದ 159ರನ್ಗಳ ಜೊತೆಯಾಟ ನೀಡಿದ್ದಾರೆ.
ಜೊತೆಗೆ 220ರನ್ಗಳಿಕೆ ಮಾಡಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ. ಇನ್ನು ಎರಡು ದಿನಗಳ ಆಟ ಬಾಕಿ ಇದ್ದು, ಪಂದ್ಯದಲ್ಲಿ ಡ್ರಾ ಸಾಧಿಸಿಕೊಳ್ಳುವ ಉದ್ದೇಶವಿಟ್ಟುಕೊಂಡಿರುವ ಇಂಗ್ಲೆಂಡ್ ನಾಳೆ ದಿನ ಪೂರ್ತಿಯಾಗಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿರಿ: ಟ್ರಾವಿಸ್ ಹೆಡ್ ಅಬ್ಬರದ ಶತಕ : ಆಸೀಸ್ ಹಿಡಿತದಲ್ಲಿ ಮೊದಲ ಆ್ಯಶಸ್ ಟೆಸ್ಟ್
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ 38ಕ್ಕೆ5, ಮಿಚೆಲ್ ಸ್ಟಾರ್ಕ್35ಕ್ಕೆ2, ಜೋಶ್ ಹೆಜಲ್ವುಡ್ 42ಕ್ಕೆ 2 ಹಾಗೂ ಕ್ಯಾಮೆರಾನ್ ಗ್ರೀನ್ 6ಕ್ಕೆ 1 ವಿಕೆಟ್ ಪಡೆದು ಆಂಗ್ಲರನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದರು. ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಕಮಿನ್ಸ್ ತಲಾ 1 ವಿಕೆಟ್ ಪಡೆದಿದ್ದಾರೆ.