ETV Bharat / sports

ಮಹಿಳಾ ವಿಶ್ವಕಪ್ ​: ಹೀಲಿ ಅಬ್ಬರದ ಶತಕ, ವಿಂಡೀಸ್ ಮಣಿಸಿ ಫೈನಲ್​ಗೆ ಲಗ್ಗೆಯಿಟ್ಟ ಆಸೀಸ್​ ವನಿತೆಯರು

author img

By

Published : Mar 30, 2022, 1:52 PM IST

ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ವಿಂಡೀಸ್​ ವನಿತೆಯರನ್ನು ಸೋಲಿಸಿದ ಆಸ್ಟ್ರೇಲಿಯಾವು ಫೈನಲ್​ಗೆ ತಲುಪಿದೆ. ಆಸ್ಟ್ರೇಲಿಯಾವು ಈ ಹಿಂದೆ 6 ಸಲ ಚಾಂಪಿಯನ್​ ಆಗಿದ್ದು, ಏಳನೇ ವಿಶ್ವಕಪ್​ ಕಿರೀಟದ ಮೇಲೆ ಕಣ್ಣಿಟ್ಟಿದೆ..

Australia Thrash West Indies To Reach ICC Womens Cricket World Cup Final
ಮಹಿಳಾ ವಿಶ್ವಕಪ್​: ಹೀಲಿ ಅಬ್ಬರದ ಶತಕ, ವಿಂಡೀಸ್ ಮಣಿಸಿ ಫೈನಲ್​ಗೆ ಲಗ್ಗೆಯಿಟ್ಟ ಆಸೀಸ್​ ವನಿತೆಯರು

ವೆಲ್ಲಿಂಗ್ಟನ್ : ಆರಂಭಿಕ ಆಟಗಾರ್ತಿಯರಾದ ಅಲಿಸ್ಸಾ ಹೀಲಿ(129) ಹಾಗೂ ರಾಚೆಲ್ ಹೇನ್ಸ್ (85) ಆಕರ್ಷಕ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ಮಣಿಸಿದ ಆಸ್ಟ್ರೇಲಿಯಾವು ಮಹಿಳಾ ವಿಶ್ವಕಪ್ ಟೂರ್ನಿಯ ಫೈನಲ್​ಗೆ ಲಗ್ಗೆ ಇಟ್ಟಿದೆ. ಇಲ್ಲಿನ ಬೇಸಿನ್ ರಿಸರ್ವ್ ಅಂಗಳದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ವಿಂಡೀಸ್​ ವನಿತೆಯರನ್ನು ಕಾಂಗರೂ ಪಡೆ 157 ರನ್‌ಗಳಿಂದ ಸೋಲಿಸಿದೆ.

ಮಳೆಯಿಂದ ಪಂದ್ಯವು 5 ಓವರ್​ಗಳ ಕಡಿತದೊಂದಿಗೆ ನಡೆಯಿತು. ಟಾಸ್​​ ಗೆದ್ದ ವೆಸ್ಟ್​ ಇಂಡೀಸ್​ ತಂಡವು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಆರಂಭದಿಂದಲೂ ಆರ್ಭಟಿಸಿದ ಅಲಿಸ್ಸಾ ಹೀಲಿ(129, 107 ಎಸೆತ) ಹಾಗೂ ರಾಚೆಲ್ ಹೇನ್ಸ್ (85) ಮೊದಲ ವಿಕೆಟ್​ಗೆ 216 ರನ್​ಗಳ ಭದ್ರ ಬುನಾದಿ ಹಾಕಿಕೊಟ್ಟರು. ಬಳಿ ಮೂನಿ (43) ಹಾಗೂ ಲ್ಯಾನ್ನಿಂಗ್​(26) ಅಜೇಯ ಜೊತೆಯಾಟದ ಮೂಲಕ ಆಸೀಸ್​ ವನಿತೆಯರು 45 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 305 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿದರು.

306 ರನ್​ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್​ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. 12 ರನ್​ಗೆ ರಶಾದಾ ವಿಲಿಯಮ್ಸ್(0) ರೂಪದಲ್ಲಿ ಮೊದಲ ವಿಕೆಟ್​ ಪತನವಾಯಿತು. ಬಳಿಕ ಮತ್ತೋರ್ವ ಆರಂಭಿಕ ಆಟಗಾರ್ತಿ ಡಿಯಾಂಡ್ರಾ ಡಾಟಿನ್ (34), ನಾಯಕಿ ಸ್ಟೆಫನಿ ಟೇಲರ್ (48) ಹಾಗೂ ಹೇಲಿ ಮ್ಯಾಥ್ಯೂಸ್ (34) ಕೊಂಚ ಪ್ರತಿರೋಧ ಒಡ್ಡಿದರಾದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

ಈ ಮೂವರನ್ನು ಹೊರತುಪಡಿಸಿ ಉಳಿದೆಲ್ಲ ಆಟಗಾರ್ತಿಯರು ಕನಿಷ್ಠ ಎರಡಂಕಿ ಮೊತ್ತಕ್ಕೆ ತಲುಪಲೂ ಕೂಡ ಸಾಧ್ಯವಾಗಲಿಲ್ಲ. 91 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದ ವಿಂಡೀಸ್​ ಬಳಿಕ ಪತನದ ಹಾದಿ ಹಿಡಿದು 148 ರನ್​ಗೆ ಆಲೌಟ್​ ಆಯಿತು. ಈ ಮೂಲಕ 157 ರನ್‌ ಅಂತರದ ಗೆಲುವಿನೊಂದಿಗೆ ಆಸ್ಟ್ರೇಲಿಯಾವು ಮಹಿಳಾ ವಿಶ್ವಕಪ್ ಟೂರ್ನಿಯ ಫೈನಲ್​ ಪ್ರವೇಶಿಸಿದೆ.

ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ನಾಳೆ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್​ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ಭಾನುವಾರ ಏ. 3ರಂದು ನಡೆಯಲಿರುವ ಫೈನಲ್​ನಲ್ಲಿ ಆಸೀಸ್​ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದೆ. ಆಸ್ಟ್ರೇಲಿಯಾವು ಈ ಹಿಂದೆ 6 ಸಲ ಚಾಂಪಿಯನ್​ ಆಗಿದ್ದು, ಏಳನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಇದುವರೆಗಿನ 12 ವಿಶ್ವಕಪ್​ ಟೂರ್ನಿಗಳಲ್ಲಿ 9ನೇ ಬಾರಿಗೆ ಫೈನಲ್​ ತಲುಪಿದೆ.

ಇದನ್ನೂ ಓದಿ: Ipl 2022: ಆರ್​ಸಿಬಿಗೆ ನೈಟ್​ ರೈಡರ್ಸ್​ ಚಾಲೆಂಜ್​.. ಗೆಲುವಿಗಾಗಿ ಡುಪ್ಲೆಸಿಸ್ ಪಡೆ ಹೋರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.