ಬ್ರಿಸ್ಬೇನ್: ಆಸ್ಟ್ರೇಲಿಯಾ ತಂಡ ಸಂಘಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿ ಮೊದಲ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
3ನೇ ದಿನ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡು 220 ರನ್ಗಳಿಸಿದ್ದ ಇಂಗ್ಲೆಂಡ್ ಕೇವಲ 58 ರನ್ಗಳ ಹಿನ್ನಡೆಯನುಭವಿಸಿತ್ತು. ನಾಯಕ ಜೋ ರೂಟ್ ಮತ್ತು ಡೇವಿಡ್ ಮಲನ್ ಕ್ರಮವಾಗಿ 86 ಮತ್ತು 80 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದರು.
ನಿನ್ನೆಯ ಮೊತ್ತಕ್ಕೆ 77 ರನ್ ಸೇರಿಸಿ ಆಲೌಟ್..
220 ರನ್ಗಳೊಂದಿಗೆ 4ನೇ ದಿನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 297ಕ್ಕೆ ಅಲೌಟ್ ಆಯಿತು. ರೂಟ್ ಮತ್ತು ಡೇವಿಡ್ ಮಲನ್ ನಿನ್ನೆಯ ಮತ್ತಕ್ಕೆ 9 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಮಲನ್(82) ರನ್ಗಳಿಸಿ ನೇಥನ್ ಲಿಯಾನ್ಗೆ ವಿಕೆಟ್ ನೀಡಿದರೆ, ರೂಟ್ 89 ರನ್ಗಳಿಸಿ ಕ್ಯಾಮರಾನ್ ಗ್ರೀನ್ ಬೌಲಿಂಗ್ನಲ್ಲಿ ಕೀಪರ್ ಕ್ಯಾರಿಗೆ ವಿಕೆಟ್ ನೀಡಿದರು.
ಈ ಜೋಡಿ ಬೇರ್ಪಡುತ್ತಿದ್ದಂತೆ ಇಂಗ್ಲೆಂಡ್ ಪೆವಿಲಿಯನ್ ಪರೇಡ್ ನಡೆಸಿತು. ಬೆನ್ ಸ್ಟೋಕ್ಸ್(14), ಒಲ್ಲಿ ಪೋಪ್(4), ಜೋಶ್ ಬಟ್ಲರ್(23), ಕ್ರಿಸ್ ವೋಕ್ಸ್(16), ಒಲ್ಲಿ ರಾಬಿನ್ಸನ್(8) ಮತ್ತಯ ಮಾರ್ಕ್ವುಡ್(6) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಾರದೆ ಹೋದರು.
-
Australia draw first blood in the #Ashes series with an emphatic nine-wicket victory!#AUSvENG | #WTC23 pic.twitter.com/waKIiE9315
— ICC (@ICC) December 11, 2021 " class="align-text-top noRightClick twitterSection" data="
">Australia draw first blood in the #Ashes series with an emphatic nine-wicket victory!#AUSvENG | #WTC23 pic.twitter.com/waKIiE9315
— ICC (@ICC) December 11, 2021Australia draw first blood in the #Ashes series with an emphatic nine-wicket victory!#AUSvENG | #WTC23 pic.twitter.com/waKIiE9315
— ICC (@ICC) December 11, 2021
ಅನುಭವಿ ಬೌಲರ್ ನೇಥನ್ ಲಿಯಾನ್ 91ಕ್ಕೆ 4, ಕ್ರಿಸ್ ಗ್ರೀನ್ 23ಕ್ಕೆ2, ಪ್ಯಾಟ್ ಕಮಿನ್ಸ್ 51ಕ್ಕೆ 2 ಹಾಗೂ ಹೆಜಲ್ವುಡ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ಇಂಗ್ಲೆಂಡ್ 297 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾಕ್ಕೆ ಕೇವಲ 20 ರನ್ಗಳ ಗುರಿ ನೀಡಿತ್ತು: ಈ ಮೊತ್ತವನ್ನು ಅತಿಥೇಯ ತಂಡ ಕೇವಲ 5.1 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು. ಕ್ಯಾರಿ 9 ರನ್ಗಳಿಸಿ ಔಟಾದರೆ, ಮಾರ್ಕಸ್ ಹ್ಯಾರೀಸ್ ಅಜೇಯ 9 ರನ್ಗಳಿಸಿ ಗೆಲುವು ತಂದುಕೊಟ್ಟರು.
-
Australia started their #WTC23 campaign with a win 💪#AUSvENG | #Ashes pic.twitter.com/fjxExBtYcP
— ICC (@ICC) December 11, 2021 " class="align-text-top noRightClick twitterSection" data="
">Australia started their #WTC23 campaign with a win 💪#AUSvENG | #Ashes pic.twitter.com/fjxExBtYcP
— ICC (@ICC) December 11, 2021Australia started their #WTC23 campaign with a win 💪#AUSvENG | #Ashes pic.twitter.com/fjxExBtYcP
— ICC (@ICC) December 11, 2021
ಇದಕ್ಕೂ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 147 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಟ್ರಾವಿಸ್ ಹೆಡ್(152) ಭರ್ಜರಿ ಶತಕದ ನೆರವಿನಿಂದ ಆಸೀಸ್ 425 ರನ್ಗಳಿಸಿ 278 ರನ್ಗಳ ಮುನ್ನಡೆ ಸಾಧಿಸಿತ್ತು.
ಇದನ್ನೂ ಓದಿ:ODI ನಾಯಕತ್ವ ಒಲಿಯುತ್ತಿದ್ದಂತೆ 10 ವರ್ಷದ ಹಿಂದೆ ರೋಹಿತ್ ಮಾಡಿದ್ದ ಟ್ವೀಟ್ ವೈರಲ್