ಸಿಡ್ನಿ ( ಆಸ್ಟ್ರೇಲಿಯಾ): ಭಾರತದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಆಸ್ಟ್ರೇಲಿಯಾ ಕ್ರಿಕೆಟರ್ಗಳು ಬೆಂಬಲಕ್ಕೆ ನಿಂತಿದ್ದು, ಕೋವಿಡ್ ಪರಿಹಾರ ನಿಧಿಗಾಗಿ ಹಣ ಸಂಗ್ರಹಿಸಲು ಮುಂದಾಗಿದ್ದಾರೆ. ಸುಮಾರು 1 ಲಕ್ಷ ಡಾಲರ್ ಪರಿಹಾರ ಸಂಗ್ರಹಿಸಲು ಮುಂದಾಗಿದ್ದು, ಈ ಹಣವನ್ನು ಯುನಿಸೆಫ್ ಮೂಲಕ ಭಾರತ ಕೋವಿಡ್-19 ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
ಬೌಲರ್ಗಳಾದ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ನಾಥನ್ ಲಿಯಾನ್ ಅವರು ನೇರಪ್ರಸಾರದಲ್ಲಿ ಭಾಗಿಯಾಗಲಿದ್ದು, ಕ್ರಿಕೆಟ್ ವಿಡಿಯೋ ಗೇಮ್ ಕುರಿತು ಮಾತನಾಡುತ್ತಾರೆ. ಅಲ್ಲದೇ ವಿಡಿಯೋ ಗೇಮ್ ಮೂಲಕ ಹಣ ಸಂಗ್ರಹಕ್ಕೆ ಮನವಿ ಮಾಡಲಿದ್ದಾರೆ. ಇವರಲ್ಲದೇ ಈ ಅಭಿಯಾನ ಆರಂಭಿಸಿದ್ದ ದೇಶೀಯ ಕ್ರಿಕೆಟಿಗ ಜೋಶ್ ಲಾಲೊರ್ ಸಹ ಭಾಗಿಯಾಗಲಿದ್ದಾರೆ.
ಇವರಲ್ಲದೇ ಮೊಯಿಸಸ್ ಹೆನ್ರಿಕ್, ಮಹಿಳಾ ಕ್ರಿಕೆಟರ್ಗಳಾದ ಅಲಿಸಾ ಹೀಲಿ ಮತ್ತು ದಕ್ಷಿಣ ಆಫ್ರೀಕಾದ ರಿಲೀ ರುಸ್ಸೌ ಈ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ. ಅವರ ಪ್ರಕಾರ ಪ್ಯಾಟ್ ಕಮ್ಮಿನ್ಸ್ ಮೈದಾನದಲ್ಲಿ ಒಂದೊಳ್ಳೆ ಪ್ರದರ್ಶನ ನೀಡುವಂತಹ ಆಟಗಾರನಂತೆ. ಆದರೆ, ವಿಡಿಯೋ ಗೇಮ್ ವಿಚಾರದಲ್ಲಿ ಕಮ್ಮಿನ್ಸ್ ಜೊತೆ ಯಾರು ಬೇಕಾದರೂ ಆಡಿ ಗೆಲ್ಲಬಹುದಂತೆ.
ಇದನ್ನೂ ಓದಿ: ನ್ಯೂಜಿಲ್ಯಾಂಡ್-ಇಂಗ್ಲೆಂಡ್ ಮೊದಲ ಟೆಸ್ಟ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಲಿಯಮ್ಸನ್ ಪಡೆ