ಮುಲ್ತಾನ್ (ಪಾಕಿಸ್ತಾನ) : ಏಷ್ಯಾಕಪ್ 2023ರ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕಿಸ್ತಾನ 238 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಿ ಪಾಕ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕಿಸ್ತಾನ ನೀಡಿದ್ದ 342 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಕ್ರಿಕೆಟ್ ಶಿಶು ನೇಪಾಳ, 104 ರನ್‌ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಆಟಗಾರರಾದ ಫಕರ್ ಜಮನ್ ಮತ್ತು ಇಮಾಮ್ ಉಲ್ ಹಕ್ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಪರೇಡ್ ನಡೆಸಿದರು. ಫಕರ್ 14 ರನ್ ಗಳಿಸಿ ಕರನ್ ಅವರಿಗೆ ವಿಕೆಟ್ ಒಪ್ಪಿಸಿದರೆ, ಇಮಾಮ್ ಉಲ್ ಹಕ್ 5 ರನ್ ಗಳಿಸಿ ರನೌಟ್ ಆದರು.
-
Babar Azam and Iftikhar Ahmed both scored centuries, while Shadab took 4 wickets as Pakistan outshone Nepal by a margin of 238 runs.
— AsianCricketCouncil (@ACCMedia1) August 30, 2023 " class="align-text-top noRightClick twitterSection" data="
The Men in Green have made a remarkable start in this edition of the Asia Cup 🇵🇰 #AsiaCup2023 #PAKvNEP pic.twitter.com/8YLyZlnBQw
">Babar Azam and Iftikhar Ahmed both scored centuries, while Shadab took 4 wickets as Pakistan outshone Nepal by a margin of 238 runs.
— AsianCricketCouncil (@ACCMedia1) August 30, 2023
The Men in Green have made a remarkable start in this edition of the Asia Cup 🇵🇰 #AsiaCup2023 #PAKvNEP pic.twitter.com/8YLyZlnBQwBabar Azam and Iftikhar Ahmed both scored centuries, while Shadab took 4 wickets as Pakistan outshone Nepal by a margin of 238 runs.
— AsianCricketCouncil (@ACCMedia1) August 30, 2023
The Men in Green have made a remarkable start in this edition of the Asia Cup 🇵🇰 #AsiaCup2023 #PAKvNEP pic.twitter.com/8YLyZlnBQw
ಬಳಿಕ ಬಂದ ಸ್ಪೋಟಕ ಬ್ಯಾಟರ್ ಬಾಬರ್ ಆಜಮ್ ಪಾಕಿಸ್ತಾನವು ಗರಿಷ್ಟ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಜಂ 131 ಎಸೆತದಲ್ಲಿ 4 ಸಿಕ್ಸರ್ ಹಾಗೂ 14 ಬೌಂಡರಿಗಳ ಸಹಾಯದಿಂದ 151 ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ರಿಜ್ವಾನ್ 44 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈಫ್ತಿಕಾರ್ ಅಹ್ಮದ್ 71 ಎಸೆತದಲ್ಲಿ 4 ಸಿಕ್ಸರ್ ಮತ್ತು 11 ಬೌಂಡರಿ ಸಹಾಯದಿಂದ 109 ರನ್ ಗಳಿಸಿದರು. ಈ ಮೂಲಕ ಪಾಕಿಸ್ತಾನ ತಂಡವು 6 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸಿತು. ನೇಪಾಳ ಪರ ಸೋಮ್ಪಾಲ್ ಕಾಮಿ 85/2 , ಕರಣ್ ಕೆಸಿ ಮತ್ತು ಸಂದೀಪ್ ತಲಾ 1 ವಿಕೆಟ್ ಪಡೆದರು.
ಬಳಿಕ ಬ್ಯಾಟಿಂಗ್ ನಡೆಸಿದ ನೇಪಾಳ, 104 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಪಾಕಿಸ್ತಾನಕ್ಕೆ ಶರಣಾಯಿತು. ಆರೀಫ್ ಶೇಖ್ 26 ರನ್, ಸೋಮ್ಪಾಲ್ ಕಾಮಿ 28 ರನ್, ಗುಲ್ಷನ್ ಝಾ 13 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರನೂ ಒಂದಂಕಿ ಸ್ಕೋರ್ ದಾಟಲಿಲ್ಲ. ಈ ಮೂಲಕ ಪಾಕಿಸ್ತಾನವು 238 ರನ್‌ಗಳ ಗೆಲುವು ಸಾಧಿಸಿತು.
ಪಾಕಿಸ್ತಾನ ಪರ, ಶದಾಬ್ ಖಾನ್ 27/4 ವಿಕೆಟ್ ಪಡೆದು ಮಿಂಚಿದರು. ಶಾಹೀನ್ ಅಫ್ರಿದಿ 27/2, ಹ್ಯಾರಿಸ್ ರೌಫ್ 16/2, ನಸೀಮ್ ಶಾ ಮತ್ತು ಮೊಹಮ್ಮದ್ ನವಾಝ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ : ಏಷ್ಯಾಕಪ್: ಬಾಬರ್, ಇಫ್ತಿಕರ್ ಶತಕದಾಟ; ಪಾಕಿಸ್ತಾನ ನೀಡಿದ ಈ ಗುರಿ ಸಾಧಿಸುವುದೇ ನೇಪಾಳ?